ನಿರ್ವಹಣೆಯಲ್ಲಿ, ಸಮಯಪಾಲನೆ, ಶಿಸ್ತಿನ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ, ಕಾಲೇಜಿನಲ್ಲೂ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿತ್ತು.
Advertisement
ಅದರಂತೆ ರಾಜ್ಯ ಸರ್ಕಾರಿ ಪದವಿ ಕಾಲೇಜಿನಲ್ಲೂ ಬಯೋ ಮೆಟ್ರಿಕ್ ಅಳವಡಿಸಿಕೊಳ್ಳಲಾಗಿದೆ. ಆದರೆ ಇಲಾಖಾ ವ್ಯಾಪ್ತಿಯಲ್ಲೇ ಬರುವ ಅನುದಾನಿತ ಕಾಲೇಜುಗಳಲ್ಲಿ ಬಯೋ ಮೆಟ್ರಿಕ್ ಅಳವಡಿಸಿರಲಿಲ್ಲ. ಹಾಗಾಗಿ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲೂ ತಕ್ಷಣವೇ ಬಯೋ ಮೆಟ್ರಿಕ್ ಅಳವಡಿಸಿಕೊಳ್ಳಲು ಸರ್ಕಾರ ಆಡಳಿತ ಮಂಡಳಿಗಳಿಗೆ ಸೂಚಿಸಿದೆ. ಸೆ.1ರೊಳಗೆ ಬಯೋ ಮೆಟ್ರಿಕ್ ಅಳವಡಿಸಿಕೊಂಡು, ವರದಿ ಸಲ್ಲಿಸುವಂತೆ ಖಾಸಗಿ ಅನುದಾನಿತ ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶಿಸಲಾಗಿದೆ.