ಹೊಸದಿಲ್ಲಿ: ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಹೆಣ್ಣುಮಕ್ಕಳ ವಿವಾಹ ವಯಸ್ಸು 18ರಿಂದ 21ಕ್ಕೆ ಪರಿಷ್ಕರಿಸುವ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನೂ ಲೋಕಸಭೆಯಲ್ಲಿ ಮಂಡಿಸಲು
ಸರಕಾ ರ ಮುಂದಾಗಿದೆ.
ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ 2021 ಎಂಬ ಮಸೂದೆಗೆ ಇತ್ತೀಚೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡ ಲಾಗಿತ್ತು. ಮಸೂದೆಯ ಪ್ರಕಾರ “ಆಸಕ್ತಿ ಇರುವ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಜತೆಗೆ ಲಿಂಕ್ ಮಾಡಿಸುವ ಅವಕಾಶ’ ಕಲ್ಪಿಸಲಾಗಿದೆ. ಅದಕ್ಕೆ ಪೂರಕವಾಗಿ 1950 ಮತ್ತು 1951ರಲ್ಲಿ ಜಾರಿ ಯಾಗಿರುವ ಜನಪ್ರಾತಿನಿಧ್ಯ ಕಾಯ್ದೆಗಳ ವಿವಿಧ ಸೆಕ್ಷನ್‌ಗಳಿಗೂ ತಿದ್ದುಪಡಿ ತರುವ ಅಂಶವನ್ನು ಈ ಮಸೂ ದೆಯಲ್ಲಿ ಪ್ರಸ್ತಾವಿಸಲಾಗಿದೆ. ಈ ಉದ್ದೇಶಕ್ಕಾಗಿ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 23ಕ್ಕೆ ತಿದ್ದುಪಡಿ ತರಬೇಕು. ವಿವಿಧ ಸ್ಥಳಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲು ಉದ್ದೇಶಿಸ ಲಾಗಿದೆ. ಆಧಾರ್ ಸಂಖ್ಯೆ ನೀಡದೆ ಇರುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಅಂಥವರಿಗೆ ಬೇರೆ ದಾಖಲೆ ನೀಡಲು ಅವಕಾಶವಿದೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಪಿಂಕ್‌ಬಾಲ್ ಟೆಸ್ಟ್: ಮಂಕಾದ ಇಂಗ್ಲೆಂಡ್; ಅಜೇಯ ದಾಖಲೆಯತ್ತ ಆಸೀಸ್
ಇದರ ಜತೆಗೆ ಜ.1ರಿಂದ 18 ವರ್ಷ ಪೂರೈಸುವವರು ಇನ್ನು ವರ್ಷದಲ್ಲಿ 4 ಬಾರಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಅದರ ಪ್ರಕಾರ ಜ.1, ಎ.1, ಜು.1 ಮತ್ತು ಅ.1ರಂದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 14ಕ್ಕೆ ತಿದ್ದುಪಡಿ ತರಲಾಗುತ್ತದೆ. ಸದ್ಯ ಇರುವ ನಿಯಮ ಪ್ರಕಾರ ಪ್ರತಿ ವರ್ಷ ಜ.1ರಂದು 18 ವರ್ಷ ಪೂರ್ತಿ ಗೊಳ್ಳಲಿರುವವರಿಗೆ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಲು ಅವಕಾಶ ಇದೆ. ಇದಲ್ಲದೆ, ಕಾಯ್ದೆಯ ಸೆಕ್ಷನ್ 20ಕ್ಕೆ ತಿದ್ದುಪಡಿ ತರುವುದರಿಂದ ಲಿಂಗ ಸಮಾನತೆ ತರಲು ನೆರವಾಗಲಿದೆ. ಅಂದರೆ “ಪತ್ನಿ’ಯನ್ನು “ಸಂಗಾತಿ’ ಎಂದು ಬದಲಾಯಿ ಸಲು ಅನುಕೂಲವಾಗಲಿದೆ. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಪತ್ನಿ ಸರ್ವಿಸ್ ವೋಟರ್ ಆಗಿ ಹೆಸರು ನೋಂದಾಯಿಸಲು ಅವಕಾಶ ಉಂಟು. ಆದರೆ ಮಹಿಳೆಯೇ ಸೇನಾಧಿ ಕಾರಿಯಾಗಿರುವ ಸಂದರ್ಭದಲ್ಲಿ ಆವರ ಪತಿಗೆ ಇಂಥ ಅವಕಾಶ ಇರುವುದಿಲ್ಲ. ಹೀಗಾಗಿ ಈ ಬದಲಾವಣೆಯಾಗಿದೆ. ಇದೇ ವೇಳೆ ಸಂಸತ್‌ನ ಅಧಿವೇಶನ ಗುರುವಾರ (ಡಿ.23) ಮುಕ್ತಾಯವಾಗಲಿದೆ.
29ರ ಬದಲು 6
ನ.29ರಂದು ಶುರುವಾಗಿದ್ದ ಅಧಿವೇಶನದಲ್ಲಿ ಸರ ಕಾ ರ 29 ಮಸೂ ದೆಗಳನ್ನು ಮಂಡಿಸಿ ಅಂಗೀಕರಿಸಲು ಮುಂದಾಗಿತ್ತು. ಲೋಕಸಭೆಯಲ್ಲಿ ಗದ್ದಲದ ಕಾರಣದಿಂದ ಕೇವಲ 6 ಮಸೂ ದೆಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ.