Advertisement

ಪಾಸ್‌ಪೋರ್ಟ್‌ಗಿನ್ನು ಜನನ ಪ್ರಮಾಣ ಪತ್ರ ಕಡ್ಡಾಯವಿಲ್ಲ

06:30 AM Jul 26, 2017 | Team Udayavani |

ನವದೆಹಲಿ: ಪಾಸ್‌ಪೋರ್ಟ್‌ ಪಡೆಯಲು ಇನ್ನು ಜನನ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ. ಜನ್ಮದಿನದ ದೃಢೀಕರಣಕ್ಕಾಗಿ ಆಧಾರ್‌ ಅಥವಾ ಪ್ಯಾನ್‌ ಕಾರ್ಡ್‌ ನೀಡಿದರೂ ಸಾಕು ಎಂದು ಸರ್ಕಾರ ತಿಳಿಸಿದೆ. 1980ರ ಪಾಸ್‌ಪೋರ್ಟ್‌ ನೀತಿ ಪ್ರಕಾರ 26/1/1989ರ ಬಳಿಕ ಹುಟ್ಟಿದವರು ಪಾನ್ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ತಮ್ಮ ಜನನ ದಿನಾಂಕ ದೃಢೀಕರಣಕ್ಕಾಗಿ ಜನನ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಆದರೆ ಇನ್ನು ಮುಂದೆ ಜನ್ಮ ದಿನಾಂಕ ದೃಢಪಟ್ಟಿರುವ ಪ್ಯಾನ್‌ ಕಾರ್ಡ್‌, ಮೆಟ್ರಿಕ್ಯುಲೇಷನ್‌ ಪ್ರಮಾಣ ಪತ್ರ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಎಲ್‌ಐಸಿ ಪಾಲಿಸಿ ಬಾಂಡ್‌ಗಳನ್ನು ಸಲ್ಲಿಸಿದರೂ ಸಾಕು ಎಂದು ಸರ್ಕಾರ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next