Advertisement

ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌: ವಾರ್ಷಿಕೋತ್ಸವ

05:48 PM Jan 23, 2019 | Team Udayavani |

ಮುಂಬಯಿ: ತುಳು-ಕನ್ನಡಿಗರು ಒಗ್ಗಟ್ಟಾದಾಗ ಸಮಾಜದಲ್ಲಿ ಬಲಿಷ್ಠವಾಗಲು ಮತ್ತು  ಜಾತಿ, ಧರ್ಮದಲ್ಲಿ ಭೇದ-ಭಾವ ಇಲ್ಲದಾಗ ಸುಶೀಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಎಲ್ಲರೂ ಶಿಕ್ಷಣವನ್ನು ಪಡೆದರೆ ಸಾಮಾಜಿಕವಾಗಿ ಗೌರವಯುತವಾಗಿ ಬಾಳಬಹುದು. ಇಂದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವೂ ಆಗಿತ್ತು ಎಂದು ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ನುಡಿದರು.

Advertisement

ಜ. 19 ರಂದು ಮೀರಾರೋಡ್‌ ಅಸ್ಮಿತಾ ಕ್ಲಬ್‌ ಲಾನ್‌ನಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ 19 ನೇ ವಾರ್ಷಿಕೋತ್ಸವ ಹಾಗೂ ವಿದ್ಯಾನಿಧಿ ಸಂಗ್ರಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧರ್ಮ ಮಾರ್ಗದ ಮೂಲಕ ಜೀವನವನ್ನು ಯಶಸ್ವಿಗೊಳಿಸಿ ಸಮಾಜದಲ್ಲಿ ಸಹಮತವನ್ನು ಕಂಡುಕೊಳ್ಳಬೇಕು. ಬಿಲ್ಲವರ ಅಸೋಸಿಯೇಶನ್‌ ಪಡುಬೆಳ್ಳೆಯಲ್ಲಿ 15 ಲಕ್ಷ ರೂ. ಗಳನ್ನು ಶಿಕ್ಷಣಕ್ಕಾಗಿ ನೀಡಿದ್ದು, ಅದರಲ್ಲಿ ಆಶ್ರಮದ 50 ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಗುರುನಾರಾಯಣ ರಾತ್ರಿ ಶಾಲೆಯ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಎಲ್ಲಾ ಸವಲತ್ತುಗಳನ್ನು ನೀಡುತ್ತಿದೆ. ಅಸೋಸಿಯೇಶನ್‌ನ ಎಲ್ಲಾ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಾರಾಷ್ಟ್ರ ಕಾಂಗ್ರೆಸ್‌ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಸೈಯ್ಯದ್‌ ಮುಜಾಫರ್‌ ಹುಸೇನ್‌ ಅವರು ಮಾತನಾಡಿ, ದಕ್ಷಿಣ ಕನ್ನಡಿಗರ ಪ್ರೀತಿ-ವಿಶ್ವಾಸವನ್ನು ನನ್ನ ಹೃದಯಲ್ಲೂ ಇಂದು ಜೀವಂತವಾಗಿ ಉಳಿದಿದೆ. ಸೌತ್‌ ಇಂಡಿಯನ್‌ ಶಾಲೆಯಲ್ಲಿ ಶಿಕ್ಷಣ ಪಡೆದ ನಾನು ತುಳುವರೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದೇನೆ. ಬಿಲ್ಲವ ಸಮಾಜ ಇಂದು ಇಷ್ಟೊಂದು ಪ್ರಗತಿ ಕಾಣಲು ಬ್ರಹ್ಮಶ್ರೀ ನಾರಾಯಣ ಗುರುಗಳು ಕಾರಣ. ಅವರ ಶೈಕ್ಷಣಿಕ, ಸಂಘಟನಾತ್ಮಕ ಚಿಂತನೆ ಬಿಲ್ಲವ ಸಮಾಜ ಇಂದು ಉನ್ನತ ಮಟ್ಟಕ್ಕೇರಲು ಸಾಧ್ಯವಾಗಿದೆ. ಶಿಕ್ಷಣ ನಿಧಿ ಸಂಗ್ರಹಣೆಯ ಮೂಲಕ ಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದಲೆ ನಡೆಯುತ್ತಿದೆ ಎಂದರು.

ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್‌ ಇದರ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್‌ ಅವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಹಳೆಯಂಗಡಿ ಬಿಲ್ಲವರ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್‌, ಮಹಿಳಾ ಕ್ರೀಡಾಪಟು ಕಾವ್ಯಾ ಜೆ. ಕರ್ಕೇರ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಅತಿಥಿ-ಗಣ್ಯರುಗಳನ್ನು ಸಮಿತಿಯ ವತಿಯಿ ಗೌರವಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ನಾರಾಯಣ ಪೂಜಾರಿ, ಉದ್ಯಮಿ ಎಸ್‌. ಚಂದ್ರಶೇಖರ, ಸಾಯಿಬಾಬಾ ಕ್ಯಾಟರರ್ನ ಮಾಲಕ ಶೇಖರ ಕೆ. ಪೂಜಾರಿ, ಸಮಾಜ ಸೇವಕಿ ಲಕ್ಷಿ¾à ಕೋಟ್ಯಾನ್‌, ಬಿಲ್ಲವರ ಅಸೋಸಿಯೇಶನ್‌ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ್‌, ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ಉಪಾಧ್ಯಕ್ಷ ಶ್ರೀನಿವಾಸ ಕರ್ಕೇರ, ಮೋಹನ್‌ ಡಿ. ಪೂಜಾರಿ, ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ವಿಶ್ವನಾಥ ಎಂ. ಸಾಲ್ಯಾನ್‌, ಉಪ ಕಾರ್ಯಾಧ್ಯಕ್ಷ ಸುಭಾಶ್‌ಚಂದ್ರ ಎಂ. ಕರ್ಕೇರ, ಸುಂದರ ಎ. ಪೂಜಾರಿ, ಜತೆ ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಗೌರವ ಕೋಶಾಧಿಕಾರಿ ಎಚ್‌. ಎಂ. ಪೂಜಾರಿ, ಜತೆ ಕೋಶಾಧಿಕಾರಿ ವಿಜಯ ಎನ್‌. ಅಮೀನ್‌ ಉಪಸ್ಥಿತರಿದ್ದರು.

Advertisement

ಗೌರವ ಕಾರ್ಯದರ್ಶಿ ಎನ್‌. ಪಿ. ಕೋಟ್ಯಾನ್‌ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಅಂಕಿತಾ, ಅನಿಲ್‌ ಸಾಲ್ಯಾನ್‌ ಸಹಕರಿಸಿದರು. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಜೆ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಮಕ್ಕಳಿಂದ, ಮಹಿಳೆಯರಿಂದ ಹಾಗೂ ಯುವ ವಿಭಾಗದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಆನಂತರ ವಿ. ಎನ್‌. ಕುಲಾಲ್‌ ವೇಣೂರು ರಚಿಸಿ, ಜಗದೀಶ್‌ ಶೆಟ್ಟಿ ಕೆಂಚನಕೆರೆ ನಿರ್ದೇಶನದಲ್ಲಿ ಮುತ್ತು ಮನಿಪುಜೆ ನಾಟಕ ಪ್ರದರ್ಶನಗೊಂಡಿತು.

 ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next