Advertisement

ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

05:31 PM Oct 22, 2021 | Team Udayavani |

ನವದೆಹಲಿ: ನೀವು ಬೈಕ್ ಅಥವಾ ದ್ವಿಚಕ್ರ ವಾಹನಗಳ ಉತ್ಸಾಹಿಗಳಾಗಿದ್ದರೆ, ವೈಯಕ್ತಿಕ ಅಪಘಾತ ವಿಮಾ ಕ್ಲೈಮ್ ಕುರಿತ ಈ ಸುದ್ದಿಯು ನಿಮಗೆ ಒಂದು ಪ್ರಮುಖ ಅಪ್‌ಡೇಟ್ ಆಗಿರುತ್ತದೆ. ಇತ್ತೀಚಿನ  ಮೋಟಾರು ವಿಮಾ ಪಾಲಿಸಿಯ ವಿವರಗಳ ಪ್ರಕಾರ, ಬೈಕಿನ ಎಂಜಿನ್ 150 ಸಿಸಿಗಿಂತ ಹೆಚ್ಚಿದ್ದರೆ, ಅಪಘಾತದ ಸಂದರ್ಭದಲ್ಲಿ ವಿಮಾ ಕಂಪನಿಯು ವೈಯಕ್ತಿಕ ಅಪಘಾತ ರಕ್ಷಣೆಯ ಕ್ಲೇಮ್ ಅನ್ನು ತಿರಸ್ಕರಿಸುವ ಸಾಧ್ಯತೆಗಳಿವೆ.

Advertisement

ಲುಧಿಯಾನದಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಲುಧಿಯಾನದಲ್ಲಿ ಬೈಕ್ ಸವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾನೆ, ಆದರೆ ವಿಮಾ ಕಂಪನಿಯು ಕ್ಲೈಮ್ ಪಾವತಿಸಲು ನಿರಾಕರಿಸಿತ್ತು. ಏಕೆಂದರೆ ವ್ಯಕ್ತಿಯು ಚಾಲನೆ ಮಾಡುತ್ತಿದ್ದ ಬೈಕ್ 150 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿತ್ತು.

ಈ ಘಟನೆಯಲ್ಲಿ ವಿಮಾ  ಕಂಪನಿಯು ವೈಯಕ್ತಿಕ ಅಪಘಾತ ಕ್ಲೈಮ್ ಅನ್ನು 150 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಮೀರಿದೆ ಎಂಬ ಕಾರಣಕ್ಕೆ ಪರಿಹಾರ ನೀಡಲು ನಿರಾಕರಿಸಿದೆ. ಕಂಪನಿಯ ಈ ಕ್ರಮವು ವಿಮೆದಾರರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ, ಆ ನಂತರ ಕಂಪನಿಯು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಬೈಕ್ ಸವಾರ 346 ಸಿಸಿ ಬೈಕನ್ನು ಚಲಾಯಿಸುತ್ತಿದ್ದ, ಆದ್ದರಿಂದ ಅಪಘಾತಕ್ಕೀಡಾದ ನಂತರ ವಿಮಾ ಕ್ಲೈಮ್ ಅನ್ನು ನಿರಾಕರಿಸಲಾಗಿತ್ತು ಎಂದು ತಿಳಿಸಿದೆ. ವೈಯಕ್ತಿಕ ವಿಮಾ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಸಾಮಾನ್ಯ ಕಲಂ 8 ರ ಅಡಿಯಲ್ಲಿ ತಿಳಿಸಲಾಗಿರುವಂತೆ, 150 ಸಿಸಿಗಿಂತ ಹೆಚ್ಚಿನ ಮೋಟಾರ್ ಸೈಕಲ್ ಅಥವಾ ಮೋಟಾರ್ ಸ್ಕೂಟರ್ ಚಾಲನೆ ಮಾಡುವುದರಿಂದ ಉಂಟಾಗುವ ದೈಹಿಕ ಗಾಯಕ್ಕೆ ವಿಮೆಯ ಪರಿಹಾರ ಪಾವತಿಸಲಾಗುವುದಿಲ್ಲ.

ಇದನ್ನೂ ಓದಿ:- ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

Advertisement

ಈ ಪ್ರಕರಣದಲ್ಲಿ ವಿಮೆ ಕಂಪನಿಯು ತನ್ನ ನಿರ್ಧಾರ ವಿಳಂಬವಾದದ್ದಕ್ಕೆ ವಿಷಾದಿಸಿದೆ. ಮೋಟಾರ್ ಇನ್ಶೂರೆನ್ಸ್ ಪಾಲಿಸಿ ನಿಯಮಗಳ ಪ್ರಕಾರ ಈ ಷರತ್ತು ವಿಮೆ ಮಾಡಿದ ವ್ಯಕ್ತಿಯ ಹಳೆಯ ಪಾಲಿಸಿಯ ಭಾಗವಾಗಿದೆ ಮತ್ತು ಈ ನಿಯಮವನ್ನುಅಕ್ಟೋಬರ್ 2020 ರಲ್ಲಿ ತೆಗೆದುಹಾಕಲಾಗಿದೆ ಎಂದು ಕಂಪನಿಯು ಸ್ಪಷ್ಟಪಡಿಸಿದೆ. ಎಚ್‌ಡಿಎಫ್‌ಸಿ, ಇಆರ್‌ಜಿಒ ಕಂಪನಿಗಳು ಕ್ಲೈಮ್ ಮೊತ್ತವನ್ನು ಈಗ ಕುಟುಂಬಕ್ಕೆ ಪಾವತಿಸಲಾಗಿದೆ ಎಂದು ಹೇಳಿವೆ.

ನೀವು ತೆಗೆದುಕೊಳ್ಳುವ ವಿಮೆಯ ಉತ್ತಮ ಮುದ್ರಣಗಳನ್ನು ಓದುವುದು ಸೂಕ್ತ ಏಕೆಂದರೆ ಹಲವಾರು ಕಂಪನಿಗಳು ಈ ಹಳೆಯ ಷರತ್ತನ್ನು ಮುಂದುವರಿಸುತ್ತಿವೆ, ಇದರಲ್ಲಿ ಬೈಕುಗಳು 150 ಸಿಸಿಗಿಂತ ಹೆಚ್ಚಿದ್ದರೆ ವೈಯಕ್ತಿಕ ಅಪಘಾತ ಕ್ಲೇಮ್‌ಗಳಲ್ಲಿ ಯಾವುದೇ ವಿಮಾ ರಕ್ಷಣೆಯನ್ನು ಒದಗಿಸಲಾಗುವುದಿಲ್ಲ ಎಂಬ ಷರತ್ತಿದೆ. ಆದರೆ, ಈ ನಿಯಮವನ್ನು ಅಕ್ಟೋಬರ್‌ 2020ಕ್ಕೆ ರದ್ದು ಮಾಡಲಾಗಿದೆ. ಯಾವುದೇ ರೂಪದಲ್ಲಿ ಅಪಘಾತ ಕವರ್ ತೆಗೆದುಕೊಳ್ಳುವ ಗ್ರಾಹಕರು ತಮ್ಮ ಪಾಲಿಸಿ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಹೊಸ ಪಾಲಿಸಿ ಮಾಡಿಸುವಾಗ ಮತ್ತು ನವೀಕರಣದ ಸಮಯದಲ್ಲಿ ಸೂಕ್ತ ಗಮನಹರಿಸುವ ಅಗತ್ಯವಿದೆ, ಇಲ್ಲವಾದರೆ ಮುದ್ರಣಗಳು ಮೋಸದಾಯಕವಾಗಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next