Advertisement

ಜನ ಪ್ರತಿನಿಧಿ ಕಾಯ್ದೆ ತಿದ್ದುಪಡಿ: NRI ಗಳಿಗೂ ಮತದಾನದ ಅವಕಾಶ

04:11 PM Aug 12, 2018 | |

ನವದೆಹಲಿ: ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕನ್ನು ಕಲ್ಪಿಸುವ “ಜನ ಪ್ರತಿನಿಧಿ ಕಾಯ್ದೆ
(2017) ತಿದ್ದುಪಡಿ’ ಮಸೂದೆಗೆ ಶುಕ್ರವಾರ ಲೋಕಸಭೆಯ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ 1.1 ಕೋಟಿ ಎನ್‌ಆರ್‌
ಐಗಳಿಗೆ ಬದಲಿ ಮತದಾನದ ಅನುಕೂಲ (ಪ್ರಾಕ್ಸಿ ವೋಟಿಂಗ್‌) ಸಿಗಲಿದೆ.

Advertisement

ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಿದ್ದು, ಹೊಸ ಮಸೂದೆಯಿಂದಾಗಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಸರಾಸರಿ 21 ಸಾವಿರ ಹೆಚ್ಚುವರಿ ಮತದಾರರು ಸಿಗಲಿದ್ದಾರೆ. 2014ರಲ್ಲಿ ಪ್ರಧಾನಿಯಾದಾಗಿನಿಂದ ಈವರೆಗೆ ಸುಮಾರು 1 ಕೋಟಿ
ಅನಿವಾಸಿ ಭಾರತೀಯರ ಜತೆ ಸಂವಾದ ನಡೆಸಿರುವ ಮೋದಿಯವರಿಗೆ ಇದರಿಂದ ಹೆಚ್ಚು ಅನುಕೂಲ.
ವಿದೇಶಗಳಲ್ಲಿ ಅನಿವಾಸಿ ಭಾರತೀಯ ರಿಗೆಂದೇ ಏರ್ಪಡಿಸಲಾಗುತ್ತಿದ್ದ ಬೃಹತ್‌ ಸಮ್ಮೇಳನಗಳಲ್ಲಿ ಮೋದಿ ಮಾತನಾಡಿದ್ದು ಈಗ ಅವರಿಗೇ ವರದಾನ.

ಜನ ಪ್ರತಿನಿಧಿ ಕಾಯ್ದೆ ತಿದ್ದುಪಡಿಗೆ ಅಸ್ತು ಎಂದಿರುವ ಲೋಕಸಭೆ ವಿಶ್ವದಾದ್ಯಂತ 1.1 ಕೋಟಿ ಅನಿವಾಸಿ ಭಾರತೀಯರು  ಅನಿವಾಸಿ ಭಾರತೀಯರಿಗೆ ಮತದಾನ ಅವಕಾಶದಿಂದ ಹೆಚ್ಚಿನ ಅನುಕೂಲ  ದೇಶದ ಪ್ರತಿ ಸಂಸತ್‌ ಕ್ಷೇತ್ರಕ್ಕೆ 21,000 ಹೆಚ್ಚುವರಿ ಮತದಾರರ ಸೇರ್ಪಡೆ

ಇತರ ಪ್ರಮುಖ ಅನುಕೂಲಗಳು
 ಯಾರಿಗೆ ಮತ ಹಾಕಬೇಕೆಂಬ ಎನ್‌ಆರ್‌ಐಗಳ ನಿರ್ಧಾರ, ಭಾರತದಲ್ಲಿ ಅವರ ಕುಟುಂಬದ ಇತರ ಸದಸ್ಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ.

ಪ್ರತಿ ಕ್ಷೇತ್ರದಲ್ಲೂ ಪೈಪೋಟಿ ಹೆಚ್ಚಾಗಿ, ವಿಜೇತರ ಗೆಲುವಿನ ಅಂತರ ಗಣನೀಯವಾಗಿ ಕಡಿಮೆಗೊಳ್ಳುವ ಸಾಧ್ಯತೆ.ಅರ್ಥಾತ್‌, ಭಾರೀ ಪ್ರಭಾವಿ ನಾಯಕರಿಗೂ ಸಮಬಲದ ಪೈಪೋಟಿ ನೀಡಲು 2ನೇ ಪ್ರಭಾವಿ ಅಭ್ಯರ್ಥಿಗೆ ಅವಕಾಶ.

Advertisement

ಎನ್‌ಆರ್‌ಐಗಳಿಂದ ಭಾರತದ ರಾಷ್ಟ್ರೀಯತೆ ಪರಿಕಲ್ಪನೆಗೆ ಮತ್ತಷ್ಟು ಶಕ್ತಿ.

Advertisement

Udayavani is now on Telegram. Click here to join our channel and stay updated with the latest news.

Next