ಮುಂಬಯಿ: ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ವತಿಯಿಂದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗಾಗಿ ವಾರ್ಷಿಕ ಕ್ರೀಡೋ ತ್ಸವವನ್ನು ಜ. 7ರಂದು ಸಯಾನ್ ಪೂರ್ವದ ಜಿಟಿಬಿ ನಗರದಲ್ಲಿರುವ ಗುರು ನಾನಾಕ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು.
ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ, ಶಿಕ್ಷಕ ನಾರಾಯಣ ಜಿ. ಪೂಜಾರಿ ಅವರು ಕೋಟಿ- ಚೆನ್ನಯ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಸಂಘದ ಗೌರವಾಧ್ಯಕ್ಷ ಸುರೇಶ ಎಸ್. ಪೂಜಾರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಮಂಜುನಾಥ ಬಿಲ್ಲವ ಶಿರೂರು ಉಪಸ್ಥಿತರಿದ್ದರು.
ನ್ಯಾಯವಾದಿಗಳಾದ ಆನಂದ ಎಂ. ಪೂಜಾರಿ ಮತ್ತು ಶಕುಂತಳಾ ಆನಂದ ಪೂಜಾರಿ ದಂಪತಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿÅàಸ್ ಇದರ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಯುವ ಉದ್ಯಮಿಗಳಾದ ಸುರೇಶ್ ಸಿ. ಪೂಜಾರಿ ಬಡಾಕೆರೆ ನಾವುಂದ, ಕೃಷ್ಣ ಪೂಜಾರಿ ಹೇರಂಜಾಲು, ಪರಮೇಶ್ವರ ಪೂಜಾರಿ ಬಿಜೂರು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಮುಂಜಾನೆ ಸದಸ್ಯ ಬಾಂಧವರಿಂದ ಆಕರ್ಷಕ ಪಥ ಸಂಚಲಕನ ನಡೆಯಿತು. ಕುಂದಾಪುರ ಬಿಲ್ಲವರಿಗಾಗಿ ಆಯೋಜಿಸಲಾಗಿರುವ ಈ ಕ್ರೀಡಾಕೂಟದಲ್ಲಿ 5 ವರ್ಷದ ಪುಟಾಣಿಗಳಿಂದ ಪ್ರಾರಂಭಗೊಂಡು 60 ವರ್ಷ ಮೇಲ್ಪಟ್ಟ ಹಿರಿಯರು ಕೂಡ ಭಾಗವಹಿಸಿದ್ದರು. ವಯೋಮಿತಿಗೆ ಅನುಗುಣವಾಗಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳಾದ ಕಪ್ಪೆ ಜಿಗಿತ, ಬುಕ್ ಬ್ಯಾಲೆನ್ಸ್, 50 ಮೀ., 100 ಮೀ., 200 ಮೀ. ಓಟ ಸೇರಿದಂತೆ ಶಾಟ್‌ಫುಟ್, ಲೆಮನ್ ಸ್ಪೂನ್, ಉದ್ದ ಜಿಗಿತ, ವೇಗ ನಡಿಗೆ, ರಿಲೇ ಹಾಗೂ ಹಗ್ಗ ಜಗ್ಗಾಟ ನಡೆಯಿತು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್. ಪೂಜಾರಿ, ಗೌರವ ಕೋಶಾಧಿಕಾರಿ ಅಶೋಕ ಎನ್. ಪೂಜಾರಿ, ಉಪಾಧ್ಯಕ್ಷರುಗಳಾದ ಎನ್. ಜಿ. ಪೂಜಾರಿ, ನರಸಿಂಹ ಎಂ. ಬಿಲ್ಲವ, ಜತೆ ಕಾರ್ಯದರ್ಶಿಗಳಾದ ಶಂಕರ್ ಎಂ. ಪೂಜಾರಿ, ಸೀಮಾ ಲೋಕೇಶ್ ಪೂಜಾರಿ, ಜತೆ ಕೋಶಾಧಿಕಾರಿಗಳಾದ ಜಗನ್ನಾಥ ಆರ್. ಪೂಜಾರಿ, ಶ್ರೀಧರ ವಿ. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಬೇಬಿ ರಂಗ ಪೂಜಾರಿ, ಕಾರ್ಯದರ್ಶಿ ಯಶೋದಾ ಸತೀಶ್ ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಎಸ್. ಕೆ. ಪೂಜಾರಿ, ಕಾರ್ಯದರ್ಶಿ ಅಶೋಕ ಎಂ. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಕೊಡೇರಿ, ಉಪ ಕಾರ್ಯಾಧ್ಯಕ್ಷರುಗಳಾದ ಸೀಮಾ ಅನಿಲ್ ಪೂಜಾರಿ, ಉಮೇಶ್ ಎನ್. ಪೂಜಾರಿ, ಕಾರ್ಯದರ್ಶಿ ಜಯಶ್ರೀ ಎ. ಕೋಡಿ, ಜತೆ ಕಾರ್ಯದರ್ಶಿಗಳಾದ ದೀಪಾ ಎಸ್. ಪೂಜಾರಿ, ಸಂತೋಷ್ ಬಿ. ಪೂಜಾರಿ ಅವರು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸಮಿತಿಯ ಸದಸ್ಯರು, ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರ ನೇತೃತ್ವದಲ್ಲಿ ಕ್ರೀಡೋತ್ಸವವು ಜರಗಿತು.
ಚಿತ್ರ-ವರದಿ : ಸುಭಾಷ್ ಶಿರಿಯಾ