ಹೊಸದಿಲ್ಲಿ: ಜನರನ್ನು ತಪ್ಪು ದಾರಿಗೆಳೆದು ಬೆಂಕಿ ಹಚ್ಚುವಂತೆ ಮಾಡುವುದು, ಹಿಂಸಾಚಾರ ಸೃಷ್ಟಿಸುವುದು ನಾಯಕತ್ವವಲ್ಲ ಎಂದು ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರವ ಪ್ರತಿಭಟನೆ ಮತ್ತು ಹಿಂಸಾಚಾರದ ಕುರಿತು ಗುರುವಾರ ಮಾತನಾಡಿದ ಅವರು ಈ ಮಾತುಗಳನ್ನಾಡಿದ್ದಾರೆ.
ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಹಿಂಸಾಚಾರಗಳನ್ನು ನಡೆಸುತ್ತಿದ್ದಾರೆ. ಇದು ನಾಯಕತ್ವವಲ್ಲ. ಒಳ್ಳೆಯ ರೀತಿಯಲ್ಲಿ ನಡೆಯುವುದೇ ನಾಯಕತ್ವ ಎಂದರು.
ನಾಯಕತ್ವ ಕಠಿಣವಾಗಿರುತ್ತದೆ. ನೀವು ಮುಂದೆ ಹೆಜ್ಜೆ ಇಡುವಾಗ ನಿಮ್ಮನ್ನು ನೋಡಿ ಸಾಕಷ್ಟು ಜನರು ಬರುತ್ತಾರೆ. ಇದು ಕೇಳುವುದಕ್ಕೆ ಸುಲಭ. ಆದರೆ ಅಷ್ಟಡು ಸುಲಭದ ಮಾತಲ್ಲ. ಹಾಗಾಗಿ ಜನರನ್ನು ಉತ್ತಮ ಹಾದಿಗೆ ಕರೆದೊಯ್ಯುವವರೇ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.