ಚಿಕ್ಕಬಳ್ಳಾಪುರ: ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿ ಹೋಗುತ್ತಿದ್ದ ಬೈಕ್ ಗಳನ್ನು ಕದ್ದು 150 ರೂ, 2000 ರೂ, ಹೀಗೆ ಮನಸ್ಸಿಗೆ ಬಂದಂತೆ ಮಾರಾಟ ಮಾಡುತ್ತಿದ್ದ ಬೈಕ್ ಕಳ್ಳರನ್ನು ಜಿಲ್ಲೆಯ ಗುಡಿಬಂಡೆ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ನಗರದ ಪೊಲೀಸ್ ಪೇದೆ ಬೈಕ್ ಬೆಂಕಿ ಹಚ್ಚಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ.
ಗುಡಿಬಂಡೆ ಪಟ್ಟಣದಲ್ಲಿ ನರ್ಸರಿಗೆ ಮತ್ತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆ ನಾಗೇಶ್ ಬೈಕ್ ಗೆ ಕಳೆದ ಮಂಗಳವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹೆಚ್ಚಿದ್ದು ಈ ದೂರಿನಲ್ಲಿ ಪರಿಶೀಲಿಸುತ್ತಿದ್ದಾಗ ಪೊಲೀಸರಿಗೆ ಇತಂಹದೊಂದು ಮಾಹಿತಿ ಕಿಡಿಗೇಡಿಗಳಿಂದ ಹೊರಬಿದ್ದಿದೆ.
ಕಿಡಿಗೆಡಿಗಳಾದ ಪಟ್ಟಣದ ಒಂದನೇ ವಾರ್ಡ್ ನ ಉಮೇಶ್ ಮತ್ತು ವೆಂಕಟೇಶ್, ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ತುಮಕೂರು, ಚಿಕ್ಕಬಳ್ಳಾಪುರ ಸೇರಿ ಅನೇಕ ತಾಲ್ಲೂಕುಗಳಲ್ಲಿ ಸುಮಾರು 40 ಕ್ಕು ಹೆಚ್ಚು ಬೈಕ್ ಗಳನ್ನು ಕಳ್ಳತನ ಮಾಡಿ ಗುಡಿಬಂಡೆ ಪಟ್ಟಣದಲ್ಲಿ ಕೇವಲ 150 ರೂ ನಿಂದ 2000 ರೂಗಳಿಗೆ ಮಾತ್ರ ಮಾರಾಟ ಮಾಡಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮಾರಾಟ ಮಾಡಿರುವ ಮಧ್ಯವರ್ತಿಗಳ ಸಹಿತ ಕೊಂಡುಕೊಂಡಿರುವ ವ್ಯಕ್ತಿಗಳನ್ನು ಗುಡಿಬಂಡೆ ಪೊಲೀಸರು ಬಂಧಿಸಿದ್ದಾರೆ.
ಇದುವರೆಗೆ 19 ಬೈಕ್ ಗಳು ಸಿಕ್ಕಿದ್ದು, ಇನ್ನು ಈ ದೂರನ್ನು ಗುಡಿಬಂಡೆ ಪೊಲೀಸರು ಬೇದಿಸುತ್ತಾ ಒಂದೊಂದೆ ಬೈಕ್ ಗಳನ್ನು ಆರೋಪಿಗಳು ನೀಡುತ್ತಿರುವ ಮಾಹಿತಿ ಆಧರಿಸಿ ಮಾರಾಟ ಮಾಡಿರುವ ಬೈಕ್ ಗಳನ್ನು ಹುಡುಕಿ ತರುತ್ತಿದ್ದಾರೆ