ನವದೆಹಲಿ: ಕೋವಿಡ್ 19 ಸೋಂಕಿನ ವಿರುದ್ಧ ಹೋರಾಟವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಭಾರತ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, 300 ಮಿಲಿಯನ್ ಡೋಸ್ ಗಳಿಗಾಗಿ ಬಯಾಲಾಜಿಕಲ್ ಇ ಕಂಪೆನಿಯ ಜತೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ವಿರುದ್ಧ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು
ಮೂಲಗಳ ಪ್ರಕಾರ, ಭಾರತ ಸರ್ಕಾರ ದೇಶೀಯ ಲಸಿಕೆ ಉತ್ಪಾದನಾ ಸಂಸ್ಥೆಯಾದ ಬಯಾಲಾಜಿಕಲ್ ಇ ಕಂಪನಿಯ ಜತೆ ಅಂದಾಜು 1,500 ಕೋಟಿ ರೂಪಾಯಿ ಮೌಲ್ಯದ 30 ಕೋಟಿ ಕೋವಿಡ್ ಡೋಸ್ ಗಳಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ವಿವರಿಸಿದೆ. ಬಯಾಲಾಜಿಕಲ್ ಇ ಕಂಪನಿಯ ಲಸಿಕೆ ಇನ್ನೂ 3ನೇ ಹಂತದ ಪ್ರಯೋಗದ ಹಂತದಲ್ಲಿದೆ ಎಂದು ವರದಿ ತಿಳಿಸಿದೆ.
ಬಯಾಲಾಜಿಕಲ್ ಕೋವಿಡ್ ಲಸಿಕೆಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯಿಟರ್ಸ್ ವರದಿ ಪ್ರಕಾರ, ಹೈದರಾಬಾದ್ ಮೂಲದ ಬಯಾಲಾಜಿಕಲ್ ಇ ಲಿಮಿಟೆಡ್ ಕೋವಿಡ್ 19 ಲಸಿಕೆಗಾಗಿ ಕೆನಡಾದ ಜೈವಿಕತಂತ್ರಜ್ಞಾನ (ಬಯೋಟೆಕ್ನಾಲಜಿ) ಕಂಪನಿ ಪ್ರಾವಿಡೆನ್ಸ್ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವರದಿ ಹೇಳಿದೆ.
ಆರ್ ಬಿಟಿ ಪ್ರೊಟೀನ್ ಉಪ ಘಟಕದ ಲಸಿಕೆಯಾಗಿರುವ ಇದು ಪ್ರಸ್ತುತ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದೆ. ಮೊದಲ ಎರಡು ಹಂತಗಳಲ್ಲಿ ಭರವಸೆಯ ಫಲಿತಾಂಶ ಲಭ್ಯವಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಬಯಾಲಾಜಿಕಲ್ ಇ ಲಸಿಕೆ ಭಾರತದಲ್ಲಿ ದೊರಕಲಿದೆ.