ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ವಸಾಯಿ ಸ್ಥಳೀಯ ಸಮಿತಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಆಚರಣೆಯು ಸೆ. 10ರಂದು ವಸಾಯಿ ಪಶ್ಚಿಮದ ಅಂಬಾಡಿಕ್ರಾಸ್ ರೋಡ್, ಜಿ-1-ಎ ಧನರಾಜ್ ಪ್ಯಾಲೇಸ್‌ನಲ್ಲಿರುವ ಅಸೋಸಿಯೇಶನ್‌ನ ಕಚೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಕೆ. ಬಿ. ಪೂಜಾರಿ, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್, ಉಪ ಕಾರ್ಯಾಧ್ಯಕ್ಷ ಕೆ. ಟಿ. ಬಂಗೇರ, ಗೌರವ ಕಾರ್ಯದರ್ಶಿ ಲೋಹಿತಾಕ್ಷ ಎಸ್. ಅಂಚನ್, ಕೋಶಾಧಿಕಾರಿ ಪಿ. ರವೀಂದ್ರ, ಜತೆ ಕಾರ್ಯದರ್ಶಿ ಚಂದ್ರಶೇಖರ ಸಾಲ್ಯಾನ್, ಜತೆ ಕೋಶಾಧಿಕಾರಿ ನಾಗೇಶ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಸಾಮೂಹಿಕ ಪ್ರಾರ್ಥನೆಯೊಂದಿಗೆ ಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಧಾನ ಅರ್ಚಕ ಶರತ್ ಪೂಜಾರಿ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರಗಿದವು. ಬೆಳಗ್ಗೆ ಅಭಿಷೇಕ, ಜಪಯಜ್ಞ, ಆಮಂತ್ರಿತ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ನೆರವೇರಿತು. ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ, ಕೇಂದ್ರ ಕಚೇರಿಯ ಉಪ ಕೋಶಾಧಿಕಾರಿ ಸದಾಶಿವ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಪಾಂಡು ಎಲ್. ಶೆಟ್ಟಿ, ಶಂಕರ ಆಳ್ವ, ಅಶೋಕ್ ಶೆಟ್ಟಿ, ಯಶೋಧರ ಕೋಟ್ಯಾನ್, ದೇವೇಂದ್ರ ಬುನ್ನನ್, ದಯಾನಂದ ಪೂಜಾರಿ, ಸತೀಶ್ ಪೂಜಾರಿ, ಪ್ರಶಾಂತ್ ಪೂಜಾರಿ, ಭಾರತ್ ಬ್ಯಾಂಕಿನ ಹಿರಿಯ ಪ್ರಬಂಧಕ ನವೀನ್ ಕರ್ಕೇರ, ರಂಗ ನಿರ್ದೇಶಕ ಕರುಣಾಕರ ಕಾಪು, ನಾದ ಲಹರಿಯ ನಿರ್ದೇಶಕ, ಗಾಯಕ ಹೇಮಚಂದ್ರ ಎರ್ಮಾಳ್, ನವೀನ್ ಕುಂದರ್, ಬಿಲ್ಲವರ ಅಸೋಸಿಯೇಶನ್ ವಿವಿಧ ಉಪಸಮಿತಿಗಳ ಪದಾಧಿಕಾರಿ ಗಳು, ಸದಸ್ಯರು, ಸೇವಾದಳ, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು, ತುಳು-ಕನ್ನಡಿಗರು, ಗುರುಭಕ್ತರು ಸೇರಿದಂತೆ ನೂರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್