Advertisement

ಪಕ್ಷಿ ವೈವಿಧ್ಯ ಅಧ್ಯಯನ ಶಿಬಿರ

04:33 PM Nov 14, 2020 | Suhan S |

ಶಿರಸಿ: ಜಿಲ್ಲೆಯ ಪಕ್ಷಿ ಸಂತತಿ ಉಳಿವಿಗೆ ಜಲ, ವನ ಸಮೃದ್ಧಿ ಅತ್ಯವಶ್ಯ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷಅನಂತ ಹೆಗಡೆ ಅಶೀಸರ ಪ್ರತಿಪಾದಿಸಿದರು.

Advertisement

ಅವರು ಪಕ್ಷಿ ತಜ್ಞರು, ವನ್ಯಜೀವಿ ಕಾರ್ಯಕರ್ತರ ತಂಡ ತಾಲೂಕಿನ ಕೈಲಾಸಗುಡ್ಡದಿಂದ ಗುಡವಿ ಪಕ್ಷಿಧಾಮದವರೆಗೆ ಅಧ್ಯಯನ ಪ್ರವಾಸ ನಡೆಸಿದ ವೇಳೆ ಮಾತನಾಡಿದರು.

ಜಿಲ್ಲೆ ಪಕ್ಷಿ ಸಮೃದ್ಧಿ ಹೊಂದಿದೆ. ಅತ್ತೀವೇರಿ ಪಕ್ಷಿಧಾಮವಿದೆ. ಸೋಂದಾ ಮುಂಡಿಗೆ ಕೆರೆಗೆ ಪಕ್ಷಿಧಾಮ ಪಟ್ಟ ನೀಡಲಾಗುತ್ತಿದೆ. ಶಾಲ್ಮಲಾ, ಬೇಡ್ತಿ, ಸಂರಕ್ಷಿತ ಪ್ರದೇಶ ನಿರ್ವಹಣಾ ಸಮೀತಿ ರಚನೆ ಆಗಬೇಕು. ಬೇಡ್ತಿ ಅಘನಾಶಿನಿ ಕಣಿವೆಗಳ ನಿರ್ವಹಣಾ ಯೋಜನೆ ತಯಾರಿಸಬೇಕು. ಪಕ್ಷಿ ಧಾಮಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಪರಿಸರ ಪ್ರವಾಸೋದ್ಯಮದಲ್ಲಿ ಪಕ್ಷಿ ವೀಕ್ಷಣೆಗೆ ಮಹತ್ವ ಸಿಗಬೇಕು. ಪಕ್ಷಿಗಳ ಆವಾಸ ಸ್ಥಾನ ಕೆರೆ, ಕಾನು, ದೇವರಕಾನು, ಜಡ್ಡಿಗಳ ಉಳಿವು ಮುಖ್ಯ ಎಂದರು. ಉಪರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ಹೆಗಡೆ ವಿದ್ಯಾರ್ಥಿ ದೆಸೆಯಲ್ಲಿ ಪಕ್ಷಿವೀಕ್ಷಣೆಯು ಒಳ್ಳೆಯ ಹವ್ಯಾಸ ಎಂದರು. ಅರಣ್ಯ ಕಾಲೇಜು ಪ್ರಾಧ್ಯಾಪಕ ಪ್ರೊ| ಶ್ರೀಧರ ಭಟ್‌ ಪಕ್ಷಿ ಅಧ್ಯಯನದಲ್ಲಿ ಅರಣ್ಯ ಕಾಲೇಜು ವಿದ್ಯಾರ್ಥಿಗಳು ತೊಡಗಿದ್ದಾರೆ. ಜೀವವೈವಿಧ್ಯ ದಾಖಲಾತಿ ವರದಿಗಳಲ್ಲಿ ಪಕ್ಷಿ ವೈವಿಧ್ಯತೆ ಸೇರಿದೆ ಎಂದರು.

ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ, ದೇವರಕಾಡುಗಳು ಪಕ್ಷಿಗಳ ಉಳಿವಿಗೆ ಮಹತ್ವದ ಕೊಡುಗೆನೀಡುತ್ತವೆ ಎಂದು ತಿಳಿಸಿದರು. ಪುಣೆಯಲ್ಲಿ ಅರ್ಥಶಾಸ್ತ್ರ ಸಲಹೆಗಾರ ವನಿತಾ ಅಶೀಸರ ಹಳ್ಳಿಯ ಹಣ್ಣು, ಹೂ ಗಿಡಗಳ ಪರಿಸರದಲ್ಲಿ ಅಪಾರ ಪಕ್ಷಿಗಳನ್ನು ಗುರುತಿಸಿದ್ದೇವೆ ಎಂದರು. 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಪೂಜಾ ಕೋವಿಡ್ ರಜೆಯಲ್ಲಿ ಪಕ್ಷಿ ವೀಕ್ಷಣೆ ಮಾಡುವ ಹವ್ಯಾಸ ಬೆಳೆಸಿಕೊಂಡೆ ಎಂದು ತಿಳಿಸಿದಳು.

ಪಕ್ಷಿ ಸಮೀಕ್ಷಕ ಓಂಕಾರ್‌ ಪೈ, ಅತ್ತೀವೇರಿ ಮಹೇಶ್‌, ವಲಯ ಅಧಿಕಾರಿಗಳಾದ ಬಸವರಾಜ, ಮಂಜುನಾಥ, ಸೋಂದಾದ ರತ್ನಾಕರ ಬಾಡಲಕೊಪ್ಪ, ಮುಂತಾದವರು ತಮ್ಮ ಅನುಭವ ಹಂಚಿಕೊಂಡರು.

Advertisement

ವಿಎಫ್‌ಸಿ ಅಧ್ಯಕ್ಷ ವಿಶ್ವನಾಥ ಬುಗಡಿಮನೆ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಬಿಸಲಕೊಪ್ಪ ಸ್ವಾಗತಿಸಿದರು. ಇದೇ ವೇಳೆ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮೀತಿ, ಅರಣ್ಯ ಇಲಾಖೆ, ವೃಕ್ಷಲಕ್ಷ ಆಂದೋಲನ ಇವರು ಏರ್ಪಡಿಸಿದ ಪಕ್ಷಿ ಪ್ರವಾಸ ಕೈಲಾಸ ಗುಡ್ಡದ ಬುಡದ ಬೊಮ್ಮನಳ್ಳಿ, ಅಶೀಸರ, ಕಾಳಿಸರ, ಗಡಿಗೆಹೊಳೆ, ಅಡವಿಗಲ್ಲದ ಮನೆ ಬೆಟ್ಟ, ಅರಣ್ಯಗಳಲ್ಲಿ ಪಕ್ಷಿ ವೀಕ್ಷಣೆ ಮಾಡಿದ ಬಳಿಕ 42 ಜಾತಿಯ ವಿವಿಧ ಪಕ್ಷಿ ಸಂಕುಲಗಳ ಆವಾಸವನ್ನು ಗುರುತಿಸಲಾಯಿತು. ನಂತರ ಗುಡ್ನಾಪುರ ಕೆರೆ, ಬನವಾಸಿ, ಸಮೀಪದ ಕೆರೆ ಪರಿಸರದಲ್ಲಿ ಪಕ್ಷಿ ವೀಕ್ಷಣೆ ಮಾಡಿದ ತಂಡ ಗುಡವಿ ಪಕ್ಷಿ ಧಾಮಕ್ಕೆ ಭೇಟಿ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next