Advertisement

ಯುವಕನ ಸಾಧನೆ; ಬಿಸಾಡಿದ ಪಿಪಿಇ ಕಿಟ್‌, ಮಾಸ್ಕ್ ನಿಂದ ಇಟ್ಟಿಗೆ ತಯಾರಿಕೆ

12:43 PM Sep 06, 2021 | Team Udayavani |
ಇಟ್ಟಿಗೆಗಳು ತಯಾರಾಗಲು ಪಿಪಿಇ ಕಿಟ್‌ ಮಾಸ್ಕ್ ಗಳನ್ನು ಉಪಯೋಗಿಸುತ್ತಾರೆ ಎನ್ನುವಾಗ ಯಾವ ರೀತಿಯಲ್ಲಿ ಬಳಸುತ್ತಾರೆ ಎಂಬ ಕೂತೂಹಲ ಮೂಡುವುದು ಸಾಮಾನ್ಯ ಯಾಕೆಂದರೆ ಅದನ್ನು ಕೊರೊನಾ ಪಾಸಿಟಿವ್‌ ಬಂದ ರೋಗಿಗಳು ಅವರನ್ನು ನೋಡಿಕೊಳ್ಳುವ ವೈದ್ಯರು ಬಳಸಿ ಬಿಸಾಡುವುದರಿಂದ ಇದನ್ನು ಸುರಕ್ಷಿತವಾಗಿ ಹೇಗೆ ತಯಾರಿಸುತ್ತಾರೆ ಎಂಬುದೇ ಎಲ್ಲರ ಪ್ರಶ್ನೆಯಾಗುತ್ತದೆ. ಕೆಲವು ವರದಿಯ ಪ್ರಕಾರ ಪ್ರತಿ ತಿಂಗಳು ಕನಿಷ್ಠ 129 ಮಿಲಿಯನ್‌ ಮಾಸ್ಕ್ ಬಳಸಲಾಗುತ್ತದೆ ಅಲ್ಲದೆ ಇದನ್ನು ಬಳಸಿ ಬಿಸಾಡುವುದನ್ನು ವಿಲೇವಾರಿ ಮಾಡುವಲ್ಲಿ ಅನೇಕ ಸಮಸ್ಯೆಯುಂಟಾಗುತ್ತಿದೆ. ಆದರೆ ಇದನ್ನು ನಿರ್ವಹಿಸುವಲ್ಲಿ ಬಿನೆಶ್‌ ದೇಸಾಯಿ ಯಶಸ್ವಿಯಾಗಿದ್ದಾರೆ...
Now pay only for what you want!
This is Premium Content
Click to unlock
Pay with

ಪ್ರೀತಿ ಭಟ್‌ ಗುಣವಂತೆ

Advertisement

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಮಸ್ಯೆಗಳ ಜತೆಗೆ ನಾವು ಉಪಯೋಗಿಸಿ ಬಿಸಾಡುವ ಮಾಸ್ಕ್, ಪಿಪಿಇ ಕಿಟ್‌ ಇವುಗಳಿಂದ ಉಂಟಾಗುವ ತ್ಯಾಜ್ಯಗಳ ಬಗ್ಗೆ ಹೆಚ್ಚು ಚರ್ಚೆಗಳು ಕೇಳಿ ಬಂದಿದ್ದವು. ಇನ್ನು ಸಂಭಾವ್ಯ 3, 4ನೇ ಅಲೆಗಳು ಬರಲು ಆರಂಭಿಸಿದರೆ ಈ ತ್ಯಾಜ್ಯಗಳ ಪ್ರಮಾಣ ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ತ್ಯಾಜ್ಯಗಳನ್ನು ಬಳಸಿ ಇಟ್ಟಿಗೆಗಳನ್ನಾಗಿ ಮಾರ್ಪಡಿಸಿ ಮರುಬಳಕೆ ಮಾಡುವ ವಿಧಾನವನ್ನು ಇಲ್ಲೊಬ್ಬ ಯುವಕ ಕಂಡು ಹುಡುಕಿದ್ದಾನೆ. ಗುಜರಾತ್‌ನ ಸಣ್ಣ ಜಿಲ್ಲೆ ವಲ್ಸಾದ್‌ ಮೂಲದ 27 ವರ್ಷದ ಬಿನೆಶ್‌ ದೇಸಾಯಿ ಈ ಮರುಬಳಕೆ ವಿಧಾನ ಕಂಡು ಹಿಡಿದ ಪರಿಸರವಾದಿ.

