ಪುತ್ತೂರು: ಅಂತಾರಾಷ್ಟ್ರೀಯ ಶೆಲ್ ಕಂಪೆನಿಯು ಕಳೆದ ವರ್ಷ ಬೆಂಗಳೂರಿನಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್‌ನೊಂದಿಗೆ ನಡೆಸಿದ ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶ NXplorer 2019 -20ರಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರಖ್ಯಾತ್ ವೈ.ಬಿ. ಮತ್ತು ಪ್ರಣವ್ ವೈ.ಬಿ. ಭಾಗವಹಿಸಿ Biofuel and Jaggery from waste Jackfruit ಎಂಬ ಯೋಜನ ವರದಿಯನ್ನು ಮಂಡಿಸಿ ಬಹುಮಾನ ಪಡೆದು, ಅಂತಾರಾಷ್ಟ್ರೀಯ ಸಮಾ ವೇಶದ ಆಯ್ಕೆಗೆ ಅರ್ಹತೆ ಪಡೆದಿದ್ದರು. ಅಲ್ಲಿಯೂ ಮನ್ನಣೆ ಪಡೆದು ಗಮನ ಸೆಳೆದಿದ್ದಾರೆ.
ಪ್ರಪಂಚದ 20 ದೇಶಗಳಿಂದ ಆಯ್ಕೆ ಯಾದ ಒಟ್ಟು 6 ಪ್ರಾಜೆಕ್ಟ್ ಗಳಲ್ಲಿ ಭಾರತ ದಿಂದ ಆಯ್ಕೆಯಾದ ಏಕೈಕ ಯೋಜನ ವರದಿ ಇದಾಗಿದೆ. ಶೆಲ್ ಕಂಪೆನಿಯು ಕಳೆದ ಕೆಲವು ವರ್ಷಗಳಿಂದ ಭಾರತವು ಸೇರಿ ಪ್ರಪಂಚಾದ್ಯಂತ ಸುಮಾರು 20 ದೇಶಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಂಶೋಧನೆ ಕ್ಷೇತ್ರದ ಕಡೆಗೆ ಒಲವು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದೆ.
ಈ ಉದ್ದೇಶದಿಂದ ಆಹಾರ, ನೀರು ಮತ್ತು ಶಕ್ತಿಗಳ ಬಗ್ಗೆ ವಿವಿಧ ತಂತ್ರಗಳ ಮೂಲಕ 2 ದಿನಗಳ ಕಾರ್ಯಾಗಾರವನ್ನು 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುತ್ತ¤ ಬಂದಿದೆ. ತರಬೇತಿ ಪಡೆದ ವಿದ್ಯಾರ್ಥಿ ಗಳು ತಯಾರಿಸಿದ ಪ್ರಾಜೆಕ್ಟ್ ಗಳಿಗೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವ ಹಿಸುವ ಅವಕಾಶ ಕಲ್ಪಿಸುತ್ತಿದೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದ ಶ್ರೀ ರಾಮಕೃಷ್ಣ ಪ್ರೌಢ ಶಾಲೆ NXplorer science expoನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಶಾಲೆಯಾಗಿ ಮೂಡಿಬಂದಿದೆ.
ಕೋವಿಡ್-19 ರಿಂದಾಗಿ ಅಂತಾ ರಾಷ್ಟ್ರೀಯ ಸಮಾವೇಶವು ನಡೆಸಲು ಅಸಾಧ್ಯವಾದ ಕಾರಣ ಶೆಲ್ ಕಂಪೆನಿಯ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧವು ವಿವರವಾಗಿ ಪ್ರಕಟಗೊಂಡಿದೆ. ವಿದ್ಯಾರ್ಥಿಗಳ ಪ್ರಾಜೆಕ್ಟ ತಯಾರಿಕೆಯಲ್ಲಿ ಅವರ ಸಹಪಾಠಿಗಳಾದ ರೋಹನ್, ನಿಶಾನ್ ಮತ್ತು ನಿಶಿತ್ ಸಹಕರಿಸಿದ್ದಾರೆ. ಎಲ್‌ಎಲ್‌ಎಫ್ ನ ಮ್ಯಾನೇಜರ್ ಹಾನಾ ಮುರುಗನ್ ಮಾರ್ಗದರ್ಶನ ನೀಡಿದ್ದಾರೆ. ಶಿಕ್ಷಕಿ ಸಂಗೀತಾ ಮತ್ತು ನಿವೃತ್ತ ವಿಜ್ಞಾನ ಶಿಕ್ಷಕಿ ವಸಂತಿ ಕೆದಿಲ ಸಹಕರಿಸಿದ್ದಾರೆ.