ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ ಗುರು ಮಂದಿರದ ಮತ್ತು ಸ್ಥಳೀಯ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಸಾನಾ³ಡಾ ಪೂರ್ವದ ಸೆಕ್ಟರ್ 10, ಪ್ಲಾಟ್ ಸಂಖ್ಯೆ 32 ರಲ್ಲಿ ಅಸೋಸಿಯೇಶನ್‌ನ ಜಾಗದಲ್ಲಿ ನಡೆಯಿತು.
ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಗುರು ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದರು. ನವಿ ಮುಂಬಯಿಯ ಮಾಜಿ ನಗರ ಸೇವಕ ಸಂತೋಷ್ ಡಿ. ಶೆಟ್ಟಿ ಅವರು ಶಿಲಾನ್ಯಾಸಗೈದರು. ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾ ನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಗಣ್ಯರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾಜಿ ನಗರ ಸೇವಕ ಸಂತೋಷ್ ಡಿ. ಶೆಟ್ಟಿ ಮತ್ತಿತರ ಗಣ್ಯರನ್ನು ಅಸೋಸಿಯೇಶನ್ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎನ್‌ಎಂಎಂಸಿನ ಮಹಾಪೌರ ಜಯಂತ್ ಸುತಾರ್, ಎನ್‌ಎಂಎಂಸಿನ ನಗರ ಸೇವಕರಾದ ಸೋಮನಾಥ ವಾಸ್ಕರ್ ಮತ್ತು ಮೀರಾ ಸಂಜಯ್ ಪಾಟೀಲ್, ಶ್ರೀ ಮೂಕಾಂಬಿಕ ಮಂದಿರ ಘನ್ಸೋಲಿ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಸಂಸ್ಥೆಯ ಅಧ್ಯಕ್ಷ ಎನ್. ಟಿ. ಪೂಜಾರಿ, ಸಮಾಜ ಸೇವಕರುಗಳಾದ ಸುರೇಂದ್ರ ಎ. ಪೂಜಾರಿ, ಆಶಾ ಅಂಚನ್, ಎಸ್. ಕೆ. ಕೋಟ್ಯಾನ್, ರೇಷ್ಮಾ ರವಿರಾಜ್ ಪೂಜಾರಿ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ನೆರೂಲ್‌ನ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಸೂರಜ್ ಭಟ್ ಮತ್ತು ಸಹ ಪುರೋಹಿತರು ಭೂಮಿ ಪೂಜೆ ನೆರವೇರಿಸಿ ಅನುಗ್ರಹಿಸಿದರು. ಜಯಂತಿ ಕೃಷ್ಣ ಕೋಟ್ಯಾನ್ ದಂಪತಿ ಪೂಜಾಧಿಗಳಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿ ಗಳು, ನವಿಮುಂಬಯಿ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಧರ್ಮ ದರ್ಶಿ ರಮೇಶ್ ಎಂ. ಪೂಜಾರಿ, ಉಪ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಕೋಶಾಧಿಕಾರಿ ಜಯರಾಮ ಪಿ. ಪೂಜಾರಿ, ಜತೆ ಕಾರ್ಯದರ್ಶಿ ಎನ್. ಕೆ. ಪೂಜಾರಿ, ಜತೆ ಕೋಶಾಧಿಕಾರಿ ಶೇಖರ್ ಬಿ. ಪಾಲನ್ ಸೇರಿದಂತೆ ಬಿಲ್ಲವ ಬಂಧುಗಳು ಉಪಸ್ಥಿತರಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್