ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಚೆಂಬೂರು ಸ್ಥಳೀಯ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜಯಂತಿ ಉತ್ಸವವು ಸೆ. 9 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಗ್ಗೆ 7.30 ರಿಂದ ಧಾರ್ಮಿಕ ಕಾರ್ಯಕ್ರಮವಾಗಿ ಅಭಿಷೇಕ, ಪೂರ್ವಾಹ್ನ 10 ರಿಂದ ಉದ್ಯಮಿ-ಸಮಾಜ ಸೇವಕರುಗಳಾದ ಆರ್. ಕೆ. ಪೂಜಾರಿ ಪನ್ವೇಲ್, ನವಿಮುಂಬಯಿ ಉದ್ಯಮಿ ಸಂತೋಷ್ ಪೂಜಾರಿ, ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಅಧ್ಯಕ್ಷ ರಾಮಣ್ಣ ದೇವಾಡಿಗ, ಚೆಂಬೂರು ಉದ್ಯಮಿ ವಿಜಯ ಬಂಡಪ್ಪ, ಕೇಂದ್ರ ಕಚೇರಿಯ ಪ್ರತಿನಿಧಿ ಉಮೇಶ್ ಎನ್. ಕೋಟ್ಯಾನ್, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಿತ್ಯಾನಂದ ಎ. ಪೂಜಾರಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಸಮಿತಿಯವರಿಂದ ಭಜನ ಕಾರ್ಯಕ್ರಮ, ಲೇಖಕ, ಸಾಹಿತಿ ಸಾದಯಾ ಅವರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ, ಮಧ್ಯಾಹ್ನ 12 ರಿಂದ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಕೊನೆಯಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಉಪನ್ಯಾಸ ನೀಡಿದ ಸಾದಯಾ, ಭಾಸ್ಕರ ಕರ್ನಿರೆ, ಅತಿಥಿಗಳಾದ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಎಚ್. ಕೆ. ಸುಧಾಕರ್ ಪೂಜಾರಿ, ಗೀತಾಂಜಲಿ ಎಲ್. ಸಾಲ್ಯಾನ್, ಹಿರಿಯರಾದ ಚೆಂಬೂರು ಸ್ಥಳೀಯ ಕಚೇರಿಯ ಮಾಜಿ ಉಪ ಕಾರ್ಯಾಧ್ಯಕ್ಷ ಕೆ. ಆರ್. ಸುವರ್ಣ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿÅàಯ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ಪೂಜಾ ವಿಧಿ-ವಿಧಾನಗಳನ್ನು ಉಮೇಶ್ ಕೆ. ಕೋಟ್ಯಾನ್ ಮತ್ತು ಕಾರ್ತಿಕ್ ಬಿ. ಪೂಜಾರಿ ಅವರು ನೆರವೇರಿಸಿದರು. ಕಾರ್ಯಾಧ್ಯಕ್ಷ ನಿತ್ಯಾನಂದ ಎ. ಪೂಜಾರಿ ಅವರು ಸ್ವಾಗತಿಸಿದರು.
ಗೌರವ ಕಾರ್ಯದರ್ಶಿ ನಾಗೇಶ್ ಎಸ್. ಕೋಟ್ಯಾನ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.