Advertisement

ಮದುವೆ ವಯೋಮಿತಿ ಹೆಚ್ಚಳ: ಶೇ. 95 ಜನರಿಂದ ಅಪಸ್ವರ

12:23 AM Apr 15, 2022 | Team Udayavani |

ಹೊಸದಿಲ್ಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಸರಕಾರದ ಪ್ರಸ್ತಾವನೆ ದೇಶದ ಜನತೆಗೆ ಇಷ್ಟವಾಗಿಲ್ಲ ಎನ್ನುವ ಮುನ್ಸೂಚನೆಯೊಂದು ಸಿಕ್ಕಿದೆ. ಈ ಪ್ರಸ್ತಾವನೆ ಬಗ್ಗೆ ಸಮಾಲೋಚನೆ ನಡೆಸುತ್ತಿರುವ ಸಮಿತಿಗೆ ಜನರಿಂದ ಪ್ರತಿಕ್ರಿಯೆಗಳು ಬಂದಿದ್ದು, ಅದರಲ್ಲಿ ಶೇ. 95 ಮಂದಿ ಪ್ರಸ್ತಾವನೆಯ ವಿರುದ್ಧವೇ ಇದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಹೊರಬಿದ್ದಿದೆ.

Advertisement

ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಕೇಂದ್ರ ಸರಕಾರವು ಕಳೆದ ಡಿಸೆಂಬರ್‌ನಲ್ಲೇ ಲೋಕಸಭೆಯಲ್ಲಿ ಕರಡು ಪ್ರಸ್ತಾ ವಿಸಿದೆ. ಆದರೆ ಈ ಬಗ್ಗೆ ವಿರೋಧವೂ ಇದ್ದ ಹಿನ್ನೆಲೆ ಸಮಾ ಲೋಚನೆ ನಡೆಸಲೆಂದು ಸಮಿತಿ ರಚಿ ಸಲಾಗಿತ್ತು. ಬಿಜೆಪಿ ಸಂಸದ ವಿನಯ್‌ ಸಹಸ್ರಬುದ್ಧೆ ಅವರ ನೇತೃತ್ವದ ಸಮಿತಿಗೆ 96 ಸಾವಿರ ಇಮೇಲ್‌ಗ‌ಳು ಮದುವೆ ವಯಸ್ಸು ಏರಿಕೆ ಕುರಿತಾಗಿ ಬಂದಿವೆ. ಅದರಲ್ಲಿ 90 ಸಾವಿರ ಇ ಮೇಲ್‌ಗ‌ಳು ಅಂದರೆ ಶೇ. 95ರಷ್ಟು ಇ ಮೇಲ್‌ಗ‌ಳಲ್ಲಿ ಮದುವೆ ವಯಸ್ಸು ಏರಿಕೆ ಬಗ್ಗೆ ವಿರೋಧವಿದೆ ಎಂದು ಪಿಟಿಐ ವರದಿ ಮಾಡಿದೆ. ಆ ಹಿನ್ನೆಲೆ ಸರಕಾರವು ಈ ಪ್ರಸ್ತಾವವನ್ನು ಕೈ ಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಮಿತಿಯು, ಈ ವಿಚಾರವಾಗಿ ಸರಕಾರಕ್ಕೆ ಮದುವೆ ವಯಸ್ಸು ಏರಿಸಲು ಮನವಿ ಮಾಡಿದ್ದ ಜಯಾ ಜೈಟ್ಲಿ ನೇತೃತ್ವದ ಟಾಸ್ಕ್ ಫೋರ್ಸ್‌ನೊಂದಿಗೆ ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next