Advertisement
ಬಿಲ್ಲವರ ಅಸೋಸಿಯೇಶನ್ ಮುಖವಾಣಿ ಅಕ್ಷಯ ಮಾಸಿಕದ ಉಪ ಸಂಪಾದಕ ಹರೀಶ್ ಜಿ. ಪೂಜಾರಿ ಇವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಷಾಢ ತಿಂಗಳ ಕಷ್ಟ, ಕಾರ್ಪಣ್ಯ, ಅಂದಿನ ತಿಂಡಿ-ತಿನಸುಗಳನ್ನು ನಾವು ನಮ್ಮ ಮಕ್ಕಳಿಗೆ ಮನವರಿಕೆ ಮಾಡುವ ಮುಖ್ಯ ಉದ್ಧೇಶ ಈ ಕಾರ್ಯಕ್ರಮದ್ದಾಗಬೇಕು. ನಮ್ಮ ಸಂಸ್ಕೃತಿಯ ಘನತೆ, ಗೌರವವನ್ನು ಉಳಿಸಿ-ಬೆಳೆಸುವ ಚಿಂತನೆ ಇಂತಹ ಕಾರ್ಯಕ್ರಮಗಳಿಂದಾಗಬೇಕು. ಈ ಮೂಲಕ ನಮ್ಮ ಭಾಷೆ, ಸಂಸ್ಕೃತಿಗೆ ಮಹತ್ವ ನೀಡಲು ನಾವು ಮುಂದಾಗಬೇಕು ಎಂದು ನುಡಿದು, ಹಿಂದಿನ ಕಾಲದ ಆಟಿ ತಿಂಗಳ ಆಹಾರ ಪದ್ಧತಿ, ರೋಗ, ದಾರಿದ್ರÂ ನಿವಾರಣೆಗಾಗಿ ಆಟಿಕಳಂಜದ ಪಾತ್ರ ಇತ್ಯಾದಿಗಳನ್ನು ವಿವರಿಸಿದರು.
Related Articles
Advertisement
ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ ಇವರು ಮಾತನಾಡಿ, ಆಟಿಡೊಂಜಿ ದಿನ ನಮ್ಮ ಪ್ರಥಮ ಕಾರ್ಯಕ್ರಮಕ್ಕೆ ಮಹಿಳೆಯರ ಹುರುಪು, ಉತ್ಸಾಹ ಮುಂದಿನ ಕಾರ್ಯಕ್ರಮಗಳಿಗೆ ಹೊಸ ಆಯಾಮ ನೀಡಿದಂತಾಗಿದೆ. ಹಾಗೆಯೇ ಕೇಂದ್ರ ಹಾಗೂ ಸಮಿತಿಯಲ್ಲಿ ಜರಗುವ ಎಲ್ಲಾ ಕಾರ್ಯಕ್ರಮಗಳಿಗೆ ಮಹಿಳೆಯರು ಇನ್ನಷ್ಟು ಸಹಕಾರ ನೀಡಬೇಕು. ಶ್ರೀ ನಾರಾಯಣ ಗುರುಗಳ ತಣ್ತೀ, ಸಿದ್ಧಾಂತವನ್ನು ಮಕ್ಕಳಿಗೆ ಆರ್ಥಿಕ ಧನ ಸಹಾಯ ನೀಡಿ ವಿದ್ಯಾರ್ಜನೆಗೆ ಮಹತ್ವ ನೀಡಿದ್ದು, ಗುರುವಿನಿಂದ ಪ್ರಸಾದ ಪಡೆದ ವಿದ್ಯಾರ್ಥಿಗಳೆಲ್ಲರು ವಿವಿಧ ಉನ್ನತ ಶಿಕ್ಷಣ ಪಡೆದು, ನಮ್ಮ ಸಂಸ್ಕೃತಿ, ಭಾಷೆ, ಸಂಸ್ಕೃತಿಗೂ ಮಹತ್ವ ನೀಡಿ ಎಂದು ನುಡಿದರು.
ಗೌರವ ಕೋಶಾಧಿಕಾರಿ ರಮೇಶ್ ಬಂಗೇರ ಧನ ಸಹಾಯ ಪಡೆದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಮಹಿಳಾ ಸದಸ್ಯೆ ಲತಾ ಬಂಗೇರ ಆಟಿ ತಿಂಗಳ ವಿಶೇಷತೆಯನ್ನು ವಿವರಿಸಿದರು. ಗೌರವ ಕಾರ್ಯದರ್ಶಿ ಉಮೇಶ್ ಸುರತ್ಕಲ್ ವಂದಿಸಿದರು. ವೇದಿಕೆಯಲ್ಲಿ ಗೌರವ ಕಾರ್ಯಾಧ್ಯಕ್ಷ ಭಾಸ್ಕರ ಎಂ. ಪೂಜಾರಿ, ಉಪ ಕಾರ್ಯಾಧ್ಯಕ್ಷ ಜಗನ್ನಾಥ್ ಡಿ. ಕುಕ್ಯಾನ್, ಜತೆ ಕೋಶಾಧಿಕಾರಿ ದೀಪಕ್ ಸುವರ್ಣ ಉಪಸ್ಥಿತರಿದ್ದರು. ಆನಂತರ ಮಹಿಳೆಯರು ವಿವಿಧ ಭಕ್ಷÂಗಳನ್ನು ಪ್ರದರ್ಶಿಸಿದರು. ಸಮಿತಿಯ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