Advertisement

Biparjoy: ಬಿಪರ್‌ಜಾಯ್‌ ದೀರ್ಘಾವಧಿ ಚಂಡಮಾರುತ

11:45 AM Jun 27, 2023 | Pranav MS |

ಹೊಸದಿಲ್ಲಿ: ಈ ತಿಂಗಳ ಪೂರ್ವಾರ್ಧದಲ್ಲಿ ಗುಜರಾತ್‌ನಲ್ಲಿ ಹಾಹಾ ಕಾರ ಸೃಷ್ಟಿಸಿದ್ದ ಬಿಪರ್‌ಜಾಯ್‌ ಚಂಡಮಾರುತವು ಹಿಂದೂ ಮಹಾ ಸಾಗರದ ಉತ್ತರಭಾಗದಲ್ಲಿ 1977ರ ಬಳಿಕ ಉದ್ಭವಿಸಿದ ಅತೀ ದೀರ್ಘಾವಧಿಯದು ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ವರದಿ ಹೇಳಿದೆ. ಈ ಚಂಡಮಾರುತ ಜೂ. 6ರಂದು ರೂಪುಗೊಂಡು ಜೂ. 18ರ ವರೆಗೆ ಒಟ್ಟು 13 ದಿನ 3 ತಾಸುಗಳ ಕಾಲ ಅಸ್ತಿತ್ವದಲ್ಲಿತ್ತು. ಇದು ಈ ಭಾಗದಲ್ಲಿ ಉದ್ಭವಿಸುವ ಚಂಡಮಾರುತಗಳ ಅಸ್ತಿತ್ವ ಅವಧಿಯಾದ 6 ದಿನ 3 ತಾಸುಗಳಿಗಿಂತ ದುಪ್ಪಟ್ಟು ಎಂದು ಐಎಂಡಿ ತಿಳಿಸಿದೆ.

Advertisement

ತಾನು ಕ್ರಮಿಸಿದ 2,525 ಕಿ.ಮೀ. ದೂರದ ದಾರಿಯಲ್ಲಿ 9 ಬಾರಿ ಪಥ ಬದಲಾಯಿಸಿದ್ದು ಕೂಡ ಬಿಪರ್‌ಜಾಯ್‌ ವಿಶೇಷ ಎಂದು ಈ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next