Advertisement

Pakistan: ಬಿಲಾವಲ್‌ ಭುಟ್ಟೋ ಬೆಂಬಲಿತ ಸರ್ಕಾರ ಅಸ್ತಿತ್ವಕ್ಕೆ?

12:10 AM Feb 14, 2024 | Pranav MS |

ಇಸ್ಲಾಮಾಬಾದ್‌: ಅತಂತ್ರ ಸಂಸತ್‌ ರಚನೆಯಾಗಿರುವ ಪಾಕಿಸ್ತಾನದಲ್ಲಿ ನವಾಜ್‌ ಷರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್‌-ಎನ್‌ ಮತ್ತು ಬಿಲಾವಲ್‌ ಭುಟ್ಟೋ ನೇತೃತ್ವದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ನಡುವೆ ಸಹಮತ ಉಂಟಾಗುವ ಸಾಧ್ಯತೆ ಇದೆ. ಪ್ರಧಾನಿ ಹುದ್ದೆಯನ್ನು ಮೊದಲ 3 ವರ್ಷ ಪಿಪಿಪಿಗೆ ಮತ್ತು ಕೊನೆಯ 2 ವರ್ಷಗಳಲ್ಲಿ ನವಾಜ್‌ ಷರೀಫ್ ಪಕ್ಷಕ್ಕೆ ಎಂಬ ಸೂತ್ರಕ್ಕೆ ಬಹುತೇಕ ಒಪ್ಪಿಗೆ ಉಂಟಾಗಿತ್ತು. ಆದರೆ, ಮಂಗಳವಾರ ನಡೆದಿದ್ದ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಯನ್ನು ಪಾಕಿಸ್ತಾನ ಮುಸ್ಲಿಂ ಲೀಗ್‌-ಎನ್‌ ಪಕ್ಷಕ್ಕೆ ಬಿಟ್ಟು ಕೊಡಲು ಬಿಲಾವಲ್‌ ಭುಟ್ಟೋ ಒಪ್ಪಿ­ಕೊಂಡಿದ್ದಾರೆ. ಆದರೆ, ಅವರು ಸರ್ಕಾರದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ಬಿಲಾವಲ್‌ ಭುಟ್ಟೋ ಪಕ್ಷದಲ್ಲಿ ಭಿನ್ನಮತ ಉಂಟಾ­ಗಿರುವಂತೆಯೇ ಈ ಬೆಳವಣಿಗೆ ನಡೆದಿದೆ.

Advertisement

30 ಅರ್ಜಿಗಳ ವಜಾ: ಚುನಾ­ವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲಾಹೋರ್‌ ಹೈಕೋರ್ಟ್‌ನಲ್ಲಿ ಸಲ್ಲಿಸಲಾ ಗಿದ್ದ 30 ಅರ್ಜಿ­ಗಳನ್ನು ವಜಾಗೊಳಿಸ ಲಾಗಿದೆ. ಪಿಎಂ­ಎಲ್‌ನ ನಾಯಕರಾದ ನವಾಜ್‌ ಷರೀಫ್, ಶೆಹಬಾಜ್‌ ಷರೀಫ್ ಸೇರಿ­ದಂತೆ ಹಲವರ ಆಯ್ಕೆ ಪ್ರಶ್ನಿಸಿ ಪಾಕಿಸ್ತಾನ ತೆಹ್ರೀಕ್‌-ಇ- ಇನ್ಸಾಫ್ ಪಕ್ಷದ ನಾಯಕರು ದಾವೆ ಹೂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next