Advertisement
ಸೆ. 7 ರಂದು ಅಪರಾಹ್ನ ಮೀರಾರೋಡ್ ಪೂರ್ವದ ಸಾಯಿಬಾಬಾ ನಗರದಲ್ಲಿರುವ ಥೋಮಸ್ ಕೆಥೋಲಿಕ್ ಚರ್ಚ್ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯ 164 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೋಷಣೆ, ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸಿ ಆತ್ಮವಿಶ್ವಾಸದಿಂದ ಬದುಕುಲು ಸಂಘಟನೆಯ ಪಾತ್ರ ಹಿರಿದು. ತಳ ಮಟ್ಟದ ಸದಸ್ಯರಿಗೆ ಈ ಬಗ್ಗೆ ಅರಿವು ಮೂಡಿಸಲು ಬಿಲ್ಲವರ ಅಸೋಸಿಯೇಶನ್ ನಗರ, ಉಪನಗರ ಹಾಗೂ ತವರೂರು ಸೇರಿದಂತೆ ಎಲ್ಲಾ 23 ಸ್ಥಳೀಯ ಸಮಿತಿಗಳಲ್ಲಿ, ಬಿಲ್ಲವರ ಅಸೋಸಿಯೇಶನ್ ಪ್ರಾಯೋಜಿತ ಶೈಕ್ಷಣಿಕ ಕೇಂದ್ರ, ಭಾರತ್ ಬ್ಯಾಂಕ್‌ಗಳಲ್ಲಿ ವಿಭಿನ್ನ ದಿನಗಳಲ್ಲಿ ಶ್ರೀ ನಾರಾಯಣ ಗುರು ಜಯಂತಿ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ನುಡಿದರು.
ಗೌರವ ಕಾರ್ಯದರ್ಶಿ ಎನ್. ಪಿ. ಕೋಟ್ಯಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಸೋಸಿಯೆಶನಿನ ಸಾಧನೆಗಳನ್ನು ವಿವರಿಸಿ ದರು. ಸಮಾರಂಭದಲ್ಲಿ ಮೀರಾರೋಡ್ ರಾಜಕೀಯ ನೇತಾರ, ಮಾಜಿ ಎಂಎಲ್‌ಸಿ ಮುಜಾಫರ್ ಹುಸೇನ್, ಮಾಜಿ ಮೇಯರ್ ಗೀತಾ ಜೈನ್, ವಿವಿಧ ಸಂಘಟನೆಗಳ ಪ್ರತಿನಿಧಿ ಗಳನ್ನು, ದಾನಿಗಳನ್ನು, ಹಿತೈಷಿಗಳನ್ನು ಭಾರತ್ ಬ್ಯಾಂಕ್ ಸಾಂತಾಕ್ರೂಜ್ ಶಾಖೆಯ ಮುಖ್ಯ ಪ್ರಬಂಧಕ ದಯಾನಂದ ಅಮೀನ್, ಗೌರವ ಕಾರ್ಯಾಧ್ಯಕ್ಷ ಭೋಜ ಬಿ. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷ ಸುಭಾಶ್‌ಚಂದ್ರ ಎಂ. ಕರ್ಕೇರ, ಸುಂದರ ಎ. ಪೂಜಾರಿ, ಕೋಶಾಧಿಕಾರಿ ಎಚ್. ಎಂ. ಪೂಜಾರಿ, ಜತೆ ಕೋಶಾಧಿಕಾರಿ ವಿಜಯ ಎನ್. ಅಮೀನ್, ಜತೆ ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಕೇಂದ್ರ ಕಚೇರಿಯ ಪ್ರತಿನಿಧಿ ಮೋಹನ್ ಡಿ. ಪೂಜಾರಿ ಅವರು ಶಾಲು ಹೊದೆಸಿ, ಫಲಪುಷ್ಪ, ಪ್ರಸಾದದೊಂದಿಗೆ ಗೌರವಿಸಲಾಯಿತು.
Related Articles
ಕೇಂದ್ರ ಕಾರ್ಯಾಲಯದ ಕಾರ್ಯಕಾರಿ ಸಮಿತಿ, ಮಹಿಳಾ ಸದಸ್ಯೆಯರು, ಸ್ಥಳೀಯ ಸಮಿತಿಗಳ ಪ್ರತಿನಿಧಿಗಳು, ವಿವಿಧ ಸಮುದಾಯ ಸಂಘಟನೆ, ತುಳು- ಕನ್ನಡಿಗ ಸಂಘ-ಸಂಸ್ಥೆ ಹಾಗೂ ರಾಜಕೀಯ ನೇತಾರರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
Advertisement
ಚಿತ್ರ-ವರದಿ : ರಮೇಶ್ ಅಮೀನ್