ಕಲ್ಯಾಣ್: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಲ್ಯಾಣ್ ಸ್ಥಳೀಯ ಸಮಿತಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜಯಂತಿ ಆಚರಣೆಯು ಸೆ. 16ರಂದು ಸ್ಥಳೀಯ ಮಾತೋಶ್ರೀ ಸಭಾ ಗೃಹದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಸದಸ್ಯ ಬಾಂಧವರ ಮಕ್ಕಳಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು. ಅಲ್ಲದೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದ ಮಕ್ಕಳನ್ನು ಗೌರವಿಸಲಾಯಿತು. ಬೆಳಗ್ಗೆ 9.30 ರಿಂದ ಪುರೋಹಿತ ಗಂಗಾಧರ ಕಲ್ಲಾಡಿ ಅವರ ಪೌರೋಹಿತ್ಯದಲ್ಲಿ ನಾರಾಯಣ ಗುರುಗಳ ಸಹಸ್ರ ಅಷ್ಟೋತ್ತರ ನಾಮಾವಳಿ ನಡೆಯಿತು.
ಸ್ಥಳೀಯ ಕಚೇರಿಯ ಮಹಿಳಾ ವಿಭಾಗದವರಿಂದ ಭಜನ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ದೇವಾನಂದ ಕೋಟ್ಯಾನ್ ಮತ್ತು ಬಳಗದವರಿಂದ ಭಜನಾ ರಸಮಂಜರಿ ನೆರವೇರಿತು.
ಜತೆ ಕಾರ್ಯದರ್ಶಿ ಭೋಜ ಎಸ್. ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಸ್ಮಿàನ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಶೆಟ್ಟಿ, ಗುರುದೇವ್ ಹೊಟೇಲ್‌ನ ಮಾಲಕ ಭಾಸ್ಕರ ಶೆಟ್ಟಿ, ರಾಮ್‌ದೇವ್ ಹೊಟೇಲ್‌ನ ಮಾಲಕ ರಮೇಶ್ ಶೆಟ್ಟಿ, ಬಿ. ಕೆ. ಗೋಲ್ಡ್‌ನ ಮಾಲಕ ಶಾಂತಿಲಾಲ್ ಶಾØ, ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ವಿಠಲ ಕೆ. ಕೋಟ್ಯಾನ್, ಕಾರ್ಯಾಧ್ಯಕ್ಷ ಸದಾಶಿವ ಜಿ. ಸುವರ್ಣ, ಉಪ ಕಾರ್ಯಾಧ್ಯಕ್ಷ ದೇವಾನಂದ ಜೆ. ಕೋಟ್ಯಾನ್, ಜತೆ ಕೋಶಾಧಿಕಾರಿ ಧನಂಜಯ ಡಿ. ಪಾಲನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಎಸ್. ಪೂಜಾರಿ, ಯುವಾಭ್ಯುದಯ ಸಮಿತಿಯ ಪ್ರತಿನಿಧಿ ಸಂದೀಪ್ ಸಿ. ಪೂಜಾರಿ, ಕೇಂದ್ರ ಕಚೇರಿಯ ಪ್ರತಿನಿಧಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಇವರು ಉಪಸ್ಥಿತರಿದ್ದರು.
ಕೇಂದ್ರ ಕಚೇರಿಯಿಂದ ಮೋಹನ್ ಪೂಜಾರಿ, ಭಿವಂಡಿ ಸ್ಥಳೀಯ ಸಮಿತಿ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ಯುವಾಭ್ಯುದಯ ವಿಭಾಗದವರು, ಡೊಂಬಿವಲಿ ಸœಳೀಯ ಸಮಿತಿಯ ಕಾರ್ಯದರ್ಶಿ ಪುರಂದರ ಪೂಜಾರಿ, ಭಾರತ್ ಬ್ಯಾಂಕಿನ ಕಲ್ಯಾಣ್ ಶಾಖೆಯ ಪ್ರಬಂಧಕ ಹರೀಶ್ ಕುಂದರ್, ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜಯಂತಿ ಸಂಭ್ರಮದ ಆಚರಣೆಯಲ್ಲಿ ಸ್ಥಳೀಯ ಗಣ್ಯರು, ಉದ್ಯಮಿಗಳು, ಸಮಾಜ ಸೇವಕರು ಅಲ್ಲದೆ, ಕಲ್ಯಾಣ್, ಶಾಹಡ್, ಠಾಕುರ್ಲಿ, ವಿಟಲ್‌ವಾಡಿ, ಅಂಬರ್‌ನಾಥ್, ಟಿಟ್ವಾಲ, ಅಂಬಿವಲಿ ಪರಿಸರದ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯನ್ನು ಆಯೋಜಿಸ ಲಾಗಿತ್ತು. ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಯಿತು. ಅಲ್ಲದೆ ಕ್ರೀಡಾಕ್ಷೇತ್ರದ ಪ್ರತಿಭಾನ್ವಿತರು ಮತ್ತು ದಾನಿಗಳನ್ನು ಗೌರವಿಸಲಾಯಿತು. ಕಲ್ಯಾಣ್ ಪೂರ್ವದ ಬಡ ಕುಟುಂಬವೊಂದನ್ನು ಅಗತ್ಯ ಸಾಮಗ್ರಿಗಳನ್ನು ಮಹೇಶ್ ಕುಕ್ಯಾನ್ ಅವರ ವತಿಯಿಂದ ನೀಡಲಾಯಿತು. ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.