ಮುಂಬಯಿ: ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಸಂಘಟನೆಯನ್ನು ಮುನ್ನೆಡೆಸುವ ಜವಬ್ದಾರಿ ಯುವ ಜನತೆಯ ಮೇಲಿದೆ. ಹೊಸ ಸದಸ್ಯರು ಆಡಳಿತ ಮಂಡಳಿ ಅಥವಾ ಉಪಸಮಿತಿಗೆ ಸೇರಿಕೊಂಡರೆ ನಮ್ಮ ಸಂಘಟನೆಯನ್ನು ಮತ್ತಷ್ಟು ಬಲಪಡಿ ಸಬಹುದು. ಮಹಾನಗರ ಮತ್ತು ಉಪ ನಗರಗಳಲ್ಲಿ ನೆಲೆಸಿರುವ ಕುಂದಾಪುರ ಬಿಲ್ಲವರು ಸದಸ್ಯತ್ವ ಪಡೆಯಬೇಕು. ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ನಮ್ಮ ಮುಂದಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಅಧ್ಯಕ್ಷ ಸೂರ್ಯ ಎಸ್. ಪೂಜಾರಿ ಹೇಳಿದರು.
ದಾದರ್ ಪೂರ್ವದ ಪ್ರಾಚಾರ್ಯ ಬಿ. ಎನ್. ವೈದ್ಯ ಸಭಾಗೃಹದಲ್ಲಿ ಆ. 21ರಂದು ಜರಗಿದ ಸಂಘದ 34ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಭಾಗಿಯಾದಾಗ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ತಿಳಿಯುತ್ತದೆ. ಕಳೆದೆರಡು ವರ್ಷ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗದಿದ್ದರೂ ಸಂಕಷ್ಟಕ್ಕೀಡಾದ ಸದಸ್ಯರಿಗೆ ನೆರವಾಗಿದ್ದೇವೆ. ಕೊರೊನಾ ಸಂದರ್ಭ ಕೆಲವು ಸದಸ್ಯರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ದೈನಂದಿನ ಸಾಮಗ್ರಿಗಳನ್ನು ವಿತರಿಸಿದ್ದೇವೆ. ಸಂಘ ಇನ್ನಷ್ಟು ಬಲಗೊಂಡಲ್ಲಿ ಅಸಹಾಯಕ ಸದಸ್ಯರಿಗೆ ಇನ್ನೂ ಹೆಚ್ಚಿನ ನೆರವು ನೀಡಬಹುದು, ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಮೊತ್ತ ಇನ್ನು ಹೆಚ್ಚಿಸಬಹುದು. ವಧು-ವರಾನ್ವೇಷಣೆಗೂ ನಮ್ಮ ಸಂಘ ಸಹಕರಿಸುವುದಲ್ಲದೆ, ಸದಸ್ಯರು ಮತ್ತು ಸದಸ್ಯರ ಮಕ್ಕಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುತ್ತಾ ಬಂದಿದೆ. ಆ ನಿಟ್ಟಿನಲ್ಲಿ ನಮ್ಮ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಲು ತಾವೆಲ್ಲರೂ ಸಹಕರಿಸಬೇಕು. ಸದಸ್ಯರೆಲ್ಲರು ಸಕ್ರಿಯರಾದರೆ ಸಂಘಟನೆಯ ಅಭಿವೃದ್ಧಿ ನಿಶ್ಚಿತ ಎಂದರು.
ಗತ ಮಹಾಸಭೆಯ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಎನ್. ಪೂಜಾರಿ ಮತ್ತು ಪ್ರಸಕ್ತ ಸಾಲಿನ ವರದಿಯನ್ನು ಜತೆ ಕಾರ್ಯದರ್ಶಿ ಸುಶೀಲಾ ಆರ್. ಪೂಜಾರಿ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ ಮಂಡಿಸಿದರು. ಆಂತರಿಕ ಲೆಕ್ಕ ಪರಿಶೋಧಕರಾಗಿ ರಾಜೀವ ಎಂ. ಪೂಜಾರಿ, ಲೆಕ್ಕ ಪರಿಶೋಧಕರಾಗಿ ಕೆ. ವಿ. ಜೋ ಆ್ಯಂಡ್ ಅಸೋಸಿಯೇಟ್ಸ್ ಅವರನ್ನು ಪುನರಾಯ್ಕೆ ಗೊಳಿಸಲು ಮಹಾಸಭೆ ಅನುಮತಿ ನೀಡಿತು. ಮುಂದಿನ ಎರಡು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಒಟ್ಟು ಹದಿನಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನವಣಾಧಿಕಾರಿ ರಾಘವೇಂದ್ರ ಎನ್. ಬಿಲ್ಲವ ತಿಳಿಸಿದರು.
ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪಾರಾಧನೆ ಮೂಲಕ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿದರು. ಯುವ ಅಭ್ಯುದಯ ಸಮಿತಿಯ ಸದಸ್ಯೆಯರು ಪಾರ್ಥನೆಗೈದರು. ಜತೆ ಕಾರ್ಯದರ್ಶಿ ಸುಶೀಲಾ ಆರ್. ಪೂಜಾರಿ ವಂದಿಸಿದರು.
ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಸೂರ್ಯ ಎಸ್. ಪೂಜಾರಿ, ಉಪಾಧ್ಯಕ್ಷರಾದ ಎಸ್. ಕೆ. ಪೂಜಾರಿ, ಎನ್. ಎಂ. ಬಿಲ್ಲವ, ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ, ಜತೆ ಕಾರ್ಯದರ್ಶಿಗಳಾದ ಸುಶೀಲಾ ಆರ್. ಪೂಜಾರಿ, ರಂಗ ಎಸ್. ಪೂಜಾರಿ, ಜತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ಆನಂದ ಕೆ. ಪೂಜಾರಿ, ಸಮಿತಿಯ ಸದಸ್ಯರಾದ ಆನಂದ ಎಂ. ಪೂಜಾರಿ, ಎನ್. ಜಿ. ಪೂಜಾರಿ, ಸಿ. ಎ. ಪೂಜಾರಿ, ಲಕ್ಷ ¾ಣ ಪೂಜಾರಿ ಕೊಡೇರಿ, ರಾಜಶ್ರೀ ಪಿ. ಸಾಲ್ಯಾನ್, ಯಶೋದಾ ಎಸ್. ಪೂಜಾರಿ, ಮಲ್ಲಿಕಾ ಎಸ್. ಪೂಜಾರಿ, ಜಯಶ್ರೀ ಎ. ಕೋಡಿ, ಹರೀಶ್ ಎನ್. ಪೂಜಾರಿ, ರತ್ನಾಕರ ಎಸ್. ಪೂಜಾರಿ, ಪೂರ್ಣಿಮಾ ಟಿ. ಪೂಜಾರಿ ಉಪಸ್ಥಿತರಿದ್ದರು.
ನೂತನ ಸಮಿತಿಗೆ ಆಯ್ಕೆ :
ಸೂರ್ಯ ಎಸ್. ಪೂಜಾರಿ, ಆನಂದ ಎಂ. ಪೂಜಾರಿ, ನರಸಿಂಹ ಎಂ. ಬಿಲ್ಲವ, ಶ್ರೀಧರ ವಿ. ಪೂಜಾರಿ, ಎನ್. ಜಿ. ಪೂಜಾರಿ, ಸಿ. ಎ. ಪೂಜಾರಿ, ಆನಂದ ಕೆ. ಪೂಜಾರಿ, ರಂಗ ಎಸ್. ಪೂಜಾರಿ, ರಾಜಶ್ರೀ ಪಿ. ಸಾಲ್ಯಾನ್, ಸುಶೀಲಾ ಆರ್. ಪೂಜಾರಿ, ಯಶೋದಾ ಎಸ್. ಪೂಜಾರಿ, ಮಲ್ಲಿಕಾ ಎಸ್. ಪೂಜಾರಿ, ಹರೀಶ್ ಎನ್. ಪೂಜಾರಿ, ರತ್ನಾಕರ ಎಸ್. ಪೂಜಾರಿ, ಪೂರ್ಣಿಮಾ ಟಿ. ಪೂಜಾರಿ ಮತ್ತು ಮನೀಷಾ ಎಂ. ಪೂಜಾರಿ ನೂತನ ಸಮಿತಿಗೆ ಆಯ್ಕೆಯಾದರು.