Advertisement

Kerala Bird flu: ರಾಜ್ಯದಲ್ಲಿ ಆತಂಕ; ಆಲಪ್ಪುಳದ 2 ಗ್ರಾಮಗಳಲ್ಲಿ ಬಾತುಕೋಳಿಗಳಿಗೆ ಸೋಂಕು

11:50 PM Apr 21, 2024 | Team Udayavani |

ತಿರುವನಂತಪುರ: ಕೇರಳದಲ್ಲಿ ಎಚ್‌5ಎನ್‌1 ಹಕ್ಕಿಜ್ವರದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಲಪ್ಪುಳ ಜಿಲ್ಲೆಯ 2 ಗ್ರಾಮಗಳಲ್ಲಿ ಮತ್ತಷ್ಟು ಬಾತುಕೋಳಿಗಳು ಸೋಂಕಿಗೆತುತ್ತಾಗಿವೆ. ಅವುಗಳಿಂದ ಮನುಷ್ಯ ರಿಗೂ ಸೋಂಕು ಹರಡುವ ಸಾಧ್ಯತೆ ಗಳಿರುವ ಹಿನ್ನೆಲೆಯಲ್ಲಿ ಹಕ್ಕಿಜ್ವರದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೇರಳ ಆರೋಗ್ಯ ಸಚಿವಾ ಲಯ ಸಚಿವಾಲಯ ಮುಂದಾಗಿದೆ.

Advertisement

ಈಗಾಗಲೇ ಹಕ್ಕಿಜ್ವರದ ಸೋಂಕಿಗೆ ತುತ್ತಾಗಿರುವ 17 ಸಾವಿರಕ್ಕೂ ಅಧಿಕ ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಸಮಿತಿ ಗಳನ್ನು ರಚಿಸಿ ಕೋಳಿ ಸಾಕಣೆದಾರರಿಗೆ ಹಕ್ಕಿ ಜ್ವರದ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ. ಜನರಿಗೂ ಹಕ್ಕಿ ಜ್ವರದ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ರೋಗ ಲಕ್ಷಣಗಳು ವರದಿಯಾದರೆತತ್‌ಕ್ಷಣವೇ ಆಸ್ಪತ್ರೆಗಳಿಗೆ ತೆರಳಲು ಸೂಚಿಸಲಾಗಿದೆ.

ತ. ನಾಡು ಕಣ್ಗಾವಲು
ತಮಿಳುನಾಡು ಕೂಡ ಈ ಬಗ್ಗೆ ಮುಂಜಾಗ್ರತೆ ಕೈಗೊಂಡಿದೆ. ಕೇರಳ ಗಡಿಯ ಎಲ್ಲ 12 ಚೆಕ್‌ಪೋಸ್ಟ್‌ ಗಳಲ್ಲಿ ಕಣ್ಗಾವಲು ಹೆಚ್ಚಿಸಿದೆ. ಅಧಿಕಾರಿಗಳು ಮಾಹಿತಿ ನೀಡಿ ಕೇರಳದಿಂದ ಕೋಳಿ, ಬಾತುಕೋಳಿಗಳನ್ನು ಸಾಗಿಸುವ ವಾಹನ ಗಡಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next