Advertisement

ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ : ನೂತನ ಪದಾಧಿಕಾರಿಗಳ ಪದಗ್ರಹಣ

01:13 PM Aug 15, 2018 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮೀರಾರೋಡ್‌ ಸ್ಥಳೀಯ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಆಟಿಡೊಂಜಿ ದಿನ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಆ. 11 ರಂದು ಮೀರಾರೋಡ್‌ ಪೂರ್ವದ ಜಹಾಂಗೀರ್‌ ಟವರ್‌ನ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ನೂತನ ಅದ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಲವಾರು ಮಹತ್ವಾಕಾಂಕ್ಷೆ ಯೋಜನೆಯೊಂದಿಗೆ ಕಾರ್ಯವೆಸಗುವ ಮುಂಬಯಿ ಬಿಲ್ಲವರ ಅಸೋಸಿಯೇಶನ್‌ ತವರೂರು ಪಡುಬೆಳ್ಳೆಯಲ್ಲಿ ಸುಮಾರು 17 ಎಕರೆ ವಿಸ್ತೀರ್ಣದಲ್ಲಿ ವಿದ್ಯಾ ಸಂಕುಲವನ್ನು ಸ್ಥಾಪಿಸಲು ಮುಂದಾಗಿದೆ. ಪ್ರಾರಂಭವಾಗಿರುವ ಕಾಮಗಾರಿ ಪೂರ್ಣಗೊಳ್ಳಲು ಪ್ರತಿಯೊಬ್ಬರು ಸ್ವಜಾತಿ ಬಾಂಧವರ ಅಭಯ ಹಸ್ತ ಅನಿವಾರ್ಯವಾಗಿದೆ. ಮನುಕುಲದ ಚಿಂತನೆಗೆ ಓಗೊಡುವ ಸಂಘಟನೆ ನಮ್ಮದಾಗಬೇಕು. ಇದನ್ನು ಇಂದು ಆಯ್ಕೆಯಾದ ಪದಾಧಿಕಾರಿಗಳು ಈಡೇರಿಸುವ ಭರವಸೆಯಿದೆ ಎಂದು ನುಡಿದು ಶುಭಹಾರೈಸಿದರು.

ದ್ವಿತೀಯ ಬಾರಿ ಪುನರಾಯ್ಕೆಗೊಂಡ ಮೀರಾರೋಡ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಎಂ. ಸಾಲ್ಯಾನ್‌ ಅವರು ಮಾತನಾಡಿ, ನಿರೀಕ್ಷೆಗೂ ಮೀರಿ ಅಸೋಸಿಯೇಶನ್‌ನ ಎಲ್ಲಾ ಸದಸ್ಯರು, ಮೀರಾರೋಡ್‌ ಪರಿಸರದ ವಿವಿಧ ಸಮುದಾಯದ ಜನತೆ ತುಳು-ಕನ್ನಡಪರ ಸಂಘ-ಸಂಸ್ಥೆಗಳು, ಕನ್ನಡ ಪತ್ರಿಕೆಗಳು, ಹಿತೈಷಿಗಳು ಸಹಕರಿಸಿ ಹರಸಲಿದ್ದಾರೆ. ನಿಮ್ಮೆಲ್ಲರ ತ್ಯಾಗಮಯ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾಯಿತು. ತಮಗೆಲ್ಲಾ ಅಂತರಾಳದ ಕೃತಜ್ಞತೆಗಳು ಎಂದರು. ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಎನ್‌. ಪಿ. ಕೋಟ್ಯಾನ್‌ ಅವರು ವರದಿ ವಾಚಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಮುಂದಿನ ಮೂರು ವರ್ಷಗಳ ಅವಧಿಯ ಕಾರ್ಯಕರ್ತರ ಹೆಸರನ್ನು ಘೋಷಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ವೇದಿಕೆಯಲ್ಲಿ ಕೇಂದ್ರ ಕಾರ್ಯಾಲಯದ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಹರೀಶ್‌ ಜಿ. ಅಮೀನ್‌, ದಯಾನಂದ ಆರ್‌. ಪೂಜಾರಿ ಕಲ್ವಾ, ಶ್ರೀನಿವಾಸ ಆರ್‌. ಕರ್ಕೇರ, ಭಾರತ್‌ ಬ್ಯಾಂಕಿನ ನಿರ್ದೇಶಕ ಗಂಗಾಧರ ಪೂಜಾರಿ, ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಉದಯ ಕೋಟ್ಯಾನ್‌, ಭೋಜ ಸಾಲ್ಯಾನ್‌, ಸುಂದರ ಪೂಜಾರಿ ಉಪಸ್ಥಿತರಿದ್ದರು.

ಚಲನಚಿತ್ರ ಹಾಗೂ ರಂಗನಟ ಜಿ. ಕೆ. ಕೆಂಚನಕೆರೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಆಟಿ ತಿಂಗಳ ವಿಶೇಷತೆಯನ್ನು ಸಾರುವ ಸುಮಾರು ಮೂವತ್ತಕ್ಕೂ ಅಧಿಕ ತಿಂಡಿ-ತಿನಸುಗಳನ್ನು ಮಹಿಳಾ ವಿಭಾಗದವರು ಪ್ರದರ್ಶಿಸಿದರು. ಅಲ್ಲದೆ, ಸದಸ್ಯೆಯರು, ಮಕ್ಕಳು, ಯುವ ವಿಭಾಗದಿಂದ ನೃತ್ಯ ವೈವಿಧ್ಯ ನಡೆಯಿತು. 

Advertisement

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next