Advertisement

ಬಿಲ್ಲವ ಭವನ: ಗುರು ಜಯಂತಿಗೆ ಚಾಲನೆ

05:43 PM Aug 28, 2018 | |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಕೇಂದ್ರ ಕಚೇರಿ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯುತ್ಸವಕ್ಕೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಆ. 26 ರಂದು ಪ್ರಾತಃಕಾಲದಲ್ಲಿ  ಚಾಲನೆ ನೀಡಲಾಯಿತು.

Advertisement

ಬೆಳಗ್ಗೆ 5ರಿಂದ 6ರ ವರೆಗೆ ಜರಗಿದ ಗಣಹೋಮ ಪೂಜಾ ವಿಧಿ-ವಿಧಾನವನ್ನು   ಧನಂಜಯ್‌ ಶಾಂತಿ ನೆರವೇರಿಸಿದರು. ಜತೆ ಕಾರ್ಯ ದರ್ಶಿ ಹರೀಶ್‌ ಜಿ. ಸಾಲ್ಯಾನ್‌  ದಂಪತಿ  ಪೂಜಾ ವ್ರತ ಕೈಗೊಂಡರು. ಬೆಳಗ್ಗೆ 6.20 ರಿಂದ ಓಂ ನಮೋ ನಾರಾಯಣಾಯ, ನಮಃ ಶಿವಾಯ ಎಂಬ 24 ಗಂಟೆಗಳ ಜಪಯಜ್ಞದ ಉದ್ಘಾಟನೆಯನ್ನು ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ್‌ ಎಸ್‌. ಪೂಜಾರಿ ಅವರು  ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಉದ್ಯಮಿ ಗಣೇಶ್‌ ಬಿ. ಪೂಜಾರಿ  ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಬಿಲ್ಲವರ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಯ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ್‌ ಡಿ. ಪೂಜಾರಿ, ಹರೀಶ್‌ ಜಿ. ಅಮೀನ್‌, ಶ್ರೀನಿವಾಸ್‌ ಆರ್‌. ಕರ್ಕೇರ, ಸಿಎ ಅಶ್ವಜಿತ್‌ ಹೆಜ್ಮಾಡಿ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್‌ ಶಾಂತಿ, ನಾಗೇಶ್‌ ಕೋಟ್ಯಾನ್‌, ಅಶೋಕ್‌ ಕುಕ್ಯಾನ್‌, ವಿಠಲ್‌ ಪೂಜಾರಿ, ಬಿ. ರವೀಂದ್ರ ಅಮೀನ್‌, ಶಕುಂತಲಾ ಕೆ. ಕೋಟ್ಯಾನ್‌ ಉಪಸ್ಥಿತರಿದ್ದರು.

ಪ್ರಭಾಕರ್‌ ಸಸಿಹಿತ್ಲು ಮತ್ತು ಸಂಗಡಿಗರು ಜಪಯಜ್ಞದ ನಿರ್ವ ಹಣೆ ವಹಿಸಿದ್ದರು. ಧಾರ್ಮಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ  ಮೋಹನ್‌ದಾಸ್‌ ಜಿ. ಪೂಜಾರಿ ಮತ್ತು ಗೌರವ  ಕಾರ್ಯದರ್ಶಿ ರವೀಂದ್ರ ಶಾಂತಿ  ನಿರ್ವಹಣೆ ಯಲ್ಲಿ ಧಾರ್ಮಿಕ ಕ್ರಿಯೆ ಪ್ರಾರಂಭಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next