Advertisement

ಸಮುದ್ರದಲೆಯಲ್ಲಿ ನೀಲಿ ಬೆಳಕಿನಾಟ: ತಡರಾತ್ರಿಯವರೆಗೂ ಬೀಚ್ ನಲ್ಲಿ ಕುತೂಹಲಿಗರ ದಂಡು

12:22 PM Nov 24, 2020 | keerthan |

ಉಳ್ಳಾಲ: ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲೂ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿದ್ದು, ಸೋಮವಾರ ತಡರಾತ್ರಿವರೆಗೂ ಕುತೂಹಲಿಗರು ಸಮುದ್ರ ತಟದಲ್ಲಿ ನಿಂತು ಅಲೆಗಳ ಕೌತುಕವನ್ನು ವೀಕ್ಷಣೆ ನಡೆಸಿದರು.

Advertisement

ಅರಬ್ಬಿ ಸಮುದ್ರದ ಮಲ್ಪೆಯ ಪಡುಕೆರೆ,ಕಾರವಾರ ಉದ್ದಕ್ಕೂ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ  ಸುದ್ಧಿ ಹರಡುತ್ತಿದ್ದಂತೆ , ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ ರಾತ್ರಿ ಜನ ಜಮಾಯಿಸಿ ನೀಲಿ ಬೆಳಕು ದಡಕ್ಕೆ ಅಪ್ಪಳಿಸುವುದನ್ನು ಕಂಡು ಬೆರಗಾದರು.

ಉಳ್ಳಾಲ, ಮುಕ್ಕಚ್ಚೇರಿ, ಸೋಮೆಶ್ವರ, ಉಚ್ಚಿಲ, ತಲಪಾಡಿ ಭಾಗಗಳಲ್ಲಿ ಸಮುದ್ರದ ಅಲೆಗಳಲ್ಲಿ ನೀಲಿ ಬೆಳಕು ಕಾಣಿಸಿಕೊಂಡಿದೆ. ಹಲವು ದಿನಗಳಿಂದ ಬೆಳಕು ಕಾಣುತ್ತಿದ್ದರೂ, ಕಾರವಾರ ಮಲ್ಪೆ ಸಮುದ್ರ ತೀರದ ಬೆಳಕಿನ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಉಳ್ಳಾಲ ಭಾಗದಲ್ಲಿಯೂ ಕುತೂಹಲಿಗರು ಸಮುದ್ರ ತೀರದಲ್ಲಿ ತಡರಾತ್ರಿವರೆಗೂ ಉಳಿದು ಅಲೆಗಳ ಜತೆಗೆ ನೀಲಿಬೆಳಕಿನ ಆಟವನ್ನು ಮೊಬೈಲ್ ಹಾಗೂ ಕ್ಯಾಮರಾಗಳ ಮೂಲಕ ಸೆರೆಹಿಡಿದರು.

ಸಮುದ್ರ ನೀರಿನ ಹಸುರು, ನೀಲಿ ರಂಗಿನಾಟ

Advertisement

ಎರಡು – ಮೂರು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ವಿಚಿತ್ರ ವಿದ್ಯಮಾನ ಜರಗುತ್ತಿದ್ದು, ಹಗಲು ಹೊತ್ತು ಪಾಚಿ ಬಣ್ಣದ ಹಸುರು ನೀರು, ರಾತ್ರಿ ನೀಲಿ ಬಣ್ಣ ನೀರು ಕಂಡುಬರುತ್ತಿದ್ದು ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದೆ.

ಕಳೆದ ಸೆ.15ರಿಂದ ಮೂರ್‍ನಾಲ್ಕು ದಿನಗಳ ಕಾಲ ಸಮುದ್ರ ಇದೇ ಬಣ್ಣಕ್ಕೆ ತಿರುಗಿತ್ತು. ಈ ಸಂದರ್ಭ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಮುದ್ರದ ನೀರನ್ನು ಪರೀಕ್ಷೆಗಾಗಿ ಲ್ಯಾಬ್‌ ಗೆ ಕಳುಹಿಸಿಕೊಟ್ಟದನ್ನು ಸ್ಮರಿಸಬಹುದು. ಇದೀಗ ಮತ್ತೂಮ್ಮೆ ಸಮುದ್ರದಾಳದ ಪಾಚಿಗಳು ಮೇಲೆ ಬಂದು ಈ ಬಣ್ಣಕ್ಕೆ ತಿರುಗಿರಬಹುದೆಂದು ತಜ್ಞರ ಅಭಿಪ್ರಾಯ. ರಾತ್ರಿ ಚಂದ್ರನ ಬೆಳಕಿಗೆ ಪ್ರತಿಫಲನಗೊಳ್ಳುವ ಸಂದರ್ಭ ಸಮುದ್ರ ನೀಲಿ ಬಣ್ಣದಿಂದ ಕಂಗೊಳಿಸುತ್ತಿದೆ.

ಚಿತ್ರಗಳು: ವಸಂತ್ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next