Advertisement

ʻಅಜ್ಜʼನಾದ ಬಿಲ್‌ಗೇಟ್ಸ್‌: ಮೊದಲ ಮಗುವಿಗೆ ಜನ್ಮ ನೀಡಿದ ಬಿಲ್‌ಗೇಟ್ಸ್‌ ಪುತ್ರಿ

07:46 PM Mar 05, 2023 | Team Udayavani |

ವಾಷಿಂಗ್ಟನ್‌: ಬಿಲ್‌ಗೇಟ್ಸ್‌ ಮತ್ತು ಮಿಲಿಂಡಾ ಗೇಟ್ಸ್‌ ಅವರ ಹಿರಿಯ ಮಗಳು ಜೆನ್ನಿಫರ್‌ ತಮ್ಮ‌ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್‌ ʻಅಜ್ಜʼನಾಗಿದ್ದಾರೆ.

Advertisement

ಈತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ ಈ ದಿಗ್ಗಜ ಉದ್ಯಮಿ ಭಾರತದ ನಾಯಕರು, ತಾರೆಯರ ಜೊತೆಗೆ ಮಾತುಕತೆ ನಡೆಸಿದ್ದರು. ಭಾರತದ ಆರ್ಥಿಕತೆ, ಆರೋಗ್ಯ ವ್ಯವಸ್ಥೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಸುದ್ದಿಯಾಗಿದ್ದರು. ಆದರೆ ಇದೀಗ ಬಿಲ್‌ಗೇಟ್ಸ್‌ ಅಜ್ಜನಾಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಬಿಲ್‌ಗೇಟ್ಸ್‌ ಮಗಳು ಜೆನ್ನಿಫರ್‌ ತಮ್ಮ‌ ಮೊದಲ ಮಗುವಿಗೆ ಜನ್ಮ ನೀಡಿದ್ದು, ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʻನಮ್ಮ ಆರೋಗ್ಯವಂತ ಪುಟ್ಟ ಕುಟುಂಬದಿಂದ ಪ್ರೀತಿಯನ್ನು ಕಳುಹಿಸುತ್ತಿದ್ದೇವೆʼ ಎಂದು ಬರೆದುಕೊಂಡಿದ್ದಾರೆ.

 

Advertisement

ಇದೇ ಪೋಸ್ಟನ್ನು ಬಿಲ್‌ಗೇಟ್ಸ್‌ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲೂ ಹಂಚಿಕೊಂಡಿದ್ದಾರೆ. ಅಲ್ಲದೆ ಮಿಲಿಂದಾ ಗೇಟ್ಸ್‌ ಕೂಡಾ ಸಂತಸ ವ್ಯಕ್ತಪಡಿಸಿ ಕಾಮೆಂಟ್‌ ಮಾಡಿದ್ದಾರೆ.

ಜೆನ್ನಿಫರ್‌ ಗೇಟ್ಸ್‌ ಮತ್ತು ನಯೆಲ್‌ ನಾಸರ್‌ 5 ವರ್ಷದ ಪ್ರೀತಿಯ ಬಳಿಕ 2021ರ ಅಕ್ಟೋಬರ್‌ನಲ್ಲಿ ವಿವಾಹವಾಗಿದ್ದರು. ಜೆನ್ನಿಫರ್‌ ಮತ್ತು ನಾಸರ್‌ ಇಬ್ಬರೂ ಇಕ್ವೆಸ್ಟ್ರಿಯನ್‌ ಸ್ಪರ್ಧೆಯಲ್ಲಿ ಭಾಗವಹಿಸುವವರಾಗಿದ್ದು ಪತಿ ನಾಸರ್‌ ಒಲಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದಾರೆ.

 

ಕಳೆದ ವರ್ಷ ನವೆಂಬರ್‌ನಲ್ಲಿ ಜೆನ್ನಿಫರ್‌ ತಾನು ಪ್ರಗ್ನೆಂಟ್‌ ಆಗಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ ನಯೆಲ್‌ ಜತೆಗಿನ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ : Anti-Bullying Squad…13ನೇ ವಯಸ್ಸಿನಲ್ಲೇ ಆ್ಯಪ್ ಕಂಡು ಹಿಡಿದ ದಿಟ್ಟೆ…ಯಾರೀಕೆ ಅನುಷ್ಕಾ?

Advertisement

Udayavani is now on Telegram. Click here to join our channel and stay updated with the latest news.

Next