Advertisement
ಒಮ್ಮೆಗೆ ಮೂರು ಬಾರಿ ತಲಾಖ್ ನೀಡುವ ಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಮಾಡಿದ ಬಳಿಕವೂ ಹಲವರು ಅದನ್ನೇ ಅನುಸರಿಸುತ್ತಿರು ವುದು ಕಂಡುಬಂದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಇಂತಹ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವಂಥ ಕಾನೂನು ತರಲು ಅಥವಾ ಪ್ರಸ್ತುತ ಇರುವ ಕಾನೂನಿಗೆ ತಿದ್ದುಪಡಿ ತರುವ ಕುರಿತು ಪರಿಶೀಲಿಸಲು ಸಂಸದೀಯ ಸಮಿತಿ ರಚಿಸಲಾಗಿದೆ. ಸೂಕ್ತ ಕಾನೂನು ಜಾರಿ ಯಲ್ಲಿ ಇಲ್ಲದ ಕಾರಣ, ತ್ರಿವಳಿ ತಲಾಖ್‌ನ ಸಂತ್ರಸ್ತೆಯರು ಅಸಹಾಯ ಕತೆಗೆ ಸಿಲುಕಿದ್ದಾರೆ. ಪೊಲೀಸರಿಗೆ ಕೂಡ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯ ವಾಗುತ್ತಿಲ್ಲ. ಹೀಗಾಗಿ, ಈ ನಿಟ್ಟಿನಲ್ಲಿ ಕಠಿನ ಕಾನೂನು ತರಲು ಸರಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಈ ಕುರಿತ ಮಸೂದೆ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಒಂದೇ ಬಾರಿಗೆ ಹೇಳುವ ತ್ರಿವಳಿ ತಲಾಖ್ ಅಸಾಂವಿಧಾನಿಕ ಮತ್ತು ನಿರಂಕುಶ ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್ ನಲ್ಲಿ ಈ ನಿಯಮವನ್ನು ರದ್ದು ಮಾಡಿ ಐತಿಹಾಸಿಕ ತೀರ್ಪು ನೀಡಿತ್ತು.