Advertisement
ಸಾಧನೆ ಎಂಬುದು ಸೋಮಾರಿಯ ಸ್ವತ್ತಲ್ಲ, ಅದು ಸಾಧಕನೂ ಸ್ವತ್ತು ಎಂಬ ಮಾತಿಗೆ ಅನ್ವರ್ಥವಾಗಿ ಅದೆಷ್ಟೂ ಸಾಧಕರನ್ನು ನಾವು ಗುರುತಿಸಬಹುದಾಗಿದೆ.
Related Articles
Advertisement
ಬಡತನ ಎಂಬುದು ಶಾಪವಲ್ಲ, ವರಬಿಲ್ಗೇಟ್ಸ್ ಪ್ರಕಾರ ಬಡತನ ಎಂಬುದು ಶಾಪವಲ್ಲ, ಅದು ವರ. ಅವರೇ ಹೇಳುವಂತೆ, ಯಾವುದೇ ವ್ಯಕ್ತಿಯೂ ಬಡತನದಲ್ಲಿ ಹುಟ್ಟಿರುವುದೂ ನಮ್ಮ ತಪ್ಪಲ್ಲ, ಆದರೆ, ಬಡತನದಲ್ಲಿ ಸಾಯುವುದು ನಮ್ಮ ತಪ್ಪು ಎಂದು ಹೇಳುವ ಬಿಲ್ ಗೇಟ್ಸ್ ಅವರೂ, ಬಡತನವೂ ಸಾಧನೆಗೆ ಎಂದೂ ಅಡ್ಡಿಯಲ್ಲ, ಸಾಧಿಸುವ ಛಲ ಹಾಗೂ ಛಾತಿ ಈ ಎರಡೂ ಇದ್ದರೇ ಸಾಕು. ತಾಳ್ಮೆಯೇ ಸಾಧನೆಯ ಮೆಟ್ಟಿಲು
ಜೀವನದಲ್ಲಿ ನಾವು ತಾಳ್ಮೆ ಕಳೆದುಕೊಳ್ಳವುದು ಸಹಜ. ಏಕೆಂದರೆ ಸಂದರ್ಭ ಹಾಗಿರುತ್ತದೆ. ಬಿಲ್‌ಗೇಟ್ಸ್ ಹೇಳುವಂತೆ ಸಾಧಕನೂ ಯಾವಾಗಲೂ ತಾಳ್ಮೆಯಿಂದಿರಬೇಕು. ಎಡವುದು ಸಹಜ. ಅನಂತರ ತಾಳ್ಮೆಯ ಔಷಧಿ ಹಚ್ಚಿದರೆ, ಮುಂದೆ ಅವಕಾಶಗಳು ಒದಗಿಬರುತ್ತವೆ. ಇದೇ ಸಾಧನೆಯ ಮೊದಲ ಮೆಟ್ಟಿಲು ಆಗುವುದಂತೂ ಖಚಿತ. ಸಾಮರ್ಥ್ಯವನ್ನು ನಿರ್ಲಕ್ಷಿಸದಿರು
ನಮ್ಮಲ್ಲಿರುವ ಕೊರತೆಗಳನ್ನು ಇನ್ನೊಬ್ಬರು ಅಳವಡಿಸಿಕೊಳ್ಳುವುದು ಸಹಜ. ಆದರೆ ಇದು ತಪ್ಪು, ಅವರಿಗಿಂತ ಭಿನ್ನ ಆಲೋಚನೆ ಹಾಗೂ ಪ್ರತಿಭೆ ನಮ್ಮಲ್ಲಿರುತ್ತದೆ. ಅದು ಹೊರ ತೆಗೆದು ಮುನ್ನಡೆದಾಗ ನಾವು ಸಾಧನೆಗೆ ಮುಂದಾಗಬಹುದು. ಶ್ರೀಮಂತ ಅಷ್ಟೇ ಅಲ್ಲ, ಉದಾರಿ
ಬಿಲ್‌ಗೇಟ್ಸ್ ಜಗತ್ತಿನ ಮೊದಲ ಶ್ರೀಮಂತ ಅಷ್ಟೇ ಅಲ್ಲ, ಆತ ಅಷ್ಟೇ ಉದಾರಿಯೂ ಕೂಡ ಹೌದು. 