ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿಯ ಆಶ್ರಯದಲ್ಲಿ ಅಸೋಸಿಯೇಶನ್‌ನ ಸ್ಥಳಿಯ ಸಮಿತಿಗಳಿಗಾಗಿ ಮೂರನೇ ವಾರ್ಷಿಕ ಗುರುನಾರಾಯಣ ತುಳು ನಾಟಕ ಸ್ಪರ್ಧೆ-2018 ಅ. 26 ರಿಂದ ಅ. 28 ರವರೆಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಯಶಸ್ವಿಯಾಗಿ ಜರಗಿತು.
ಸಮಾರೋಪ ಸಮಾರಂಭವು ಅ. 28 ರಂದು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಡಾ| ಭರತ್ ಕುಮಾರ್ ಪೊಲಿಪು ಅವರು ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿದರು. ಮೂರು ದಿನಗಳ ಕಾಲ 15 ತಂಡಗಳನ್ನೊಳಗೊಂಡ ಈ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕದ ಪ್ರಥಮ ಬಹುಮಾನವನ್ನು ಗೋರೆಗಾಂವ್ ಸ್ಥಳೀಯ ಸಮಿತಿಯ “ಈದಿ’ ನಾಟಕ ಪಡೆದರೆ, ದ್ವಿತೀಯ ಬಹುಮಾನವನ್ನು ಅಂಧೇರಿ ಸ್ಥಳೀಯ ಸಮಿತಿಯ “ನಾಗ ಸಂಪಿಗೆ’ ಹಾಗೂ ತೃತೀಯ ಬಹುಮಾನವನ್ನು ನಲಸೋಪರ-ವಿರಾರ್ ಸ್ಥಳೀಯ ಸಮಿತಿಯ “ಯಾನ್ ಏರ್’ ನಾಟಕ ನಡೆಯಿತು.
ನಾಟಕ ಸ್ಪರ್ಧೆಯ ಪ್ರಥಮ ಸ್ಥಾನಿ ಗೋರೆಗಾಂವ್ ಸ್ಥಳೀಯ ಕಚೇರಿಯು 25 ಸಾವಿರ ರೂ. ನಗದು, ಸ್ಮರಣಿಕೆಯನ್ನು ಪಡೆದರೆ, ದ್ವಿತೀಯ ಅಂಧೇರಿ ಸ್ಥಳೀಯ ಕಚೇರಿ ತಂಡವು 15 ಸಾವಿರ ರೂ. ನಗದು, ಫಲಕ ಹಾಗೂ ತೃತೀಯ ಸ್ಥಾನವನ್ನು ಪಡೆದ ನಲಸೋಪರ-ವಿರಾರ್ ಸ್ಥಳೀಯ ಕಚೇರಿ ತಂಡವು 10 ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಮುಡಿಗೇರಿಸಿಕೊಂಡಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಅತಿಥಿ-ಗಣ್ಯರುಗಳಾದ ಥಾಣೆ ಬಂಟ್ಸ್‌ನ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಏಷ್ಯಾಟಿಕ್ ಕ್ರೇನ್ ಸರ್ವಿಸಸ್ ಇದರ ಸಿಎಂಡಿ ಗಣೇಶ್ ಆರ್. ಪೂಜಾರಿ, ಅದಿತ್ಯ ಬಿರ್ಲಾ ಸನ್‌ಲೈಫ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್ ಇದರ ಎಕ್ಸಿಕ್ಯೂಟಿವ್, ಉಪಾಧ್ಯಕ್ಷ ಅಶೋಕ್ ಸುವರ್ಣ, ಕಟಪಾಡಿ ವಿಶ್ವನಾಥ ಕ್ಷೇತ್ರದ ಗೌರವ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಘೋಡ್ ಬಂದರ್ ಕನ್ನಡ ಅಸೋಸಿಯೇಶನ್ ಕಾರ್ಯದರ್ಶಿ ಹರೀಶ್ ಡಿ. ಸಾಲ್ಯಾನ್ ಬಜೆಗೋಳಿ, ಭಾರತ್ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ್ ಎಂ. ಸಾಲ್ಯಾನ್, ಗಂಗಾಧರ ಜೆ. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಶ್ರೀನಿವಾಸ ಆರ್. ಕರ್ಕೇರ, ಗೌರವ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.
ಸ್ಪರ್ಧೆಯ ತೀರ್ಪುಗಾರರಾಗಿದ್ದ ಪ್ರಸಿದ್ಧ ರಂಗಕರ್ಮಿಗಳಾದ ಮಹಿಮ್ ರಮೇಶ್, ಜಗನ್ ಪವಾರ್ ಬೇಕಲ್, ಸಂತೋಷ್ ನಾಯಕ್ ಪಟ್ಲ ಹಾಗೂ ನಾಟಕದ ಸಂಯೋಜಕರಾದ ಡಾ| ಭರತ್ ಕುಮಾರ್ ಪೊಲಿಪು, ಮೋಹನ್ ಮಾರ್ನಾಡ್, ಓಂದಾಸ್ ಕಣ್ಣಂಗಾರ್, ಸುಂದರ್ ಕೋಟ್ಯಾನ್, ಹರೀಶ್ ಹೆಜ್ಮಾಡಿ, ಚಿತ್ರನಟರಾದ ಬಡೂxರು ಮಹಮ್ಮದ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ವಿದ್ದು ಉಚ್ಚಿಲ್ ಮಂಗಳೂರು ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಅಸೋಸಿಯೇಶನ್‌ನ ಗೌರವ ಪ್ರದಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಹ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಉಪ ಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವಂದಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಲ್ಲವರ ಅಸೋಸಿಯೇಶನ್ ಹಾಗೂ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮುಂಬಯಿ ಮಹಾನಗರದ ರಂಗ ಕಲಾವಿದರು, ನಿರ್ದೇ ಶಕರುಗಳು, ಕಲಾಭಿಮಾನಿಗಳು, ಅಧಿಕ
ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅತ್ಯುತ್ತಮ ನಾಟಕ
ಪ್ರಥಮ -ಗೋರೆಗಾಂವ್ ಸ್ಥಳೀಯ ಸಮಿತಿ, ನಾಟಕ-ಈದಿ, ನಿರ್ದೇಶನ : ಲತೇಶ್ ಕುಮಾರ್, ಕಥೆ : ಸಮೀರ್ ಪೇಣRರ್, ಸಂಭಾಷಣೆ ಲತೇಶ್. ದ್ವಿತೀಯ : ಅಂಧೇರಿ ಸ್ಥಳೀಯ ಸಮಿತಿ, ನಾಟಕ : ನಾಗ ಸಂಪಿಗೆ, ನಿರ್ದೇಶನ : ಮನೋಹರ್ ಶೆಟ್ಟಿ ನಂದಳಿಕೆ, ಕಥೆ : ಡಾ| ಚಂದ್ರಶೇಖರ್ ಕಂಬಾರ, ಸಂಭಾಷಣೆ : ನಾರಾಯಣ ಶೆಟ್ಟಿ ನಂದಳಿಕೆ. ತೃತೀಯ : ನಲಸೋಪರ-ವಿರಾರ್ ಸ್ಥಳೀಯ ಸಮಿತಿ, ನಾಟಕ : ಯಾನ್ ಏರ್, ನಿರ್ದೇಶನ : ಸುಮಿತ್ ಅಂಚನ್, ಕಥೆ -ಸಂಭಾಷಣೆ : ಸುನೀಲ್ ಶೆಟ್ಟಿ.
ಚಿತ್ರ ವರದಿ: ರೋನ್ಸ್ ಬಂಟ್ವಾಳ್