Advertisement

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯಿಂದ ಹೊರನಡೆದ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಬಿಲ್ ಗೇಟ್ಸ್

10:09 AM Mar 15, 2020 | Mithun PG |

ವಾಷಿಂಗ್ಟನ್: ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಸಂಸ್ಥೆಯ ಆಡಳಿತ ಮಂಡಳಿಯಿಂದ ಹೊರನಡೆದು ಅಚ್ಚರಿ ಮೂಡಿಸಿದ್ದಾರೆ. ಈ ವಿಚಾರವನ್ನು ಶುಕ್ರವಾರ ಧೃಡಪಡಿಸಿದ್ದು ಹಾಥ್ ವೇ ಕಂಪೆನಿಯ ಆಡಳಿತ ಮಂಡಳಿಯಿಂದಲೂ ಕೆಳಗಿಳಿದಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೈಕ್ರೋಸಾಫ್ಟ್ ಮತ್ತು ಬರ್ಕ್ ಶೈರ್ ಹಾಥ್ ವೇ ಕಂಪೆನಿಗಳ ಆಡಳಿತ ಮಂಡಳಿಗಳಿಂದ ನಿವೃತ್ತನಾಗುವ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಉಳಿದ ಬದುಕಿನ ಸಮಯವನ್ನು ಜಾಗತಿಕ ಆರೋಗ್ಯ, ಅಭಿವೃ್ದ್ಧಿ, ಶಿಕ್ಷಣ ಮುಂತಾದ ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತೇನೆ. ಅದೇ ರೀತಿ, ನನ್ನ ಹೆಚ್ಚಿನ ಸಮಯ ಹವಮಾನ ಬದಲಾವಣೆಯ ಸಮಸ್ಯೆಗೆ ಪರಿಹಾರ ಕಾಣುವುದಕ್ಕೆ ಮೀಸಲಿರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ಮೈಕ್ರೋಸಾಫ್ಟ್ ಮತ್ತು ಬರ್ಕ್ ಶೈರ್ ಕಂಪೆನಿಗಳ ನಾಯಕತ್ವ ಎಂದಿಗೂ ಬಲಿಷ್ಟವಾಗಿರಲಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಸಕಾಲ  ಎಂಬ ನಿರ್ಣಯಕ್ಕೆ ಬಂದೆ. ಕಂಪೆನಿ ಆಡಳಿತ ಮಂಡಳಿಯಿಂದ ದೂರ ಇದ್ದೇನೆ ಎಂದ ಮಾತ್ರಕ್ಕೆ ಕಂಪೆನಿಯಿಂದಲೇ ದೂರ ಉಳಿದಿಲ್ಲ. ಮೈಕ್ರೋಸಾಫ್ಟ್ ಯಾವತ್ತಿದ್ದರೂ ನನ್ನ ಬದುಕಿನ ವೃತ್ತಿಯ ಒಂದು ಮಹತ್ತವ ಭಾಗ.ಮಾತ್ರವಲ್ಲದೆ ಸತ್ಯಾ ನಾಡೆಲ್ಲಾ ಮತ್ತು ತಾಂತ್ರಿಕ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಸಂಸ್ಥೆಯ ಮಹತ್ವಾಕಾಂಕ್ಷೆಯನ್ನು ತಲುಪಲು ಬೇಕಾದ ಮಾರ್ಗವನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next