Advertisement
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನು ಕೃಷಿಗೆ ಸರಕಾರ ವಿಶೇಷ ಒತ್ತು ನೀಡುತ್ತಿದೆ. ದೇಶದಲ್ಲಿಯೇ ಕರ್ನಾಟಕವನ್ನು ಈ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಮೀನಿನ ತ್ಯಾಜ್ಯದ ಮೂಲಕ ಬಯೋ ಡೀಸೆಲ್ ಉತ್ಪಾದಿಸಲು ಮೂಲ್ಕಿ ಯಲ್ಲಿರುವ ಮೀನುಗಾರಿಕೆ ಇಲಾಖೆಯ ಜಾಗ ಇದಕ್ಕಾಗಿ ಗುರುತಿಸಿದ್ದೇವೆ ಎಂದರು.
ಮೀನು ಮಾರುಕಟ್ಟೆ ಹೆಚ್ಚಿಸುವ ಜತೆಗೆ ಮೀನಿಗೆ ಸ್ಥಿರ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸುತ್ತಿದ್ದೇವೆ. ನಾಡದೋಣಿ ಮೀನು ಗಾರರ ಸೀಮೆಎಣ್ಣೆ ಸಮಸ್ಯೆಗೆ ಶಾಶ್ವತ ಪರಿಹಾಕ ಕಲ್ಪಿಸುವ ನಿಟ್ಟಿನಲ್ಲಿ ಪೆಟ್ರೋಲ್ ಚಾಲಿತ ಎಂಜಿನ್ ಪರಿ ಚಯಿಸುವ ಬಗ್ಗೆಯೂ ಚಿಂತಿಸು ತ್ತಿದ್ದೇವೆ. ಸದ್ಯ ಉದ್ಭವಿಸಿರುವ ಸಮಸ್ಯೆಗೆ 2-3 ದಿನಗಳಲ್ಲಿ ಪರಿಹಾರ ಸೂಚಿಸ ಲಿದ್ದೇವೆ. ಹಾಗೆಯೇ ಮಲ್ಪೆ ಸಹಿತ ವಿವಿಧ ಬಂದರುಗಳಲ್ಲಿ ಹೂಳೆ ತ್ತುವ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚಿಸಿ ಶೀಘ್ರ ತೀರ್ಮಾನಿಸಲಿದ್ದೇವೆ ಎಂದರು. ತೂಗುಸೇತುವೆ ಬಗ್ಗೆ
ಮಾಹಿತಿ ಪಡೆಯುವೆ
ಉಡುಪಿಯ ಕೆಮ್ಮಣ್ಣಿನ ತಿಮ್ಮಣ್ಣನ ಕುದ್ರುವನ್ನು ಸಂಪರ್ಕಿಸುವ ತೂಗು ಸೇತುವೆಯ ಸದ್ಯದ ಸ್ಥಿತಿ, ತಾಂತ್ರಿಕ ಮಾಹಿತಿಯ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆಯಲಾಗುವುದು. ಅಲ್ಲಿನ ಅವ್ಯವಸ್ಥೆ ಸಂಬಂಧ ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಜೀವ್‌ಗಾಂಧಿ ವಸತಿ ನಿಗಮದ ಬದಲಿಗೆ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕವೇ ಮನೆ ಹಂಚಿಕೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಕೋರಿ ದ್ದೇವೆ. ಅದರಂತೆ ಆದೇಶವೂ ಆಗಿದೆ. ಶೀಘ್ರವೇ ಮನೆ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
Related Articles
ಪೊಲೀಸ್ ವರ್ಗಾವಣೆ ಮತ್ತು ಸ್ಥಳೀಯರಿಗೆ ಆಯಾ ಜಿಲ್ಲೆಯಲ್ಲೇ ಹುದ್ದೆ ನೀಡಬೇಕು ಎಂಬ ಬೇಡಿಕೆ ಇದೆ. ಆದರೆ ನೇಮಕಾತಿ ಸಂದರ್ಭ ನಾವು ಎಷ್ಟು ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ. ಪೊಲೀಸ್ ವರ್ಗಾವಣೆ ಸಂಬಂಧ ಗೃಹ ಇಲಾಖೆಯ ಜತೆಗೆ ಮಾತುಕತೆ ಮಾಡಲಾಗುವುದು ಎಂದರು.
ನ. 7ರಂದು ಮುಖ್ಯಮಂತ್ರಿಯ ವರು ಜಿಲ್ಲೆಗೆ ಬರಲಿದ್ದು, ಅದಕ್ಕೂ ಮೊದಲು ಸಚಿವ ಸಂಪುಟ ಸಭೆಯೂ ನಡೆಲಿದೆ. ಹೀಗಾಗಿ ಜಿಲ್ಲೆಗೆ ಹೊಸ ಘೋಷಣೆ ಸಿಗಬಹುದಾದ ಬಗ್ಗೆಯೂ ನಿರೀಕ್ಷೆಯಿದೆ ಎಂದು ಹೇಳಿದರು.
Advertisement
ಪಕ್ಷದ ತೀರ್ಮಾನಮುಂದಿನ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಮತ್ತು ಸೀಟು ಹಂಚಿಕೆ ವಿಚಾರ ಪಕ್ಷಕ್ಕೆ ಬಿಟ್ಟದ್ದು. ಸರಕಾರವಾಗಿ ನಾವು ಯಾವುದೇ ಯೋಜನೆಯನ್ನು ರಾಜಕೀಯ ಅಥವಾ ಓಟಿನ ಆಸೆಗೆ ಜಾರಿಗೆ ತಂದಿಲ್ಲ. ಪ್ರತಿಯೊಬ್ಬರಿಗೂ ಯೋಜನೆಯ ಫಲ ಸಿಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಸಚಿವ ಅಂಗಾರ ಹೇಳಿದರು.