Advertisement

ಹಕ್ಕಿ ಜ್ವರ ಭೀತಿ: ಗಡಿಯಲ್ಲಿ ಹೈಅಲರ್ಟ್‌; ಕೇರಳದಲ್ಲಿ ಪರಿಸ್ಥಿತಿ ಗಂಭೀರ

12:09 AM Jan 06, 2021 | Team Udayavani |

ಬೆಂಗಳೂರು/ಹೊಸದಿಲ್ಲಿ: ಕೇರಳದಲ್ಲಿ ಹಕ್ಕಿಜ್ವರವು ಭಾರೀ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಗಳಲ್ಲೂ ಹೈ ಅಲರ್ಟ್‌ ಘೋಷಣೆ ಮಾಡಿ, ಇತರ ಎಲ್ಲ ಜಿಲ್ಲೆಗಳಲ್ಲಿಯೂ ನಿಗಾ ವಹಿಸುವಂತೆ ಪಶುಸಂಗೋಪನ ಇಲಾಖೆ ಸೂಚಿಸಿದೆ. ಕೇರಳ -ಕರ್ನಾಟಕ ಗಡಿಯ ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

Advertisement

ಈ ಜಿಲ್ಲೆಗಳಿಗೆ ಕೇರಳದಿಂದ ಬರುವ ಎಲ್ಲ ವಾಹನಗಳಿಗೂ ಕಡ್ಡಾಯ ತಪಾಸಣೆ, ರಾಸಾಯನಿಕ ಸಿಂಪಡಣೆ ಮಾಡಲಾಗು ತ್ತಿದೆ. ಪೌಲಿóಗಳಲ್ಲಿ ಸುರಕ್ಷಾ ಕ್ರಮ ಕೈಗೊ ಳ್ಳಲು ಸೂಚಿಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಅಸಹಜವಾಗಿ ಹಕ್ಕಿಗಳು ಸಾವಿ ಗೀಡಾಗಿದ್ದರೆ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಬೇಕು. ಹಕ್ಕಿ ಜ್ವರ ಲಕ್ಷಣ ಕಂಡುಬಂದರೆ ಮಾದರಿಯನ್ನು ಬೆಂಗ ಳೂರಿನ ಪಶುವೈದ್ಯಕೀಯ ಸಂಶೋಧನ ಸಂಸ್ಥೆಗೆ ಕಳುಹಿಸಬೇಕು ಎಂದು ಇಲಾಖೆ ತಿಳಿಸಿದೆ.

ರಾಜ್ಯದಿಂದ ಕೇರಳಕ್ಕೆ ಹಕ್ಕಿಗಳ ಸಾಗಣೆ ಯಾಗುತ್ತಿದ್ದು, ಅಲ್ಲಿಂದ ಇಲ್ಲಿಗೆ ಬರುತ್ತಿರಲಿಲ್ಲ. ಆದರೂ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಜನರು ಆತಂಕ್ಕೆ ಒಳಗಾಗದೆ ಸುತ್ತಮುತ್ತ ಹಕ್ಕಿಗಳು ಅಸಹಜವಾಗಿ ಸಾವಿಗೀಡಾಗಿದ್ದರೆ ಕೂಡಲೇ ಪಶುಸಂಗೋಪನೆ ಆಸ್ಪತ್ರೆ, ಅಧಿಕಾರಿಗಗಳಿಗೆ ಮಾಹಿತಿ ನೀಡಬೇಕು ಎಂದು ಪಶುಸಂಗೋಪನ ಇಲಾಖೆ ಉಪನಿರ್ದೇಶಕ ಡಾ| ಸುರೇಶ್‌ ಮನವಿ ಮಾಡಿದ್ದಾರೆ.

ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ
ಕೇರಳದಲ್ಲಿ ಈಗಾಗಲೇ ಸಾವಿರಾರು ಬಾತುಕೋಳಿಗಳು ಮತ್ತು ಕೋಳಿಗಳನ್ನು ಕೊಲ್ಲಲಾಗಿದ್ದು, ಕೇರಳ ಸರಕಾರವು ಇದನ್ನು “ರಾಜ್ಯ ವಿಪತ್ತು’ ಎಂದು ಘೋಷಿಸಿದೆ. ಅಳಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಾಗೂ ಸುತ್ತಮುತ್ತ ಪೌಲಿó ಮಾಂಸ, ಮೊಟ್ಟೆ ಹಾಗೂ ಗೊಬ್ಬರಗಳ ಬಳಕೆ, ಮಾರಾಟ ಮತ್ತು ಸಾಗಾಟ ನಿಷೇಧಿಸಲಾಗಿದೆ. ಇದೇ ವೇಳೆ ಗುಜರಾತ್‌, ಹರಿಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ ಹಾಗೂ ಜಮ್ಮು-ಕಾಶ್ಮೀರಗಳಲ್ಲೂ ಹಕ್ಕಿಜ್ವರ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next