ಪರಸರ ಸ್ನೇಹಿ ಇಟ್ಟಿಗೆ ನಿರ್ಮಾಣ
ಕೋವಿಡ್ ಕಾರಣದಿಂದ ಉಂಟಾಗುತ್ತಿರುವ ತ್ಯಾಜ್ಯಗಳ ನಿರ್ಮೂಲನೆ ಮಾಡಲು ಈ ರೀತಿಯ ಯೋಜನೆ ಹಾಕಿಕೊಂಡಿದ್ದು ಪಿಪಿಇ ಕಿಟ್‌ಗಳಿಂದ ಪರಿಸರ ಸ್ನೇಹಿ ಇಟ್ಟಿಗೆ ತಯಾರಿಸುವುದಲ್ಲದೆ ಬಟ್ಟೆಯಿಂದ ನೇಯ್ದ ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾನೆ.

ಆಸಕ್ತಿ ಬೆಳೆದದ್ದು ಹೇಗೆ?
ದೇಸಾಯಿ ತಮ್ಮ 10ನೇ ವಯಸ್ಸಿನಲ್ಲಿ ನೋಡುತ್ತಿದ್ದ ಕ್ಯಾಪ್ಟನ್‌ ಪ್ಲ್ಯಾನೆಟ್ ಇವರನ್ನು ಪರಿಸರವಾದಿಯನ್ನಾಗಿಸಿತು. ಅಲ್ಲಿ ಡೆಕ್ಸರ್‌ ಲ್ಯಾಬೊರೇಟರಿ ಇಂದ ಉಂಟಾಗುವ ಮಾಲಿನ್ಯವನ್ನು ತಡೆಯುವ ಸೂಪರ್‌ ಹೀರೋ, ಮನೆಯಲ್ಲಿಯೇ ರಹಸ್ಯ ವಿಜ್ಞಾನ ಪ್ರಯೋಗಾಲಯ ನಡೆಸುತ್ತಿದ್ದ ಹುಡುಗನ ಬಗ್ಗೆ ಇದ್ದ ಅನಿಮೇಟೆಡ್‌ ಸರಣಿ. ಎಲ್ಲಾ ಕೂತೂಹಲ ಹುಟ್ಟು ಹಾಕಿ ವಿನೂತನ ಯೋಚನೆಯಲ್ಲಿ ತೊಡಗುವಂತೆ ಮಾಡಿತು. 2009ರಲ್ಲಿ ದೇಸಾಯಿ ಅವರು ರೋಟರಿ ಯೂತ್‌ ಎಕ್ಸ್ಚೆಂಚ್ ವಿದ್ಯಾರ್ಥಿಯಾಗಿ ಆಯ್ಕೆಯಾದರು. ಇದು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮತ್ತು ಆಲೋಚನಾ ಪ್ರಕ್ರಿಯೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುವಲ್ಲಿ ಪೂರಕವಾಯಿತು. ಇವರಿಗೆ ಚೂಯಿಂಗ್‌ ಗಮ್‌ ಮತ್ತು ವೇಸ್ಟ್‌ ಪೇಪರ್‌ ಬಳಸಿ ವಿಶ್ವದ ಅತ್ಯಂತ ದುಬಾರಿ ಮನೆ ನಿರ್ಮಿಸುವ ಯೋಜನೆ ರೂಪಿಸಿದ್ದು ಅದನ್ನು ಅವರು ಅಂದುಕೊಂಡ ಹಾಗೇ ವಿನ್ಯಾಸಗೊಳಿಸಿದ್ದರು.

