ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 164ನೇ ಜಯಂತಿ ಆಚರಣೆಯು ಸೆ. 2 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ಅದ್ದೂರಿ ಯಾಗಿ ನಡೆಯಿತು.
ಪುರೋಹಿತ ಐತಪ್ಪ ಸುವರ್ಣ, ವಿ. ಎನ್. ಅಮೀನ್, ಸಿ. ಕೆ. ಪೂಜಾರಿ ಮತ್ತು ಧರ್ಮರಾಜ್ ಪೂಜಾರಿಯವರು ಗುರು ಮಂಟಪದ ಅಲಂಕಾರಗೈದು ಪೂಜಾ ವಿಧಾನ ಗಳನ್ನು ನೆರವೇರಿಸಿದರು. ಗುರು ಭಕ್ತರು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರ ತನಕ ಭಜನೆ, ಭಕ್ತಿಗೀತೆಗಳನ್ನು ಹಾಡಿ ನಂತರ ಕುಣಿತದೊಂದಿಗೆ ಭಜನಾ ಕಾರ್ಯಕ್ರಮವನ್ನು ನೆರವೀರಿಸಿದರು.
ತದನಂತರ ಕರ್ಪೂರದಾರತಿ, ವಿಶೇಷ ಗುರೂಪೂಜೆ,ಮಹಾ ಮಂಗಳಾರತಿ ಹಾಗೂ ಉದ್ಯಮಿಗಳಾದ ರವಿ ಎಸ್. ಪೂಜಾರಿ, ಗಿರಿಜಾ ಸಂಜೀವ ಪಾಲನ್, ಕುಶ ರವಿ ಸನಿಲ್, ಟಿ. ಕೆ. ಕೋಟ್ಯಾನ್ ಹಾಗೂ ಹೇಮಾ ದೇವರಾಜ್ ಪೂಜಾರಿ ದಂಪತಿಗಳ ವತಿಯಿಂದ ಅನ್ನದಾನ ಸೇವೆ ಜರಗಿತು. ಹಿರಿಯರಾದ ಬಿ. ವೈ. ಸುವರ್ಣರವರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಚರಿತ್ರೆಯನ್ನು ವಿವರಿಸಿ, ಎÇÉಾ ಗುರುಭಕ್ತರ ಪರವಾಗಿ ಗುರುವಂದನೆ ಸಲ್ಲಿಸಿ ಪ್ರಾರ್ಥನೆಗೈದರು.
ಈ ಸಂದರ್ಭದಲ್ಲಿ ಕೇಂದ್ರ ಕಾರ್ಯಾಲಯದಿಂದ ಉಪ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ, ಅಶೋಕ್ ಕೆ. ಕುಕ್ಯಾನ್, ಮಹಿಳಾ ವಿಭಾಗ ಉಪಕಾರ್ಯಾದ್ಯಕ್ಷೆ ಪ್ರಭಾ ಕೆ. ಬಂಗೇರ, ಕಲ್ವಾ ಸ್ಥಳೀಯ ಸಮಿತಿಯ ನಾರಾಯಣ ಸುವರ್ಣ, ಹರೀಶ್ ಸಾಲ್ಯಾನ್ ಹಾಗೂ ಇತರ ಪದಾದಿಕಾರಿಗಳು, ಕಲ್ಯಾಣ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ, ಉಪ ಕಾರ್ಯದಕ್ಷ, ಗೌರವ ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳು ಹಾಗೂ ವಿವಿಧ ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಭಾರತ್ ಬ್ಯಾಂಕಿನ ಅಧಿಕಾರಿಗಳು, ಡೊಂಬಿವಲಿ ಪರಿಸರದ ತುಳು ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಭಾಂಧವರು, ಹಿತೈಷಿಗಳು ಹಾಗೂ ಗುರುಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಭಾರತ್ ಬ್ಯಾಂಕಿನ ಮ್ಯಾನೇಜರ್ ದಿನೇಶ್ ಕರ್ಕೇರ, ರಾಮಚಂದ್ರ ಬಂಗೇರ ಮತ್ತು ಪರಿವಾರ, ಉದ್ಯಮಿ ರಾಜೇಶ್ ಕೋಟ್ಯಾನ್, ಭವಾನಿ ಕುಕ್ಯಾನ್, ಗುಲಾಬಿ ಬಾಬು ಪೂಜಾರಿ ಮತ್ತು ಪರಿವಾರ, ವಸಂತ್ ಕುಮಾರ್, ಎಮ…. ಎನ್. ಕೋಟ್ಯಾನ್ ಮತ್ತು ಪರಿವಾರ, ಸಚಿನ್ ಧರ್ಮರಾಜ್ ಪೂಜಾರಿ, ಹರೀಶ್ ಶೆಟ್ಟಿ, ವಿಮಲಾ ಕೆ. ಅಂಚನ್, ಚಂದ್ರಶೇಖರ್ ಸಾಲ್ಯಾನ್, ಭೋಜರಾಜ್ ಪೂಜಾರಿ, ರಾಜು ಜಿ. ಪೂಜಾರಿ ಅವರ ಸೇವಾರ್ಥಕವಾಗಿ ವಿವಿಧ ಸೇವೆಗಳು ನಡೆಯಿತು. ಕಾಯಕರ್ತರಿಗೆ ಬೆಳಿಗ್ಗೆಯ ಉಪಹಾರ ಹಾಗೂ ಚಹಾವನ್ನು ಉದ್ಯಮಿ ನಿತ್ಯಾನಂದ ಜತ್ತನ್ ಅವರು ನೀಡಿ ಸಹಕರಿಸಿದರು.
ಅಪಾರ ಸಂಖ್ಯೆಯಲ್ಲಿ ಭಕ್ತರು ದೇಣಿಗೆ, ವಿಶೇಷ ಗುರು ಪೂಜೆ, ಕರ್ಪೂರದಾರತಿ, ಹೂ, ಹಣ್ಣು, ದೀಪದ ಎಣ್ಣೆ ಇತ್ಯಾದಿ ನೀಡಿ ಸಹಕರಿಸಿದರು. ಗೌರವ ಕಾರ್ಯಾಧ್ಯಕ್ಷ ಸಿ. ಎನ್. ಕರ್ಕೇರ, ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷ ರವಿ ಎಸ್. ಸನಿಲ…, ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ್ ಎಸ್. ಪಾಲನ್ ಹಾಗೂ ಶ್ರೀಧರ ಬಿ. ಆಮೀನ್ , ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ, ಗೌರವ ಕೋಶಾಧಿಕಾರಿ ಸುನಿಲ್ ಸಿ. ಸಾಲ್ಯಾನ್, ಮಂಜಪ್ಪ ಪೂಜಾರಿ, ಜಗನ್ನಾಥ್ ಸನಿಲ…, ಮತ್ತು ಸಮಿತಿ ಸದಸ್ಯರು, ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ಶಕ್ತಿ ಸದಸ್ಯರು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದರು.