Advertisement

ಬಯೋ ಟಾಯ್ಲೆಟ್‌ ಈಗ ಪಠ್ಯ; ಐಎಸ್‌ಬಿ ಮತ್ತು ರೈಲ್ವೇ ಇಲಾಖೆ ನಡುವೆ ಒಡಂಬಡಿಕೆ

12:47 AM Nov 23, 2020 | mahesh |

ಹೊಸದಿಲ್ಲಿ: ಭಾರತೀಯ ರೈಲ್ವೇ ಕೋಚ್‌ಗಳಲ್ಲಿ ಬಳಕೆ ಮಾಡುವ ಜೈವಿಕ ಶೌಚಾಲಯ (ಬಯೋ ಟಾಯ್ಲೆಟ್‌) ಪ್ರಯೋಗ ಯಶಸ್ವಿ­ಯಾಗಿದೆ. ಆ ಅಂಶವೇ ಈಗ ದೇಶದ ಪ್ರಮುಖ ಉದ್ಯಮಾಡಳಿತ ನಿರ್ವಹಣೆ ಕಾಲೇಜುಗಳಲ್ಲಿ ಪಠ್ಯಕ್ರಮವಾಗುತ್ತ ಸಾಗಿದೆ. ವಿಶೇಷವಾಗಿ ಹೈದರಾಬಾದ್‌ನಲ್ಲಿರುವ ಇಂಡಿಯನ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌ (ಐಎಸ್‌ಬಿ) ಭಾರತೀಯ ರೈಲ್ವೇಯ ಸಾಧನೆಯ ಅಂಶಗಳನ್ನು ಪಠ್ಯ ಕ್ರಮದಲ್ಲಿ ಅಳವಡಿಸುವ ಬಗ್ಗೆ ಆಸಕ್ತಿ ವಹಿಸಿ, ಸರಕಾರಿ ಸಂಸ್ಥೆಯ ಅನುಮತಿ ಕೋರಿತ್ತು. ಅದಕ್ಕೆ ರೈಲ್ವೇ ಇಲಾಖೆ ಸಹಮತ ವ್ಯಕ್ತಪಡಿಸಿದೆ.

Advertisement

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಐಎಸ್‌ಬಿ ಮತ್ತು ಭಾರತೀಯ ರೈಲ್ವೇ ಇಲಾಖೆ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ತಾಂತ್ರಿಕ ನೆರವು ಮತ್ತು ಇತರ ಖಾಸಗಿ ಸಂಸ್ಥೆಗಳ ಸಹಯೋಗದ ಜತೆಗೆ ರೈಲು ಕೋಚ್‌ಗಳಲ್ಲಿ ಬಯೋ ಟಾಯ್ಲೆಟ್‌ ಅನ್ನು ಅಳವಡಿಸಲಾಗಿತ್ತು. ಐಎಸ್‌ಬಿ ತನ್ನ ಪಠ್ಯ ಕ್ರಮದಲ್ಲಿ ಯೋಜನೆಯ ಸಾಧನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬಳಕೆ ಮಾಡಲು ಅಧಿಕಾರ ಪಡೆದುಕೊಂಡಿದೆ.

2011ರಲ್ಲಿ ಜೈವಿಕ ಶೌಚಾಲಯದ ಮೊದಲ ಮಾದರಿಯನ್ನು ಗ್ವಾಲಿಯರ್‌ನಲ್ಲಿ ಅಳವಡಿ­ಸಲಾಗಿತ್ತು. 2011 ರಿಂದ 2020ರ ಅವಧಿಯಲ್ಲಿ 68, 694 ಕೋಚ್‌ಗಳಲ್ಲಿ 2,45,775 ಇಂಥ ಮಾದರಿಯ ಟಾಯ್ಲೆಟ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ಟಾಟಾ ಎನರ್ಜಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಟಿಆರ್‌ಐ) ಅದರ ಅಧ್ಯಯನ ನಡೆಸಿ ರೈಲ್ವೇ ಹಳಿಗಳನ್ನು ಶುಚಿಯಾಗಿ ಇರಿಸುವ ಕೆಲಸ ಹಗುರವಾಗಿದೆ ಮತ್ತು ಮಾನವರು ಮಲ ಹೊರುವ ಪದ್ಧತಿಯನ್ನು ಕಡಿಮೆಗೊಳಿಸಲಾಗಿದೆ ಎಂದು ಅಭಿಪ್ರಾಯ­ಪಟ್ಟಿದೆ. ಇದರ ಜತೆಗೆ ಪ್ರತೀ ದಿನ 5.4 ಮಿಲಿಯ ಲೀಟರ್‌ ನೀರಿನ ಉಳಿತಾಯವೂ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next