ಕೊಟ್ಟಾಯಂ: ಹಲವು ರಾಜ್ಯಗಳಲ್ಲಿ ಆತಂಕ ಮೂಡಿಸಿರುವ ಹಕ್ಕಿ ಜ್ವರ ಈಗ ಕೇರಳವನ್ನೂ ಪ್ರವೇಶಿಸಿದ್ದು, ಕೊಟ್ಟಾಯಂ ಮತ್ತು ಅಳಪ್ಪುಳ ಜಿಲ್ಲೆಗಳ ಬಾತುಕೋಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕೊಟ್ಟಾಯಂನ ನೀಂದೂರ್‌ನಲ್ಲಿರುವ ಬಾತುಕೋಳಿ ಫಾರಂ ಒಂದರಲ್ಲಿ ಎಚ್5 ಎನ್8 ವೈರಸ್ ಸೋಂಕಿನಿಂದ ಸುಮಾರು 1,500ರಷ್ಟು ಬಾತುಕೋಳಿಗಳು ಸತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಎಲ್ಲ ಬಾತುಕೋಳಿಗಳು, ಕೋಳಿಗಳು ಮತ್ತು ಇತರ ಸಾಕು ಹಕ್ಕಿಗಳನ್ನು ಕೊಲ್ಲಲು ಸ್ಥಳೀಯಾಡಳಿತ ನಿರ್ಧರಿಸಿದೆ.
ಅಳಪ್ಪುಳದಲ್ಲೂ ಇಂಥದ್ದೇ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಲ್ಲ ಜಿಲ್ಲೆಗಳಿಗೂ ಅಲರ್ಟ್ ಘೋಷಿಸಲಾಗಿದೆ. ವೈರಸ್ ಪ್ರಸಾರಕ್ಕೆ ಕಡಿವಾಣ ಹಾಕಲು ಸುಮಾರು 40 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳನ್ನು ಕೊಲ್ಲಬೇಕಾಗುತ್ತದೆ ಎಂದು ರಾಜ್ಯ ಪಶುಸಂಗೋಪನ ಸಚಿವ ರಾಜು ಹೇಳಿದ್ದಾರೆ.
ವೈರಸ್ ಮನುಷ್ಯರಿಗೂ ಹರಡುವ ಅಪಾಯ ಇದ್ದು, ಕಾಸರಗೋಡು ಸಹಿತ ಎಲ್ಲ ಜಿಲ್ಲೆಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Advertisement