ಹೇಗೆ ತಯಾರಾಗುತ್ತೇ ಈ ಇಟ್ಟಿಗೆಗಳು?
ಇಟ್ಟಿಗೆಗಳು ತಯಾರಾಗಲು ಪಿಪಿಇ ಕಿಟ್‌ ಮಾಸ್ಕ್ ಗಳನ್ನು ಉಪಯೋಗಿಸುತ್ತಾರೆ ಎನ್ನುವಾಗ ಯಾವ ರೀತಿಯಲ್ಲಿ ಬಳಸುತ್ತಾರೆ ಎಂಬ ಕೂತೂಹಲ ಮೂಡುವುದು ಸಾಮಾನ್ಯ ಯಾಕೆಂದರೆ ಅದನ್ನು ಕೊರೊನಾ ಪಾಸಿಟಿವ್‌ ಬಂದ ರೋಗಿಗಳು ಅವರನ್ನು ನೋಡಿಕೊಳ್ಳುವ ವೈದ್ಯರು ಬಳಸಿ ಬಿಸಾಡುವುದರಿಂದ ಇದನ್ನು ಸುರಕ್ಷಿತವಾಗಿ ಹೇಗೆ ತಯಾರಿಸುತ್ತಾರೆ ಎಂಬುದೇ ಎಲ್ಲರ ಪ್ರಶ್ನೆಯಾಗುತ್ತದೆ. ಕೆಲವು ವರದಿಯ ಪ್ರಕಾರ ಪ್ರತಿ ತಿಂಗಳು ಕನಿಷ್ಠ 129 ಮಿಲಿಯನ್‌ ಮಾಸ್ಕ್ ಬಳಸಲಾಗುತ್ತದೆ ಅಲ್ಲದೆ ಇದನ್ನು ಬಳಸಿ ಬಿಸಾಡುವುದನ್ನು ವಿಲೇವಾರಿ ಮಾಡುವಲ್ಲಿ ಅನೇಕ ಸಮಸ್ಯೆಯುಂಟಾಗುತ್ತಿದೆ. ಆದರೆ ಇದನ್ನು ನಿರ್ವಹಿಸುವಲ್ಲಿ ಬಿನೆಶ್‌ ದೇಸಾಯಿ ಯಶಸ್ವಿಯಾಗಿದ್ದಾರೆ.

Advertisement

ವಾಣಿಜ್ಯ ಸಂಸ್ಥೆ, ಶಾಪಿಂಗ್‌ ಮಾಲ್‌ ಇನ್ನಿತರ ಕಚೇರಿ ಮತ್ತು ಸಾರ್ವಜನಿಕರಿಂದ ಸಂಗ್ರಹಿಸುವ ಮೊದಲ 72 ಗಂಟೆ ಅದನ್ನು ಮುಟ್ಟದೆ ಅನಂತರ ಮೂರು ದಿನಗಳವರೆಗೆ ಪ್ರತ್ಯೇಕ ತೊಟ್ಟಿಯಲ್ಲಿ ಸಂಗ್ರಹಿಸಿಡಲಾಗುತ್ತದೆ ಬಳಿಕ ಆ ತ್ಯಾಜ್ಯಗಳನ್ನು ಕೊಳದಲ್ಲಿ ಸೋಂಕು ನಿವಾರಕಗಳನ್ನು ಹಾಕಿ ತೊಳೆದು ಸರಿಯಾದ ರೀತಿಯ ಸ್ಯಾನಿಟೇಶನ್‌ ಪ್ರೊಟೊಕಾಲ್‌ಗ‌ಳನ್ನು ಬಳಸಿ ಬಳಿಕ ಅದನ್ನು ಚೂರು ಚೂರು ಮಾಡಿ, ಅದನ್ನು ಕಾಗದದ ಗಿರಣಿಗಳಿಗೆ ಹಾಕಿ ಅಲ್ಲಿಂದ ಅವುಗಳನ್ನು ಸಂಗ್ರಹಿಸಿ ಕಾಗದ ತ್ಯಾಜ್ಯಕ್ಕೆ ಸೇರಿಸಲಾಗುತ್ತದೆ. ಅನಂತರ ಬೈಂಡರ್‌ನೊಂದಿಗೆ ಬೇರಸಲಾಗುತ್ತದೆ ಆ ಮಿಶ್ರಣವನ್ನು ಅಚ್ಚುಗಳಲ್ಲಿ ಹೊಂದಿಸಿ 5-6 ಗಂಟೆಗಳ ಕಾಲ ಇಡಲಾಗುತ್ತದೆ. ಇದಾದ ಬಳಿಕ ಇಟ್ಟಿಗೆಗಳನ್ನು ನೈಸರ್ಗಿಕವಾಗಿ ಮೂರು ದಿನಗಳವರೆಗೆ ಒಣಗಿಸಲಾಗುತ್ತದೆ. ಅನಂತರ ಉತ್ಪನ್ನ ಬಳಕೆಗೆ ಸಿದ್ಧವಾಗುತ್ತದೆ.

