Advertisement

ಜನನ ಪ್ರಮಾಣಪತ್ರ ಮನೆ ಬಾಗಿಲಿಗೆ: ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಚಾಲನೆ

03:14 AM Apr 07, 2022 | Team Udayavani |

ಮಂಗಳೂರು: ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗವು ಮಂಗಳೂರಿನ ಲೇಡಿಗೋಷನ್‌ ಸರಕಾರಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸ್ಪೀಡ್‌ ಪೋಸ್ಟ್‌ ಮೂಲಕ ಜನನ ಪ್ರಮಾಣ ಪತ್ರಗಳನ್ನು ಮನೆಬಾಗಿಲಿಗೆ ತಲುಪಿಸುವ ಸೇವೆಯನ್ನು ಮಂಗಳೂರಿನ ಲೇಡಿಗೋಷನ್‌ ಸರಕಾರಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ.

Advertisement

ಮಂಗಳೂರು ಮನಪಾದಲ್ಲಿ ಈ ಸೇವೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಲೇಡಿಗೋಷನ್‌ ಸರಕಾರಿ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು ಸುಮಾರು 400ರಿಂದ 600 ಶಿಶು ಜನನ ವಾಗುತ್ತಿದ್ದು, ಕರ್ನಾಟಕದ ಸುಮಾರು 9 ಜಿಲ್ಲೆ ಮತ್ತು ಕೇರಳದ 3 ಜಿಲ್ಲೆಯ ನಾಗರಿಕರು ಈ ಆಸ್ಪತ್ರೆಯ ಸೇವೆಯನ್ನು ಪಡೆಯುತ್ತಿದ್ದಾರೆ.

ಪ್ರಸ್ತುತ ವ್ಯವಸ್ಥೆಯಲ್ಲಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ನಡೆಯುವ ಜನನಗಳಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಲೇಡಿ ಗೋಷನ್‌ ಆಸ್ಪತ್ರೆಯಲ್ಲೇ ನೀಡಲಾಗುತ್ತಿದೆ. ಇವುಗಳನ್ನು ಪಡೆಯಲು ಅರ್ಜಿದಾರರು ಎರಡು ಬಾರಿ ಲೇಡಿಗೋಷನ್‌ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಈ ಪ್ರಸ್ತುತ ಕಾರ್ಯವಿಧಾನದಲ್ಲಿ ಸಾಮಾನ್ಯ ಜನರಿಗೆ ಅನಾನುಕೂಲಗಳು ಹಲವು. ಈ ತೊಡಕನ್ನು ನಿವಾರಿಸಲಿದೆ.

ಇದನ್ನೂ ಓದಿ:ದೇರಳಕಟ್ಟೆ: ಡಿವೈಡರ್ ಏರಿ ಬೈಕ್ ಗೆ ಗುದ್ದಿದ ಕಾರು; ಮೂರು ದಾರಿದೀಪಗಳಿಗೂ ಹಾನಿ

ಈ ಸೇವೆಯಡಿ ಜನನ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿ ದಾರರಿಗೆ 2 ಆಯ್ಕೆಗಳನ್ನು ನೀಡಲಾಗುತ್ತದೆ. ಅರ್ಜಿದಾರರು ಖುದ್ದಾಗಿ ಲೇಡಿಗೋಷನ್‌ ಸರಕಾರಿ ಆಸ್ಪತ್ರೆಗೆ ಮತ್ತೂಮ್ಮೆ ಭೇಟಿ ನೀಡಿ ಈ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ಅಥವಾ ಸ್ಪೀಡ್‌ ಪೋಸ್ಟ್‌ ಮೂಲಕ ಪ್ರಮಾಣಪತ್ರವನ್ನು ಮನೆಬಾಗಿಲಲ್ಲಿ ಪಡೆದುಕೊಳ್ಳಬಹುದು. ಆಗ ಹೆಚ್ಚುವರಿ ಅರ್ಜಿಯೊಂದನ್ನು ಭರ್ತಿ ಮಾಡಿ ಕೌಂಟರ್‌ನಲ್ಲಿ ನೀಡಬೇಕು.

Advertisement

ಈ ಅರ್ಜಿಯು ಸರಳವಾಗಿದ್ದು, ಕೇವಲ ಬಟವಾಡೆಯಾಗಬೇಕಾಗಿರುವ ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ಭರ್ತಿ ಮಾಡಬೇಕು.

100 ರೂ.ಗಳನ್ನು ಬಟವಾಡೆ ಮಾಡುವ ಸಂದರ್ಭದಲ್ಲಿ ಪೋಸ್ಟ್‌ ಮ್ಯಾನ್‌ಗೆ ನೀಡಲು ತಮ್ಮ ಸಮ್ಮತಿ ಇದೆ ಎಂದು ಸಹಿ ಮಾಡಬೇಕು. ಪ್ರಮಾಣಪತ್ರವು ಮುದ್ರಣಗೊಂಡ ಬಳಿಕ ಅಂಚೆ ಇಲಾಖೆಯು ಈ ಜನನ ಪ್ರಮಾಣಪತ್ರವನ್ನು ಸ್ಪೀಡ್‌ ಪೋಸ್ಟ್‌ ಮೂಲಕ ಅರ್ಜಿದಾರರ ಮನೆಗೆ ಬಟವಾಡೆ ಮಾಡುವುದು.

 

Advertisement

Udayavani is now on Telegram. Click here to join our channel and stay updated with the latest news.

Next