Advertisement

ಹಕ್ಕಿ ಜ್ವರ ಮನುಷ್ಯನಿಗೆ ಹೇಗೆ ಹರಡುತ್ತದೆ?

01:46 AM Jan 10, 2021 | Team Udayavani |

ದೇಶಾದ್ಯಂತ ಭೀತಿ ಮೂಡಿಸಿರುವ ಹಕ್ಕಿ ಜ್ವರವು ಕೆಲವೊಂದು ಸಂದರ್ಭಗಳಲ್ಲಿ ಮನುಷ್ಯನಿಗೂ ಹರಡುತ್ತದೆ. ಸೋಂಕಿತ ಹಕ್ಕಿಗಳೊಂದಿಗೆ ಸಂಪರ್ಕ, ಅರೆಬೆಂದ ಆಹಾರ ಸೇವನೆಯಿಂದ ಮನುಷ್ಯನೂ ಈ ಜ್ವರಕ್ಕೆ ತುತ್ತಾಗುತ್ತಾನೆ. ಪಕ್ಷಿಯಿಂದ ಮನುಷ್ಯನಿಗೆ ಸೋಂಕು ವ್ಯಾಪಿಸುವ ಕುರಿತ ಮಾಹಿತಿ ಇಲ್ಲಿದೆ.

  • ಸೋಂಕಿತ ಪಕ್ಷಿಯ ಜೊಲ್ಲು, ಸಿಂಬಳ ಮತ್ತು ಹಿಕ್ಕೆಯಲ್ಲಿ ವೈರಸ್‌ ಇರುತ್ತದೆ.
  • ಸೋಂಕಿತ ಪಕ್ಷಿಯನ್ನು ಮುಟ್ಟುವುದರಿಂದ, ಅವುಗಳ ಕಣ್ಣು, ಮೂಗು, ಬಾಯಿ ಸ್ಪರ್ಶಿಸುವುದರಿಂದ ಮಾನವನಿಗೆ ಸೋಂಕು ತಗಲಬಹುದು.
Advertisement

ಅತ್ಯಧಿಕ ರಿಸ್ಕ್ ಯಾರಿಗೆ? :

  • 2 ವರ್ಷದೊಳಗಿನ ಮಕ್ಕಳು ಮತ್ತು 65 ದಾಟಿದ ಹಿರಿಯ ನಾಗರಿಕರು.
  • ಹಲವು ಕಾಯಿಲೆಗಳಿಂದ ಬಳಲುತ್ತಿರುವವರು.
  • ಗರ್ಭಿಣಿಯರು ಮತ್ತು ಬಾಣಂತಿಯರು.

ಸುರಕ್ಷತೆ ಹೇಗೆ? :

  • ಸೋಂಕಿತ ಪಕ್ಷಿಗಳೊಂದಿಗೆ ನೇರ ಸಂಪರ್ಕಕ್ಕೆ ಬರದೇ ಇರುವುದು.
  • ಬೇಯಿಸದೇ ಇರುವ ಅಥವಾ ಅರೆಬೆಂದ ಮೊಟ್ಟೆ, ಕೋಳಿ ತಿನ್ನದಿರುವುದು.
  • ಮೊಟ್ಟೆ, ಕೋಳಿಯನ್ನು ಹೆಚ್ಚು ತಾಪಮಾನದಲ್ಲಿಟ್ಟು ಬೇಯಿಸುವುದು.
  • ಸೋಂಕಿತ ಪಕ್ಷಿ ಜತೆ ನೇರ ಸಂಪರ್ಕಕ್ಕೆ ಬಂದರೆ, ಇನ್‌ಫ್ಲ್ಯುಯೆನಾl ಆ್ಯಂಟಿ ವೈರಲ್‌ ಔಷಧ ಸೇವಿಸುವುದು.

ಯಾವುದೇ ಮೇಲ್ಮೆ„ ಮೇಲೆ ಪಕ್ಷಿ ಹಿಕ್ಕೆ ಹಾಕಿ, ಆದನ್ನು ನಾವು ಮುಟ್ಟುವುದರಿಂದಲೂ ಹರಡುತ್ತದೆ.ಸೋಂಕಿತ ಹಕ್ಕಿಯು ತನ್ನ ರೆಕ್ಕೆ ಬಡಿದಾಗ ಹೊರಬೀಳುವ ಧೂಳು ಹಾಗೂ ಹನಿಯಿಂದ ವೈರಸ್‌ ಗಾಳಿಗೆಸೇರ್ಪಡೆಯಾಗುತ್ತದೆ. ಆ ಗಾಳಿಯನ್ನು ಸೇವಿಸುವುದರಿಂದ ಮನುಷ್ಯರಿಗೆ ಸೋಂಕು ಹಬ್ಬುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next