Advertisement

ಕಾಸಗಲದ ಬಿಂದಿ

10:33 PM Dec 19, 2019 | Sriram |

ಹೆಣ್ಣಿನ ಹಣೆಯಲ್ಲಿ ಕಣ್ಣಿಗೆ ಕಾಣುವಂತಹ ಬಿಂದಿ ಇರಬೇಕು ಎಂದು ಹೇಳುವ ಕಾಲವೊಂದಿತ್ತು. ಅದು ಹೆಣ್ಣು ಮಕ್ಕಳಿಗೂ ಬಹಳ ಇಷ್ಟ. ಕಾಸಗಲದ ಬಿಂದಿಯೊಂದು ಹಣೆಯಲ್ಲಿದ್ದರೆ ಹೊರಗಡೆ ತೆರಳುವ ಮಹಿಳೆಗೆ ಏನೋ ಧೈರ್ಯ. ಕ್ರಮೇಣ ಬಿಂದಿಗಳ ಗಾತ್ರವೂ ಸಣ್ಣದಾಗುತ್ತಾ ಹೋಯಿತು. ಕಣ್ಣಿಗೆ ಕಂಡೂ ಕಾಣದಷ್ಟು ಚಿಕ್ಕದಾಗಿರುವ ಬಿಂದಿ ಮಹಿಳೆಯರ ಹಣೆಯಲ್ಲಿ ಜಾಗ ಪಡೆದವು. ಏನೇ ಆದರೂ ಹೆಣ್ಣಿನ ಮುಖಕ್ಕೆ ಬಿಂದಿಯೇ ಲಕ್ಷಣ. ಎಷ್ಟೇ ಅಲಂಕಾರ ಮಾಡಿದರೂ ಮುಖಕ್ಕೆ ಬಿಂದಿ ಹಾಕದಿದ್ದರೆ ಆ ಅಲಂಕಾರಗಳೆಲ್ಲ ಗೌಣವಾಗಿ ಹೋಗುತ್ತವೆ. ಆ ಕಾರಣಕ್ಕೆ ಬಿಂದಿ ಅಲಂಕಾರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

Advertisement

ಬಿಂದಿಯಲ್ಲಿ ಹಲವಾರು ಬಗೆಯಿದೆ. ಮಿರಮಿರ ಮಿಂಚುವ ಬಿಂದಿ, ಉದ್ದನೆಯ ಬಿಂದಿ ಹೀಗೆ ಅನೇಕ ವಿನ್ಯಾಸದ ಬಿಂದಿಗಳು ದೊರೆಯುತ್ತವೆ. ಇವುಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಬೇಕು. ಅದು ನಿಮ್ಮ ಮುಖಕ್ಕೆ ಹೊಂದಿಕೊಂಡಿರಬೇಕು. ಮಾಡರ್ನ್ ಡ್ರೆಸ್‌ ಹಾಕುವಾಗ ಬಿಂದಿ ಅಷ್ಟಾಗಿ ಹೊಂದಿಕೊಳ್ಳುವುದಿಲ್ಲವೆಂದು ಎಲ್ಲರ ನಂಬಿಕೆ. ಆದ್ದರಿಂದಲೇ ಅಂತಹ ಬಟ್ಟೆ ಹಾಕುವಾಗ ಸಣ್ಣ ಗಾತ್ರದ ಬಿಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈಗ ದೊಡ್ಡ ಬಿಂದಿಗಳೂ ಮಾಡರ್ನ್ ಡ್ರೆಸ್‌ನ ಜತೆ ತಳುಕು ಹಾಕಿಕೊಂಡಿವೆ.ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂದಿ ಹವಾ ಜೋರಾಗಿತ್ತು. ಬಿಂದಿ ಚಾಲೆಂಜ್‌ಸೆಲೆಬ್ರಿಟಿಗಳೂ ಸೇರಿದಂತೆ ಎಲ್ಲರೂ ಪ್ರಯತ್ನಿಸಿದರು.

ಆಯ್ಕೆ ಮಾಡುವಾಗ ಗಮನಿಸಿ
ದೊಡ್ಡ ಬಿಂದಿಯನ್ನು ಆಯ್ಕೆ ಮಾಡುವಾಗ ಹೊಳೆಯುವ ಬಿಂದಿಗಿಂತ ಪ್ಲೆ„ನ್‌ ಬಿಂದಿಗಳೇ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಡ್ರೆಸ್‌ಗೆ ಮ್ಯಾಚ್‌ ಆಗಿರುವ ಬಣ್ಣ ಅಥವಾ ಗಾಢ ಬಣ್ಣಗಳಾದ ಕೆಂಪು, ಕಪ್ಪು ಬಣ್ಣಗಳ ಬಿಂದಿಯನ್ನು ಆಯ್ದುಕೊಳ್ಳಬಹುದು. ಮುಖ ಅಗಲ, ತೆಳ್ಳಗೆ, ಗುಂಡಗೆ ಹೇಗೆ ಇದ್ದರೂ ಕೂಡ ಇದು ಹೊಂದಿಕೊಳ್ಳುತ್ತದೆ.ಎಲ್ಲ ವಿಧದ ಬಟ್ಟೆಗಳಿಗೂ ಈ ಬಿಂದಿಗಳು ಹೆಚ್ಚು ಸೂಕ್ತವಾಗಿರುತ್ತವೆ. ಬಿಂದಿಗಳು ಪ್ರೊಫೆಷನಲ್‌ ಲುಕ್‌ನ್ನು ನೀಡುತ್ತವೆ. ಲಾಂಗ್‌ ಸ್ಕರ್ಟ್‌ಗೆ ಆಕರ್ಷಕ ಲುಕ್‌ ನೀಡಿದರೆ ಕುರ್ತಾ ಹಾಗೂ ಟ್ರೆಡಿಷನಲ್‌ ಲುಕ್‌ ನೀಡುತ್ತದೆ. ಬಿಂದಿ ಇಷ್ಟ ಪಡುವವರೂ ಒಂದು ಸಲ ಕಾಸಗಲದ ಬಿಂದಿಯನ್ನು ಹಾಕಿ ನೋಡಿ.

-   ಸುಷ್ಮಾ

Advertisement

Udayavani is now on Telegram. Click here to join our channel and stay updated with the latest news.

Next