ನವದೆಹಲಿ: ಅಮೆರಿಕದ ಖ್ಯಾತ ಉದ್ಯಮಿ, ಮೈಕ್ರೋಸಾಫ್ಟ್ ಕಂಪನಿ ಸ್ಥಾಪಕ ಬಿಲ್ ಗೇಟ್ಸ್ ಅವರು ಕಿಚಡಿ ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರೇ ಇದೇನಪ್ಪಾ ಅಂತ ಹುಬ್ಬೇರಿಸಬೇಡಿ, ಹೌದು ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭೇಟಿ ನೀಡಿರುವ ಸಂದರ್ಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಾರ್ಗದರ್ಶನದಲ್ಲಿ ಬಿಲ್ ಗೇಟ್ಸ್ ಕಿಚಡಿ ತಯಾರಿಸಿದ್ದಾರೆ.!
ಇದನ್ನೂ ಓದಿ:ಶಾ ಅವರಿಗೆ 5 ಕೆ.ಜಿಯ ಬೆಳ್ಳಿಯ ಕಿರಿಟ, ಗದೆ ನೀಡಿದ ಶಾಸಕ ಶರಣು ಸಲಗರ್
ಇತ್ತೀಚೆಗೆ ನಡೆದ “ಸಬಲೀಕರಣದ ಮೂಲಕ ಆರೈಕೆ ಅಭಿಯಾನದಲ್ಲಿ ಬಿಲ್ ಗೇಟ್ಸ್ ಪಾಲ್ಗೊಂಡಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡಾ ಹಾಜರಿದ್ದರು. ಈ ಸಂದರ್ಭದಲ್ಲಿ ಗೇಟ್ಸ್ ಮತ್ತು ಇರಾನಿ ಜತೆಗೂಡಿ ಭಾರತೀಯರ ಅತ್ಯುತ್ತಮ ಆಹಾರಗಳಲ್ಲಿ ಒಂದಾದ ಕಿಚಡಿಯನ್ನು ತಯಾರಿಸುವ ಮೂಲಕ ಪೌಷ್ಠಿಕಾಂಶದ ಮೌಲ್ಯವನ್ನು ಪ್ರಸ್ತುತಪಡಿಸಿದ್ದರು.
Related Articles
ಕಿಚಡಿ ತಯಾರಿಸಲು ಸಚಿವೆ ಸ್ಮೃತಿ ಇರಾನಿ ಅವರು ಬಿಲ್ ಗೇಟ್ಸ್ ಅವರಿಗೆ ಸಲಹೆ ನೀಡಿದ್ದರು. ಇದೀಗ ಬಿಲ್ ಗೇಟ್ಸ್ ಕಿಚಡಿ ತಯಾರಿಸಿರುವ ವಿಡಿಯೋವನ್ನು ಸ್ಮೃತಿ ಇರಾನಿ ಟ್ವೀಟರ್ ನಲ್ಲಿ ಶೇರ್ ಮಾಡುವ ಮೂಲಕ ವೈರಲ್ ಆಗಿದೆ.