ಆಹಾರವನ್ನು ಅರಸಿಕೊಂಡು ಪೇಟೆ, ವಸತಿ ಪ್ರದೇಶಗಳತ್ತ ಆಗಮಿಸಿದ್ದ ಈ ನವಿಲು ಹೆದ್ದಾರಿಯನ್ನು ದಾಟುವ ಸಂದರ್ಭದಲ್ಲಿ ಯಾವುದೋ ವಾಹನವು ಢಿಕ್ಕಿ ಹೊಡೆದಿದೆ.
Advertisement
ಮಾಹಿತಿಯನ್ನು ಅರಿತ ಅರಣ್ಯ ರಕ್ಷಕರು ಸ್ಥಳಕ್ಕಾಗಮಿಸಿ ನವಿಲನ್ನು ಚಿಕಿತ್ಸೆಗಾಗಿ ಕಾಪುವಿನ ಪಶುವೈದ್ಯಾಧಿಕಾರಿ ಅವರಲ್ಲಿ ಕೊಂಡೊಯ್ದಿದ್ದು, ಪರಿಶೀಲನೆ ನಡೆಸಿದ ವೈದ್ಯರು ವಯಸ್ಸಾದ ನವಿಲು ಮತ್ತು ಹೆಚ್ಚು ಪೆಟ್ಟಾಗಿರುವುದರಿಂದ ಅದು ಬದುಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ರಾಷ್ಟ್ರ ಪಕ್ಷಿಯ ಕಳೇಬರವನ್ನು ಸುಡಲಾಯಿತು ಎಂದು ಅರಣ್ಯ ರಕ್ಷಕರು ಮಾಹಿತಿಯನ್ನು ನೀಡಿದ್ದಾರೆ.