ಅಂತಿಮ ಉತ್ಪನ್ನ ಎಷ್ಟು ಸುರಕ್ಷಿತ?
ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳು ಅಸುರಕ್ಷಿತ ಅದರಲ್ಲೂ ಸೋಂಕು ಉತ್ತುಂಗದಲ್ಲಿರುವಾಗ ಇದನ್ನು ಬಳಸಿ ಇಟ್ಟಿಗೆ ನಿರ್ಮಾಣವಾಗುತ್ತದೆ ಎಂದರೆ ಅದು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಭಾವನೆ ಮೂಡುವುದು ಸಹಜ. ಅದಕ್ಕಾಗಿಯೇ ಇದನ್ನು ವಿಶೇಷ ರೀತಿಯಲ್ಲಿ ಮುತುವರ್ಜಿಯಲ್ಲಿ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಮಾಡಲಾಗುತ್ತದೆ. ಇದನ್ನು ಎಲ್ಲ ರೀತಿಯ ಕಟ್ಟಡ ನಿರ್ಮಾಣಕ್ಕೆ ಬಳಸಬಹುದಾಗಿದೆ. ಅದರಲ್ಲಿಯೂ ಇವರು ವೈದ್ಯಕೀಯ ತಾಜ್ಯಗಳನ್ನು ಸಂಗ್ರಹಿಸುವಾಗ ಹೆಚ್ಚಿನ ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ. ಇದನ್ನು ಅವರು ತಮ್ಮ ಲ್ಯಾಬ್‌ ಮತ್ತು ಪ್ಯಾಕ್ಟರಿಗಳಲ್ಲಿ ಮಾಡಿ ನೋಡಿದ ಬಳಿಕವೇ ಜನರಿಗೆ ಪರಿಚಯಿಸಿದ್ದು ಹಾಗಾಗಿ ಇದು ತ್ಯಾಜ್ಯ ನಿರ್ವಹಣೆ ಮಾಡುವುದಲ್ಲದೆ ಮರುಬಳಕೆಗೆ ಉತ್ತಮವಾಗಿದೆ. ಇದರಿಂದ ಯಾವುದೇ ಅಪಾಯವಿಲ್ಲ.

ಈ ಇಟ್ಟಿಗೆಗಳನ್ನು ಎಲ್ಲೆಲ್ಲಿ ಬಳಸಬಹುದು?
ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದು ಅದಕ್ಕೆ ಹೆಚ್ಚಿನ ವೆಚ್ಚ ತಗಲುತ್ತದೆ ಎಂದರೆ ಅಥವಾ ಮರು ನಿರ್ಮಾಣದ ಗೋಡೆ ಅಥವಾ ಮನೆಯ ಒಳಾಂಗಣ, ಅಪಾರ್ಟ್‌ಮೆಂಟ್‌ ಮತ್ತು ಪರಿಸರ ಕೇಂದ್ರ, ಶಾಲೆಗಳನ್ನು ರಚಿಸಲು ಈ ಇಟ್ಟಿಗೆಗಳನ್ನು ಬಳಸಬಹುದಾಗಿದೆ. ಪಿಪಿಇ ಮತ್ತು ಕಾಗದದ ತ್ಯಾಜ್ಯಗಳನ್ನು ಬಳಸಿ ತಯಾರಿಸಿದ ವಸ್ತು ಸಂಗ್ರಹಾಲಯವೂ ಇದೆ. ಇತ್ತೀಚೆಗೆ ಇದರಿಂದ ಪೀಠೊಪಕರಣ ಮತ್ತು ಮನೆಯ ಅಲಂಕಾರಿಕ ಉತ್ಪನ್ನಗಳು ಸೇರಿದಂತೆ 180ಕ್ಕೂ ಹೆಚ್ಚು ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತಿದ್ದು ಇದಕ್ಕೆ 106 ರೀತಿಯ ತ್ಯಾಜ್ಯಗಳನ್ನು ಬಳಸಿಕೊಂಡಿರುವುದು ವಿಶೇಷ.

