Advertisement
ಮಾ. 3 ರಂದು ಭಿವಂಡಿಯ ಪದ್ಮನಗರದ ದಿ| ಪ್ರೇಮತಾಯಿ ಪಾಟೀಲ್ ಸಭಾಂಗಣದಲ್ಲಿ ಜರಗಿದ ಬಿಲ್ಲವರ ಅಸೋಸಿಯೇಶನ್ ಭಿವಂಡಿ ಸ್ಥಳೀಯ ಸಮಿತಿಯ 35 ನೇ ವಾರ್ಷಿಕ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಮಹಿಳೆಯರೂ ಸಮಾಜದ ಮುಖ್ಯ ವಾಹಿನಿಗೆ ಬಂದು ಕಾರ್ಯನಿರ್ವಹಿಸಬೇಕು. ಪುರುಷ ಪ್ರಧಾನ ಸಮಾಜ ಮಹಿಳೆಯರಿಗೆ ಸಹಕರಿಸಬೇಕು. ಆಗ ಮಹಿಳೆಯರು ಯಾವುದೇ ಸ್ಥಾನಮಾನವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂಬುವುದಕ್ಕೆ ನಾನು ನಿದರ್ಶನಳಾಗಿದ್ದೇವೆ. ಈ ನಿಟ್ಟಿನಲ್ಲಿ ಬಿಲ್ಲವ ಸಮಾಜವು ಮಹಿಳೆಯರಿಗೆ ವಿಪುಲ ಅವಕಾಶ ನೀಡುತ್ತಿರುವುದರಿಂದ ಧನಾತ್ಮಕವಾಗಿ ಮಹಿಳೆಯರು ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದು ಶುಭಹಾರೈಸಿದರು.
Related Articles
Advertisement
ಸಮಿತಿಯ ವತಿಯಿಂದ ಅತಿಥಿ-ಗಣ್ಯರುಗಳನ್ನು ಶಾಲು ಹೊದೆಸಿ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಭಿವಂಡಿ ಪ್ರದೇಶದಲ್ಲಿ ಬೃಹತ್ ಬಿಲ್ಲವರ ಸಂಘಟನೆಗೆ ಮುತುವರ್ಜಿ ವಹಿಸಿದ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಎ. ಪೂಜಾರಿ ಇವರನ್ನು ಅತಿಥಿ-ಗಣ್ಯರು ಗೌರವಿಸಿದರು. ವೇದಿಕೆಯಲ್ಲಿ ಉದ್ಯಮಿ ಹರೀಶ್ ಜಿ. ಅಮೀನ್, ನಿತ್ಯಾನಂದ ಭಕ್ತಸೇವಾ ಮಂಡಳದ ಅಧ್ಯಕ್ಷ ಜಯರಾಮ ಎಂ. ಪೂಜಾರಿ, ಸುಮಂಗಲಾ ಮೆಶಿನರೀಸ್ ಇದರ ನಾರಾಯಣ ಆರ್. ಪೂಜಾರಿ, ಹರ್ಷಾಲಿ ಸಭಾ ಭವನ ಸಿದ್ಧಕಟ್ಟೆಯ ಮಾಲಕ ಹರೀಶ್ ಡಿ. ಪೂಜಾರಿ, ಕೇಂದ್ರ ಕಚೇರಿಯ ಗೌರವ ಕೋಶಾಧಿಕಾರಿ ಮಹೇಶ್ ಪೂಜಾರಿ ಕಾರ್ಕಳ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು, ಕೇಂದ್ರ ಕಚೇರಿಯ ಪ್ರತಿನಿಧಿ ದಯಾನಂದ ಪೂಜಾರಿ, ರಾಜೇಶ್ ಪೂಜಾರಿ, ಸಮಿತಿಯ ಗೌರವ ಕಾರ್ಯಾಧ್ಯಕ್ಷ ದೇವು ಎಸ್. ಪೂಜಾರಿ, ಉಪ ಕಾರ್ಯಾಧ್ಯಕ್ಷರಾದ ವಿಶ್ವನಾಥ ಡಿ. ಪೂಜಾರಿ ಮತ್ತು ರತ್ನಾಕರ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಅಶೋಕ್ ಜೆ. ಸುವರ್ಣ, ಮಹಿಳಾ ವಿಭಾಗದ ಮುಖ್ಯಸ್ಥೆ ಶಶಿಕಲಾ ಡಿ. ಪೂಜಾರಿ, ಅರ್ಚಕ ಸಂಜೀವ ಕೆ. ಪೂಜಾರಿ, ಯುವ ವಿಭಾಗದ ಸುನೀಲ್ ಎಸ್. ಪೂಜಾರಿ ಉಪಸ್ಥಿತರಿದ್ದರು.
