ನೆಲಮಂಗಲ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ, ಹೆದ್ದಾರಿಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮಹಿಮಾಪುರ ಬಳಿಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಬಸ್ ಗೆ ಸಿಲುಕಿದ ಬೈಕ್ ಸವಾರನ ಪರಿಸ್ಥಿತಿ ಚಿಂತಾಜನಕವಾಗಿದೆ.
ಮೊದಲು ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಬೈಕ್ ಸರ್ವಿಸ್ ರಸ್ತೆಗೆ ಬಿದ್ದರೆ, ಮತ್ತೊಂದು ಬೈಕ್ ಹೆದ್ದಾರಿಗೆ ಬಿದ್ದಿದೆ. ಹೆದ್ದಾರಿಗೆ ಬಿದ್ದ ಸವಾರನ ಮೇಲೆ ಖಾಸಗಿ ಬಸ್ ಹರಿದಿದೆ.
ಇದನ್ನೂ ಓದಿ:2024ರ ಲೋಕಸಭೆ ಚುನಾವಣೆಗೆ ಟಾರ್ಗೆಟ್; ಕಾರ್ಯತಂತ್ರ ಶುರು
ಖಾಸಗಿ ಬಸ್ ಬೆಂಗಳೂರಿನಿಂದ-ತುಮಕೂರು ಕಡೆಗೆ ತೆರಳುತ್ತಿತ್ತು. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.