ಭಾರತದಲ್ಲಿ ತ್ಯಾಜ್ಯ ನಿರ್ವಹಣೆ ಹೇಗೆ?
ಪ್ರಸ್ತುತ ಭಾರತವು 6ನೇ ಅತಿದೊಡ್ಡ ತ್ಯಾಜ್ಯ ಉತ್ಪಾದಕ ರಾಷ್ಟ್ರ ಮತ್ತು ನಮ್ಮಲ್ಲಿ ಸುಮಾರು 43,000 ಕೈಗಾರಿಕೆಗಳಿದ್ದು ಪ್ರತಿದಿನ 19,000ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ದೇಸಾಯಿಯವರು ಹೇಳುವ ಪ್ರಕಾರ ಸಾಮಾನ್ಯವಾಗಿ ನಾವು ದೈನಂದಿನ ಬದುಕಿನಲ್ಲಿ ಅತಿ ಕಡಿಮೆ ಮರುಬಳಕೆ ವಿಧಾನವನ್ನು ಬಳಸುತ್ತಿದ್ದು ಇದರ ಕಾರ್ಯ ನಿರ್ವಹಣೆ ಬಗ್ಗೆ ಅರ್ಥಮಾಡಿಕೊಂಡು ತ್ಯಾಜ್ಯವನ್ನು ಸುಸ್ಥಿರ ರೀತಿಯಲ್ಲಿ ನಿರ್ಮೂಲನೆ ಮಾಡುವುದು ಕಡ್ಡಾಯವಾಗಿದೆ. ವಸ್ತುಗಳನ್ನು ತಯಾರಿಸಲು ತಯಾರಕರು ಏನು ಬಳಸುತ್ತಿದ್ದಾರೆ ಮತ್ತು ಮರುಬಳಕೆ ಮಾಡಲಾಗದ ವಸ್ತುಗಳನ್ನು ಹೇಗೆ ಕಡಿಮೆ ಮಾಡಬೇಕು ಅಥವಾ ಉತ್ಪಾದಿಸುತ್ತಿರುವ ತ್ಯಾಜ್ಯಗಳನ್ನು ಹೇಗೆ ಮರುಬಳಕೆ ಮಾಡಬಹುದು ಎಂದು ಎಚ್ಚರಿಕೆಯಿಂದ ಹೆಚ್ಚೆಯನ್ನಿಡಬೇಕು. ಗ್ರಾಹಕರು ಕೂಡ ಯಾವುದನ್ನು ಹೆಚ್ಚು ಬಳಸಬೇಕು ಯಾವುದನ್ನು ಬಳಸಬಾರದು ಎಂಬುದನ್ನು ಸರಿಯಾಗಿ ಯೋಚಿಸಿ ನೋಡಬೇಕು ಅಂದಾಗ ಮಾತ್ರ ತ್ಯಾಜ್ಯ ನಿರ್ವಹಣೆ ಸಾಧ್ಯ. ಒಬ್ಬ ಮನುಷ್ಯನಿಂದ ಉತ್ಪಾದನೆಯಾದ ತ್ಯಾಜ್ಯ ಇನ್ನೊಬ್ಬನಿಗೆ ನಿಧಿಯಾಗಿ ಪರಿಣಮಿಸಬಹುದು.

ದೇಸಾಯಿಯವರ ಪ್ರಕಾರ ತಂತ್ರಜ್ಞಾನ ವಿಕಸನಗೊಂಡ ಹಾಗೆ ತ್ಯಾಜ್ಯಗಳು ಜಾಸ್ತಿಯಾಗತೊಡಗಿತು ಇದು ಸಾಗರ ಮತ್ತು ಮಣ್ಣಿನಲ್ಲಿ ಸೇರಿ ಅದನ್ನು ಕಲುಷಿತ ಮಾಡುತ್ತಿದ್ದು ಇದು ನಶಿಸಿ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಪ್ರಕೃತಿಯಲ್ಲಿ ತ್ಯಾಜ್ಯ ಸಂಗ್ರಹ ಜಾಸ್ತಿಯಾಗಿದೆ. ಹಾಗಾಗಿ ಆದಷ್ಟು ನಾವು ಶೂನ್ಯ- ತ್ಯಾಜ್ಯ ಜೀವನಶೈಲಿಯನ್ನು ಅಳವಡಿಸಿಕೊಂಡು, ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಬೇಕು. ಆಗ ಮಾತ್ರ ಪರಿಸರ ಸ್ವಚ್ಛವಾಗಲು ಸಾಧ್ಯ.

-ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.