1994ರಲ್ಲಿ ಪತ್ನಿ ಮಿಲಿಂದಾ ಜತೆಗೂಡಿ, ಗೇಟ್ಸ್ ಹಾಗೂ ಮಿಲಿಂದಾ ಫೌಂಡೇಶನ್ ಆರಂಭಿಸಿ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಸುಧಾರಿಸಿ, 2030ರಷ್ಟರಲ್ಲೇ, ಬಡತನ ನಿರ್ಮೂಲನೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಮಿಲಿಯನ್ ಡಾಲರ್ ಹಣವನ್ನು ಉದಾರವಾಗಿ ದಾನ ಮಾಡಿದ್ದಾನೆ. 2000ರಲ್ಲಿ ಸುಮಾರು 29,900 ಕೋ. ರೂ. ಹಣವನ್ನು ದಾನ ಮಾಡಿದ್ದಾನೆ. ಪಕ್ಕ ಲೆಕ್ಕಾಚಾರ ಮನುಷ್ಯ
ಬಿಲ್‌ಗೇಟ್ಸ್ ಪಕ್ಕಾ ಲೆಕ್ಕಾಚಾರದ ಮನುಷ್ಯ. ಆತ ಒಂದು ರೂಪಾಯಿ ಬಂಡವಾಳ ಹೂಡಿದರೆ, 100 ರೂ. ಲಾಭ ಗಳಿಸಬೇಕು ಎಂಬಷ್ಟು ಲೆಕ್ಕಾಚಾರದ ಮನುಷ್ಯ. ಅದಕ್ಕೆ ಸಾಕ್ಷಿ ಎಂಬಂತೆ ಸಂದರ್ಶನದಲ್ಲಿ ನೀವು ನನಗೆ ನೂರು ಕೊಡಿ, ಒಂದು ವರ್ಷದಲ್ಲಿ, ಒಂದು ಕೋಳಿ ಮೂಲಕ ಲಕ್ಷಾಧಿಪತಿಯಾಗುತ್ತೇನೆ ಎಂಬ ಮಾತೇ ಆತನ ಸಾಧನೆ ಬದುಕಿಗೆ ಹಿಡಿದ ಕೈಗನ್ನಡಿ. ಬಿಲ್‌ಗೇಟ್ಸ್ ಅವರೇನೂ ಓದಿನಲ್ಲಿ ಮುಂದಿರಲಿಲ್ಲ, ಆದರೆ ಆತನ ಮಾರ್ಕ್ ಕಾರ್ಡ್‌ನಲ್ಲಿ ಎಲ್ಲ ವಿಷಯಗಳಲ್ಲಿ ಫೇಲ್ ಆದರೆ, ಕಂಪ್ಯೂಟರ್ ಸೈನ್ಸ್ ಮಾತ್ರ ಆತನ ಅಂಕ ಮೊದಲಿನ ಸ್ಥಾನದಲ್ಲಿರುತ್ತಿತ್ತು. ಮುಂದೆ ಹಾರ್ವರ್ಡ್ ವಿವಿಯಲ್ಲಿ ಓದು ಆರಂಭಿಸಿದ ಬಿಲ್‌ಗೇಟ್ಸ್ , ಯಾವಾಗಲೂ ಕಂಪ್ಯೂಟರ್ ಮುಂದೇ ಇರುತ್ತಿದ್ದ. ಮುಂದೆ ಯೋಚನೆಯಂತೆ, ಅರ್ಧದಲ್ಲಿ ಹಾರ್ವರ್ಡ್ ವಿವಿಯನ್ನು ಬಿಟ್ಟು 1973ರಲ್ಲಿ ಪಾಲ್ ಅಲೇನ್ ಜತೆಗೂಡಿ ಮೈಕ್ರೋಸಾಫ್ಟ್ ಎಂಬ ಸಾಫ್ಟ್ವೇರ್ ಕಂಪೆನಿಯನ್ನು ಸ್ಥಾಪಿಸುತ್ತಾನೆ. ಆಗ ಆತನಿಗೆ ಕೇವಲ 30 ವರ್ಷ. ಚಿಕ್ಕ ವಯಸ್ಸಿನಲ್ಲಿ ಇಂತಹ ಸಾಹಸಕ್ಕೆ ಕೈ ಹಾಕಿ, ಗೆಲ್ಲುತ್ತಾನೆ. ಆದರೆ ಅವರ ಗೆಲುವಿನ ಬಗ್ಗೆ ಅವರ ಅಭಿಪ್ರಾಯ ಏನು? ಈ ಸಾಧನೆಗೆ ಅವರು ಅನುಸರಿಸಿದ ಮಾರ್ಗದರ್ಶನಗಳೇನು ಎಂಬ ಮಾತುಗಳನ್ನು ಹಂಚಿಕೊಳ್ಳುವುದು ಸೂಕ್ತ. – ಶಿವ, ರಾಯಚೂರು