ಲಂಡನ್: ಮಾರಣಾಂತಿಕ ಕೊರೊನಾ ವೈರಸ್ ಅನ್ನು ಬಡಿದಟ್ಟಲು ಇಡೀ ಜಗತ್ತೇ ಸನ್ನದ್ಧವಾಗಿದೆ. ಈ ಭೀಕರ ಮಾರಿಯ ವಿರುದ್ಧ ಹೋರಾಡುವ ಸಲುವಾಗಿ ವಿಶ್ವಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ.
ಇದೀಗ ಈ ಅಭಿಯಾನಕ್ಕೆ ಕೈಜೋಡಿಸಿರುವ ಬಿಲ್ ಗೇಟ್ಸ್ ಅವರು ಬಳಲಿದ ರಾಷ್ಟ್ರಗಳಿಗೆ ನೆರವಿನ ಹಸ್ತ ನೀಡಲು ಮುಂದಾಗಿದ್ಧಾರೆ.
ಈ ಕುರಿತಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ದೇಶಗಳ ಜತೆ ಶ್ರೀಮಂತ ರಾಷ್ಟ್ರಗಳು ಕೈಜೋಡಿಸಬೇಕೆಂದು ಎಂದಿದ್ದಾರೆ.
ಕೋವಿಡ್ 19 ಅನ್ನು ಶತಮಾನದಲ್ಲಿ ಒಮ್ಮೆ ಹರಡುವ ಮಾರಕ ರೋಗ ಎಂದು ಬಣ್ಣಿಸಿರುವ ಬಿಲ್ ಗೇಟ್ಸ್ ಬಡ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಶ್ರೀಮಂತ ರಾಷ್ಟ್ರಗಳು ನೆರವಾಗಬೇಕೆಂದು ವಿನಂತಿಸಿಕೊಂಡಿ¨ªಾರೆ. ಬಡ ದೇಶಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ನಾವು ಒಂದಷ್ಟು ಜೀವಗಳನ್ನು ಉಳಿಸಬಹುದು ಎಂದಿದ್ದಾರೆ. ಈ ಕುರಿತಂತೆ “ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸೀನ್’ನಲ್ಲಿ ಮುಖ್ಯ ಲೇಖನ ಬರೆದಿ¨ªಾರೆ.
ಈ ರೋಗ ನಿಯಂತ್ರಣಕ್ಕಾಗಿ ಕೈಜೋಡಿಸಲು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯನ್ ಡಾಲರ್ ನೆರವು ನೀಡಲಿದೆ ಎಂದು ಈಗಾಗಲೇ ಹೇಳಿದೆ.