ಪಿರಿಯಾಪಟ್ಟಣ: ಗಿರಿಜನ ವಸತಿ ಶಾಲೆಗಳ ಹೆಸರನ್ನು ತೆಗೆಯುವುದಾದರೆ ಬಿರ್ಸಾ ಮುಂಡಾ ಹೆಸರಿಡಲಿ ಬೇರೆ ಹೆಸರಿಟ್ಟರೆ ವಿಧಾನಸೌಧದ ಎದುರು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಆದಿವಾಸಿ ಮುಖಂಡ ಚಂದ್ರು ಎಚ್ಚರಿಕೆ ನೀಡಿದರು.
ತಾಲೂಕಿನ ರಾಜೀವ್ ಗ್ರಾಮದಲ್ಲಿನ ಆಶ್ರಮ ವಸತಿ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ಆದಿವಾಸಿ ಮುಖಂಡರುಗಳು ಏರ್ಪಡಿಸಿದ್ದ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾರ್ಖಂಡ್ ನಲ್ಲಿ ಜನಿಸಿದ ಬಿರ್ಸಾ ಮುಂಡಾ ರವರು ಆದಿವಾಸಿಗಳಿಗೆ ಜಾಗೃತಿಯನ್ನು ಮೂಡಿಸಿದ ಮೊದಲ ವ್ಯಕ್ತಿಯಾಗಿದ್ದು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಎಲ್ಲಾ ವಸತಿ ಗಿರಿಜನ ಆಶ್ರಮ ಶಾಲೆಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಬಿರ್ಸಾ ಮುಂಡಾ ರವರ ಫೋಟೋ ಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಆದಿವಾಸಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಏರ್ಪಡಿಸಲಾಗಿತ್ತು. ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆ ತಾಲೂಕು ಮುಖಂಡ ಎಚ್ ಡಿ ರಮೇಶ್, ಆದಿವಾಸಿ ಮುಖಂಡರಾದ ಜೆಟಿ ರಾಜಪ್ಪ, ಎಂಎನ್ ಮಧುಕುಮಾರ್, ಬಸವಣ್ಣ ನರಾಳಪುರ, ಬಸಪ್ಪ ಲಿಂಗಪುರ, ಜೆಡಿ ಜಯಪ್ಪ, ಜಾನಕಮ್ಮ, ಗ್ರಾಪಂ ಸದಸ್ಯರಾದ ಅಯ್ಯಪ್ಪ, ರಾಜು, ಕುಸುಮ ಸೇರಿದಂತೆ ಮತ್ತಿತರರು ಹಾಜರಿದ್ದರು.
ನಡೆದ ಬೀರ್ಸಾಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಆದಿವಾಸಿ ಜನಾಂಗದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು.