ವಾಷಿಂಗ್ಟನ್: ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ಬೇಡದ ತಾಪತ್ರಯವೊಂದು ತಗುಲಿಕೊಂಡಿದೆ. ರಷ್ಯಾ ಮೂಲದ ಮಿಲಾ ಆ್ಯಂಟನೊವಾ ಎಂಬುವರೊಂದಿಗೆ ಅವರು ಬಹಳ ಹಿಂದೆ ಸಂಬಂಧ ಹೊಂದಿದ್ದರು. ಆಕೆ ಆ್ಯನ್ನಾ ಚಾಪ್ಶನ್ ಎಂಬ ರಷ್ಯಾ ಗುಪ್ತಚಾರಿಣಿಯ ಆಪ್ತೆ ಎಂಬುದು ಈಗ ಖಚಿತವಾಗಿದೆ. ಈ ವಿಚಾರ ಬಿಲ್ ಗೇಟ್ಸ್‌ಗೆ ಗೊತ್ತಿತ್ತೋ, ಇಲ್ಲವೋ ಎನ್ನುವುದೇ ಈಗಿನ ಪ್ರಶ್ನೆ. ಒಂದು ವೇಳೆ ಗೇಟ್ಸ್‌ಗೆ ಮುಂಚೆಯೇ ಗೊತ್ತಿದ್ದರೆ ಅವರಿಗೆ ವಿಪತ್ತು ತಂದೊಡ್ಡುವುದು ಖಚಿತ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ದಿವಂಗತ ಜೆಫ್ರಿ ಎಪ್‌ಸ್ಟೀನ್, ಬಿಲ್ ಗೇಟ್ಸ್‌ಗೆ ಆ್ಯಂಟನೊವಾ ಜೊತೆಗಿರುವ ಸಂಬಂಧವನ್ನೇ ಇಟ್ಟುಕೊಂಡು ಗೇಟ್ಸ್‌ರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಅದು ಕಳೆದ ವಾರ ಬಹಿರಂಗವಾಗಿತ್ತು. ಈ ಬೆನ್ನಲ್ಲೇ ಮಿಲಾ, ರಷ್ಯಾದ ಗುಪ್ತಚರಳಾದ ಆ್ಯನ್ನಾ ಚಾಪ್ಶನ್ ಎಂಬುವವಳ ಸಹವರ್ತಿ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಡೈಲಿ ಮೇಲ್ ವರದಿಗಳ ಪ್ರಕಾರ ಆ್ಯನ್ನಾ ಚಾಪ¾ನ್ ಜತೆಗೆ ಮಿಲಾ ವಾಲ್‌ಸ್ಟ್ರೀಟ್‌ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾಳೆ ಎನ್ನಲಾಗಿದ್ದು, ಆ ಫೋಟೋವನ್ನು ಕೂಡ ಬಿಡುಗಡೆಗೊಳಿಸಲಾಗಿದೆ. ಇದುವರೆಗೆ ಮಿಲಾ ಸಂಶಯಾಸ್ಪದ ಚಟುವಟಿಕೆ ನಡೆಸಿದ್ದು ಬಯಲಾಗಿಲ್ಲ.
Advertisement
ಹಳೆ ಪ್ರೇಮ ಪ್ರಕರಣದಿಂದ Bill Gates ಗೆ ಸಂಕಷ್ಟ!
10:38 AM May 28, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.