ಜತೆ ಕಾರ್ಯದರ್ಶಿ ರಮಾನಂದ ಕೋಟ್ಯಾನ್, ದಿನೇಶ್ ಡಿ. ಸಾಲ್ಯಾನ್, ಜತೆ ಕೋಶಾಧಿಕಾರಿ ಜೀವನ್ ಎಸ್. ಪೂಜಾರಿ, ರಾಜೇಂದ್ರ ಆರ್. ಪೂಜಾರಿ, ಸಮಿತಿಯ ಸದಸ್ಯ ವಾಸು ಸುವರ್ಣ, ಸತೀಶ್ ಆರ್. ಪೂಜಾರಿ, ಜಗದೀಶ್ ಸಿ. ಕೊಡವೂರು, ಹರ್ಷಿಣಿ ಕೆ. ಪೂಜಾರಿ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು-ಸದಸ್ಯೆಯರು ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ವಿಭಾಗದ ಸದಸ್ಯೆಯರಿಂದ, ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿನ್ ಪೂಜಾರಿ ಮತ್ತು ಶಾಶ್ವತ್ ಪೂಜಾರಿ ನಿರ್ವಹಿಸಿದರು. ಹರೀಶ್ ಕೆ. ಹೆಜ್ಮಾಡಿ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಜಯಂತ್ ಎಸ್. ಸಾಲ್ಯಾನ್ ವಂದಿಸಿದರು. ಕೊನೆಯಲ್ಲಿ ರಂಗ ತುಡರ್ ಭಿವಂಡಿ ಕಲಾವಿದರಿಂದ ಮಧು ಬಂಗೇರ ಕಲ್ಲಡ್ಕ ನಿರ್ಮಾಣದ, ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದ, ಅನಿಲ್ ಪಾಂಗಾಳ ಸಂಗೀತದಲ್ಲಿ ಕೊಪ್ಪರಿಗೆ ನಾಟಕ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು, ಸಮಾಜ ಬಾಂಧವರು ನೂರಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಮಾಜದ ಮುಂದಾಳು ಜಯ ಸಿ. ಸುವರ್ಣರ ಮಾರ್ಗದರ್ಶನದಲ್ಲಿ ಇಂದು 22 ಸ್ಥಳೀಯ ಸಮಿತಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಪ್ರಾದೇಶಿಕ ವಲಯಗಳು ಸಮಾಜ ಬಾಂಧವರಿಗೆ ಸದುಪಯೋಗ ದೊರೆಯುವ ರೀತಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವುದು ಅಭಿನಂದನೀಯ. ಇದಕ್ಕೆ ಇಂದಿನ ಸಮಾರಂಭ ನಿದರ್ಶನವಾಗಿದೆ. ಹಿರಿಯರಾದ ಗೌರವ ಕಾರ್ಯಾಧ್ಯಕ್ಷ ದೇವು ಪೂಜಾರಿ ಮತ್ತು ಪ್ರಸ್ತುತ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಎ. ಪೂಜಾರಿ, ಗೌರವ ಕಾರ್ಯದರ್ಶಿ ಜಯಂತ್ ಸಾಲ್ಯಾನ್ ಇವರ ಗುರುತರವಾದ ಜವಾಬ್ದಾರಿಯುತ ಕಾರ್ಯಗಳು ಭಿವಂಡಿಯ ಬಿಲ್ಲವರಿಗೆ ದೊರೆಯುತ್ತಿದ್ದು, ಶ್ರೀ ನಾರಾಯಣ ಗುರುಗಳ ವೇದವಾಕ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲೂ ಇಲ್ಲಿಯ ಸಮಿ ತಿಯಿಂದ ತುಳು-ಕನ್ನಡಿಗರ ಸೇವೆ ನಿರಂತರವಾಗಿ ನಡೆಯುತ್ತಿರಲಿಡಾ| ಯು. ಧನಂಜಯ ಕುಮಾರ್ (ಉಪಾಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್ ಮುಂಬಯಿ). ಚಿತ್ರ-ವರದಿ : ರಮೇಶ್ ಉದ್ಯಾವರ