Advertisement
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಕಳೆದ ವರ್ಷದ ಬೆಳಗಾವಿ ಅಧಿವೇಶನಕ್ಕೆ ಸಂಬಂಧಿಸಿದ ಬಿಲ್ ಮೊತ್ತವನ್ನು ಬಾಕಿ ಉಳಿಸಿಕೊಂಡ ಸರಕಾರ ಅದರಲ್ಲೂ 40 ಪರ್ಸೆಂಟ್ ಲೂಟಿಗೆ ಹುನ್ನಾರ ನಡೆಸಿದೆಯೇ ಮುಖ್ಯಮಂತ್ರಿ ಬೊಮ್ಮಾಯಿ ಅವರೇ’ ಎಂದು ಪ್ರಶ್ನಿಸಿದೆ.
ಸಂಸ್ಕೃತ ವಿವಿಗೆ ಮನ್ನಣೆ ನೀಡುವ ಬಿಜೆಪಿ ಸರಕಾರ, ಬುಡಕಟ್ಟು ವಿಶ್ವವಿದ್ಯಾನಿಲಯದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಜಾನಪದದ ಶ್ರೀಮಂತಿಕೆ ಹೊಂದಿದ ಬುಡಕಟ್ಟು ಸಂಸ್ಕೃತಿಯು ಬಿಜೆಪಿ ಪ್ರಕಾರ ಅಧ್ಯಯನ ಯೋಗ್ಯವಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದೆ. ಅಗಲಿದ ಗಣ್ಯರಿಗೆ ಉಭಯ ಸದನದಲ್ಲಿ ಸಂತಾಪ
ಬೆಳಗಾವಿ: ಇತ್ತೀಚೆಗೆ ನಿಧನ ಹೊಂದಿದ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಕಿ, ಮಾಜಿ ಸಂಸದ ಕೊಳೂರು ಬಸನಗೌಡ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ಮಾಜಿ ಶಾಸಕರಾದ ಜಬ್ಟಾರ್ ಖಾನ್ ಹೊನ್ನಳ್ಳಿ, ಎಸ್.ಎಸ್. ಪೂಜಾರಿ, ಸುಧೀಂದ್ರ ರಾವ್ ಕಸ್ಬೆ, ಎನ್.ಟಿ. ಬೋಪಣ್ಣ, ಶ್ರೀಶೈಲಪ್ಪ ಬಿದರೂರು, ಕುಂಬಳೆ ಸುಂದರ್ ರಾವ್, ಶಂಕರ ಗೌಡ ಎಸ್. ಪಾಟೀಲ್, ನಟ ಲೋಹಿತಾಶ್ವ, ಯಕ್ಷಗಾನ ಕಲಾವಿದ ಬಂಗಾರ್ ಆಚಾರ್, ಕೆರೆ ನಿರ್ಮಾತೃ ಕಲ್ಮನೆ ಕಾಮೇಗೌಡ, ವೇದಾಂತ ವಿದ್ವಾನ್ ಆರ್.ಎಲ್. ಕಶ್ಯಪ್ ಸಹಿತ ಅಗಲಿದ ಹಲವು ಗಣ್ಯರಿಗೆ ಸೋಮವಾರ ಉಭಯ ಸದನಗಳಲ್ಲಿ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು.