Advertisement

ಜಿ.ಪಂ.ಗಳ ಸರ್ಕಾರಿ ವಾಹನಗಳಲ್ಲಿ ಬಯೋ ಡೀಸೆಲ್‌ ಬಳಕೆಗೆ ಸೂಚನೆ

11:55 PM Feb 15, 2019 | |

 ಬೆಂಗಳೂರು: ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಗಳ ಸರ್ಕಾರಿ ವಾಹನಗಳಲ್ಲಿ ಬಯೋ ಡೀಸೆಲ್‌ನ್ನು ಬಳಸುವಂತೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Advertisement

ಈಗಾಗಲೇ ಪ್ರತಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದಿಟಛಿ ಮಂಡಳಿಯು ಜೈವಿಕ ಇಂಧನ ಸಂಶೋಧನೆ ಮತ್ತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಆರಂಭಿಸಿ ನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯಿತಿಗಳ ವಾಹನ ವಿಭಾಗದ ಮುಖ್ಯಸ್ಥರು ಈ ಕೇಂದ್ರಗಳನ್ನು ಸಂಪರ್ಕಿಸಿ, ಇನ್ನು ಮುಂದೆ ಜಿ.ಪಂ.ತಿಗಳ ವಾಹನಗಳಲ್ಲಿ ಕಡ್ಡಾಯವಾಗಿ ಬಯೋ ಡೀಸೆಲ್‌ ಬಳಸುವಂತೆ ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬಯೋ ಡೀಸೆಲ್‌ ಬಳಸುವ ಬಗ್ಗೆ ಮಾರ್ಗಸೂಚಿಯನ್ನೂ ನೀಡಲಾಗಿದೆ. ಇದರಅನು ಸಾರ ಪ್ರತಿ ಜಿಲ್ಲೆಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 50 ರಿಂದ 400ಲೀಟರ್‌ ಬಯೋ ಡೀಸೆಲ್‌ ಪೂರೈಸಲಿದೆ.

ಪ್ರಾರಂಭದಲ್ಲಿ ಡೀಸೆಲ್‌ ಜತೆ ಶೇ.5ರಷ್ಟು (100 ಲೀಟರ್‌ಗೆ 5 ಲೀಟರ್‌ ಬಯೋ ಡೀಸೆಲ್‌ ಮಿಶ್ರಣ) ಬಯೋ ಡೀಸೆಲ್‌ ಮಿಶ್ರಣ ಮಾಡಬೇಕು. ಬಳಿಕ, ಹಂತ ಹಂತವಾಗಿ ಇದನ್ನು ಹೆಚ್ಚಿಸಲಾಗುವುದು. ಬಯೋ ಡೀಸೆಲ್‌ ಬಳಕೆಯ ಕುರಿತಂತೆ ಜಿಲ್ಲಾ ಪಂಚಾಯಿತಿ ವಾಹನಗಳ ಚಾಲಕರಿಗೆ ಸೂಕ್ತ ತರಬೇತಿ ಮತ್ತು ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next