Advertisement

ಯುಎಸ್ ಎ ಕ್ರಿಕೆಟ್ ನತ್ತ ಮುಖಮಾಡಿದ ಭಾರತದ ಮತ್ತೊಬ್ಬ ಸ್ಟಾರ್ ಆಲ್ ರೌಂಡರ್

11:23 AM Dec 27, 2021 | Team Udayavani |

ಮುಂಬೈ: ಭಾರತದ ಹಿರಿಯ ಆಲ್ ರೌಂಡರ್ ಗಳಲ್ಲಿ ಒಬ್ಬರಾದ ಬಿಪುಲ್ ಶರ್ಮಾ ಭಾರತ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮುಂದಿನ ಕ್ರಿಕೆಟ್ ಜೀವನವನ್ನು ಅಮೆರಿಕದಲ್ಲಿ ಕಳೆಯುವುದಾಗಿ ಬಿಪುಲ್ ಶರ್ಮಾ ಘೋಷಣೆ ಮಾಡಿದ್ದಾರೆ.

Advertisement

ದೇಶೀಯ ಕ್ರಿಕೆಟ್‌ನಲ್ಲಿ ಅವರು ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಪರ ಬಿಪುಲ್ ಆಡಿದ್ದಾರೆ. ಅವರು ಮುಂದೆ ಯುಎಸ್‌ಎಯಲ್ಲಿ ಆಡಲಿರುವುದರಿಂದ, ಇನ್ನು ಭಾರತೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರ, ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಆಟಗಾರನು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಬೇಕು.

33 ಐಪಿಎಲ್ ಪಂದ್ಯಗಳಲ್ಲಿ 17 ವಿಕೆಟ್ ಪಡೆದರುವ ಬಿಪುಲ್, 96 ಲಿಸ್ಟ್ ಎ ಪಂದ್ಯಗಳಲ್ಲಿ 1620 ರನ್ ಗಳಿಸಿ 96 ವಿಕೆಟ್ ಪಡೆದಿದ್ದಾರೆ. 105 ಟಿ20 ಪಂದ್ಯಗಳಲ್ಲಿ 1203 ರನ್ ಹಾಗೂ 84 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ:ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ ಮೀರಾಬಾಯಿಗೆ ಉ.ಪ್ರ.ದಿಂದ 1.50 ಕೋ.ರೂ.

ಬಿಪುಲ್ ಯುಎಸ್‌ಎಯಲ್ಲಿ ಯಾವ ಲೀಗ್ ಆಡಲಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅಲ್ಲಿಗೆ ತೆರಳಿದ ಬಹುತೇಕ ಭಾರತೀಯ ಆಟಗಾರರು ಮೈನರ್ ಲೀಗ್‌ಗೆ ಸಹಿ ಹಾಕಿದ್ದಾರೆ.

Advertisement

ಭಾರತದ ಮಾಜಿ ಅಂಡರ್ 19 ನಾಯಕ ಉನ್ಮುಕ್ತ್ ಚಂದ್ ಭಾರತವನ್ನು ತೊರೆದು ಯುಎಸ್ಎ ನಲ್ಲಿ ಆಡುತ್ತಿದ್ದಾರೆ. ಅವರು ಮೈನರ್ ಲೀಗ್‌ನಲ್ಲಿ ಯಶಸ್ಸನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next